ಸಜಿಪ: ಕ್ರಿಕೆಟ್ ಸಜೀಪ ವಾಟ್ಸಾಪ್ ಯುವಕರ ಬಳಗದ ವತಿಯಿಂದ 2 ನೇ ವರ್ಷದ ಇಫ್ತಾರ್ ಕಾರ್ಯಕ್ರಮವು ಇತ್ತೀಚೆಗೆ ಮರಣಹೊಂದಿದ ಮರ್ಹೂಂ ಅರ್ಫಝ್ ಮತ್ತು ರಿಝ್ವಾನ್ ಬೊಳಮೆ ರವರ ಸ್ಮರಣಾರ್ಥವಾಗಿ ಸಜೀಪನಡು ಬಸ್ ಸ್ಟಾಂಡ್ ಬಳಿಯ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಜೀಪ ನಡು ಗ್ರಾಮದಲ್ಲಿ ಕ್ರಿಕೆಟ್ ಮಾತ್ರವಲ್ಲದೆ ಜನರ ಸೇವೆಗಳನ್ನು ಮಾಡುತ್ತಾ ಬರುತ್ತಿರುವ ಯುವಕರ ಬಳಗವು ಕಳೆದ ಕೆಲವು ವರ್ಷಗಳಿಂದೀಚೆಗೆ ತನ್ನ ಜೀವನಾಂಶದಿಂದ ಉಳಿತಾಯವಾದ ವರಮಾನದಿಂದ ಗ್ರಾಮದ ಬಡವರ, ರೋಗಿಗಳ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು ಕಳೆದ ವರ್ಷದಿಂದ ಪವಿತ್ರ ರಂಝಾನ್ ತಿಂಗಳಿನಲ್ಲಿ ಗ್ರಾಮದ ಪ್ರತಿಯೊಂದು ಮನೆಯ ಸದಸ್ಯರನ್ನೊಗೊಂಡು ಸಾಮೂಹಿಕ ಸಾರ್ವಜನಿಕ ಇಫ್ತಾರ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವುದೆಂದು ತೀರ್ಮಾನಿಸಿ ಕಳೆದ ವರ್ಷವೂ ಯಶಸ್ವಿಯಾಗಿ ಇಫ್ತಾರ್ ಕಾರ್ಯಕ್ರಮವನ್ನು ನಡೆಸಿದರ ಕಾರಣದಿಂದ ಈ ಬಾರಿಯೂ ರಂಝಾನ್ ತಿಳಿಂಗಳಿನಲ್ಲಿ ಇಫ್ತಾರ್ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿತು.

ಕೇಳಿದ ಕೆಲವು ತಿಂಗಳುಗಳ ಮುಂಚೆ ತಮ್ಮೊಟ್ಟಿಗೆ ಗ್ರಾಮದ ಎಲ್ಲ ಸ್ಥರದ ಜನರ ಆಶೋತ್ತರಗಳಿಗೆ ಸ್ಪಂದನೆ ನೀಡುತ್ತಿದ್ದ ಕ್ರಿಕೆಟ್ ಸಜೀಪ ವಾಟ್ಸಾಪ್ ಬಳಗದ ಸದಸ್ಯರಾಗಿದ್ದ ಅರ್ಫಾಝ್ ಮತ್ತು ರಿಝ್ವಾನ್ ಬೊಳಮೆ ರವರು ಮರಣ ಹೊಂದಿದ ಕಾರಣ ಈ ಬಾರಿಯ ಇಫ್ತಾರ್ ಕಾರ್ಯಕ್ರಮದಲ್ಲಿ ಅವರನ್ನು ನೆನಪಿಸುವ ಉದ್ದೇಶದಿಂದ ಅವರ ಸ್ಮರಣಾರ್ಥನೆ ಎಂಬ ಧ್ಯೇಯ ವಾಕ್ಯದಡಿ ಇಫ್ತಾರ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕ್ರಿಕೆಟ್ ಸಜೀಪ ಬಳಗವು ನಡೆಸಿತು.
ಸಜೀಪ ನಡುವಿನ ಸುಮಾರು ಸಾವಿರಕ್ಕಿಂತಲೂ ಅಧಿಕ ವಿಶ್ವಾಸಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಫ್ತಾರ್ ನಡೆಸಿ ಕಾರ್ಯಕ್ರಮದ ಸಂಘಟಕರನ್ನು ಪ್ರಶಂಸಿಸಿ ಮುಂದಿನ ಎಲ್ಲಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಯಲಿ ಎಂಬ ದುವಾ ಆಶೀರ್ವಚನವನ್ನು ನೀಡಿದರು. ಇದರಲ್ಲಿ ವಿಶೇಷವಾಗಿ ಸ್ಥಳೀಯ ಧಾರ್ಮಿಕ, ರಾಜಕೀಯ, ಸಾಮಾಜಿಕ ನಾಯಕರು, ಯುವಕರು ಮತ್ತು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.



