ತಲಪಾಡಿ: ಜ.11 ರಂದು ಏಕದಿನ ಸಲಫಿ ಸಮ್ಮೇಳನ

Date:


ಉಳ್ಳಾಲ: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ತಲಪಾಡಿ, ಮಸ್ಜುದುಲ್ ಅಬ್ರಾರ್ ಇದರ ಆಶ್ರಯದಲ್ಲಿ ಏಕದಿನ ಸಲಫಿ ಸಮ್ಮೇಳನ ಮತ್ತು ಎರಡನೇ ಸನದು ದಾನ ಕಾರ್ಯಕ್ರಮ ಜ.11 ರಂದು ಅಬ್ರಾರ್ ನಗರ ತಲಪಾಡಿಯಲ್ಲಿ ನಡೆಯಲಿದ್ದು, ಭಾನುವಾರ ಬೆಳಿಗ್ಗೆ 9:30 ರಿಂದ ರಾತ್ರಿ 10:00 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಎಸ್.ಕೆ.ಎಸ್.ಎಂ ಯೂತ್ ಕಾರ್ಯದರ್ಶಿ ಶಿಹಾಬ್ ತಲಪಾಡಿ ಹೇಳಿದರು.


ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮ ಪ್ರಯುಕ್ತ ಭಾನುವಾರ ಬೆಳಿಗ್ಗೆ 9.30 ಕ್ಕೆ ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ತಲಪಾಡಿ ಘಟಕದ ಅಧೀನದ ದಾರುಲ್ ಉಲೂಮ್ ಮಹಿಳಾ ಕಾಲೇಜು ವಿದ್ಯಾರ್ಥಿಗಳ ಮಹಿಳಾ ಸಮಾವೇಶ,ಎರಡನೇ ಸನದುದಾನ, ಅಸರ್ ನಮಾಝ್ ಬಳಿಕ ದ ಅವಾ ಸಮಾವೇಶ, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ಶೇಖ್ ಸುಲ್ತಾನ್ ಸಯೀದ್ ಬಿಲಾಲ್, ಮೌಲವಿ ಅನ್ಸಾರ್ ನನ್ಮಂಡ, ಮೌಲವಿ ಮುನೀರ್ ಮದನಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಅಬ್ರಾರ್ ಮಸೀದಿ ಉಪಾಧ್ಯಕ್ಷ ಹಮ್ಮದ್ ಕೆ.ಸಿ ರೋಡ್, ಕಾರ್ಯದರ್ಶಿ ಹುಸೈನ್ ಯಾನೆ ಐಸನ್ ಸಮಿತಿ ಸದಸ್ಯ ರಾದ ಇಬ್ರಾಹಿಂ ಮಾಡೂರು , ಅಬೂಬಕ್ಕರ್ ಕೊಲಂಗರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...