
ಉಳ್ಳಾಲ. ಕಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ದಕ್ಷಿಣ ವಲಯ ಹಾಗೂ ಪೆರ್ಮನ್ನೂರು ಘಟಕ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು, ಎಸ್.ಎಸ್ ವಿ.ಪಿ ಯೂತ್ ವಿಂಗ್, ಲಯನ್ಸ್ ಮತ್ತು ಲಿಯೋ ಕ್ಲಬ್ ಸಹಭಾಗಿತ್ವ ದಲ್ಲಿ ರಕ್ತದಾನ ಶಿಬಿರ ತೊಕ್ಕೋಟ್ಟು ಸೆಂಟ್ ಸೆಬಾಸ್ಟಿಯನ್ ಶಾಲಾ ವಠಾರದಲ್ಲಿ ನಡೆಯಿತು.

ಪೆರ್ಮನ್ನೂರು ಸೆಂಟ್ ಸೆಬಾಸ್ಟಿಯನ್ ಚಚ್೯ ನ ಧರ್ಮಗುರು ಸಿಪ್ರಿಯಾನ್ ಪಿಂಟೋ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ದಾನದಲ್ಲಿ ಮಹಾ ದಾನ ರಕ್ತದಾನ. ರಕ್ತದಾನ ಮಾಡುವ ಮೂಲಕ ನಮ್ಮ ಅರೋಗ್ಯ ವೃದಿಸುದರ ಜೊತೆಗೆ ಹಲವು ಜೀವಗಳನ್ನು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ರಕ್ತದಾನ ಮಾಡುವ ಮೂಲಕ ಇತರಿಗೆ ಮಾದರಿಯಾಗಬೇಕು ಎಂದು ಹೇಳಿದರು.

ಕ್ರೈಸ್ತ ಒಕ್ಕೂಟ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪನೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಳೆದ ಐದಾರು ವರ್ಷಗಳಿಂದ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ದಕ್ಷಿಣ ವಲಯದ ರಕ್ತನಿಧಿ ವಿಭಾಗವು ರಕ್ತದ ಮಹತ್ವವನ್ನು ಅರಿತು ನಿರಂತರವಾಗಿ ರಕ್ತದಾನಶಿಬಿರ ಅಯೋಜಿಸುವ ಮೂಲಕ ರೋಗಿಗಳಿಗೆ ಕ್ಲಪ್ತ ಸಮಯದಲ್ಲಿ ರಕ್ತ ಪೂರೈಸುವಲ್ಲಿ ಯಶಸ್ವಿಯಾಗಿ ಎಂದು ಹೇಳಿದರು.
ಪೆರ್ಮನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಸಿಸಿಲಿಯಾ ಮೊಂತೆರೊ ಪ್ರಾಸ್ತಾವಿಕಮತುಗನ್ನಾಡಿದರು.

ಕಥೋಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ದಕ್ಷಿಣ ವಲಯ ಅಧ್ಯಕ್ಷ ಡೊಲ್ಪಿ ಡಿಸೋಜ, ಕಾರ್ಯದರ್ಶಿಗಳಾದ ಟ್ರಸ್ಸಿ ರೊಡ್ರಿಗಸ್, ಉರ್ಬನ್ ಫೆರಾವೊ, ಲಿಯೋ ಕ್ಲಬ್ ಅಧ್ಯಕ್ಷ ಮೆಲಸ್ಟನ್ ಲೋಬೋ, ಎಸ್ ಎಸ್ ವಿಪಿ ಯೂತ್ ಅಧ್ಯಕ್ಷ ವಿಶ್ರಾತ್ ಡೆಸಾ, ಚಚ್೯ ಪಾಲನ ಸಮಿತಿ ಉಪಾಧ್ಯಕ್ಷ ಅರುಣ್ ಡಿಸೋಜ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಡಾ. ಅಭಯ ನಾಯಕ್,
ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಪೆರ್ಮನ್ನೂರು ಅಧ್ಯಕ್ಷ ಮೆಲ್ವಿನ್ ಸಿ. ಸೋಜಾ ಉಪಸ್ಥಿತರಿದ್ದರು.