ತೊಕ್ಕೊಟ್ಟು: ವಿದ್ಯುತ್ ಆಘಾತಕ್ಕೊಳಗಾಗಿ ಯುವಕ ದಾರುಣ ಸಾವು.

Date:

ತೊಕ್ಕೊಟ್ಟಿನ ಹೃದಯಭಾಗದಲ್ಲಿ ವಸ್ತ್ರಮಳಿಗೆ ತೆರೆಯುವ ಬಿಝಿಯಲ್ಲಿದ್ದ ಯುವಕ. ಮಳಿಗೆಯ ಒಳ ವಿನ್ಯಾಸ ಕಾಮಗಾರಿ ವೇಳೆ ದುರ್ಘಟನೆ.

ಉಳ್ಳಾಲ: ಫೆ-23ನೂತನ ವಸ್ತ್ರಮಳಿಗೆಯೊಂದನ್ನ ತೆರೆಯುವ ಸಂಭ್ರಮದಲ್ಲಿದ್ದ ಯುವಕನೋರ್ವ ಅದೇ ಮಳಿಗೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತ ಪಟ್ಟಿರುವ ದಾರುಣ ಘಟನೆ ತೊಕ್ಕೊಟ್ಟುವಿನ ಹೃದಯಭಾಗದಲ್ಲಿ ನಡೆದಿದೆ. ಮೂಲತ: ಪಜೀರು ಬೆಂಗೋಡಿ ಪದವು ನಿವಾಸಿ,ಸದ್ರಿ ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಸಲ್ಮಾನ್ ಫಾರಿಶ್(20) ಮೃತ ಯುವಕ.

ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ವಾಣಿಜ್ಯ ಮಳಿಗೆಯಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ(ಝೀರೋ) ವಸ್ತ್ರ ಮಳಿಗೆಯೊಂದು ಇದೇ ಶುಕ್ರವಾರ ಶುಭಾರಂಭಗೊಳ್ಳಲಿದ್ದು, ಆ ನಿಟ್ಟಿನಲ್ಲಿ ನೂತನ ಮಳಿಗೆಯ ಒಳ ವಿನ್ಯಾಸ ಕಾಮಗಾರಿ ನಡೆಯುತ್ತಿತ್ತು. ಭಾನುವಾರ ರಾತ್ರಿಯೂ ಮಳಿಗೆಯ ಒಳಗಡೆ ಇಲೆಕ್ಟ್ರ್ರೀಷಿಯನ್ ಕೆಲಸ ಭರದಲ್ಲಿ ನಡೆಯುತ್ತಿತ್ತು. ಭಾನುವಾರ ನಡುರಾತ್ರಿ ಸುಮಾರು 1.30 ಘಂಟೆ ವೇಳೆ ಸಲ್ಮಾನ್ ಗೆ ವಿದ್ಯುತ್ ಆಘಾತವಾಗಿದ್ದು, ಮಳಿಗೆಯೊಳಗಿದ್ದ ಕಾರ್ಮಿಕರು ಕೂಡಲೇ ಆತನನ್ನ ಆಟೋ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಸಹ ಆಸ್ಪತ್ರೆ ದಾರಿಯಲ್ಲಿ ಸಲ್ಮಾನ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮದೀನಾ: ನ್ಯೂ ವೆಲ್ಫೇರ್ ಇಫ್ತಾರ್ ಕೂಟ ಫೆ.27ರಂದು

ಮದೀನಾ: ನ್ಯೂ ವೆಲ್ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ವತಿಯಿಂದ ಇಫ್ತಾರ್...

ಯುವವಾಹಿನಿ ಮೂಡಬಿದಿರೆ ಘಟಕದ ನೂತನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಆಯ್ಕೆ

ಮೂಡುಬಿದಿರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ನೂತನ...

ಮೂಡುಮಾನಾ೯ಡು ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

ಮೂಡಬಿದಿರೆ: ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡು ಮಾರ್ನಾಡುವಿನಲ್ಲಿ ಮೆಟ್ರಿಕ್...

ಮೂಡಬಿದಿರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಉದ್ಘಾಟನೆ

ಮೂಡಬಿದಿರೆ: ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಮತ್ತು ನೆರವು ನೀಡುವುದು ಕಾನೂನು...