
ಉಳ್ಳಾಲ: ಉಳ್ಳಾಲ ಬ್ಲಾಕ್ ಕಾಂಗ್ರೆಸ್, ಮುಡಿಪು ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ವತಿಯಿಂದ
ಸ್ಪೀಕರ್ ಯು.ಟಿ ಖಾದರ್ ಹುಟ್ಟು ಹಬ್ಬದ ಪ್ರಯುಕ್ತ ಸೋಮೇಶ್ವರ ದೇವಸ್ಥಾನ, ಉಳ್ಳಾಲ ದರ್ಗಾ, ಸಬೆಸ್ಟಿಯನ್ ಚರ್ಚಿನಲ್ಲಿ
ಆರೋಗ್ಯ, ಆಯುಷ್ಯ, ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ ಸಭಾಧ್ಯಕ್ಷ ಯು.ಟಿ ಖಾದರ್ ರಾಷ್ಟ್ರ ಮಟ್ಟದಲ್ಲಿ ಬೆಳೆದು ಈ ಭಾಗದ ಶಾಶ್ವತ ಶಾಸಕರಾಗಲಿ ಮತ್ತು ದೇವರು ಅವರಿಗೆ ಆರೋಗ್ಯ ಆಯುಷ್ಯ ಹಾಗೂ ರಾಜಕೀಯವಾಗಿ ಮುಂದು ಬರಲಿ ಎಂದು ಹೇಳಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಉತ್ತಮವಾದ ಹುದ್ದೆ ಸಿಗಲಿ ಈ ಕ್ಷೇತ್ರದ ಮತ್ತು ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಹೇಳಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಚಂದ್ರಿಕಾ ರೈ, ನಗರ ಕಾಂಗ್ರಸ್ ಅಧ್ಯಕ್ಷೆ ಅಮಿತಾ ಆಶ್ವಿನ್, ಶಾಲಿನಿ ಶೆಟ್ಟಿ, ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ, ಉಸ್ಮಾನ್ ಕಲ್ಲಾಪು, ಮೌರೀಸ್ ಮೊಂತೆರೋ ಶುಭ ಹಾರೈಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಪಿಲಾರ್, ಸೋಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ದೀಪಕ್ ಪಿಲಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮನ್ಸೂರ್ ಮಂಚಿಲ, ರೇವತಿ ಕುಂಪಲ, ಲತಾ ತಲಪಾಡಿ, ಧನು ಕೊಲ್ಯ, ಮುಸ್ತಫ ಅಬ್ದುಲ್ಲ, ಸಾಜಿದ್ ಕುಂಪಲ, ನೋವಿತ ಗಟ್ಟಿ, ರಾಜು ಬಂಡಸಾಲೆ, ಝಿಯಾದ್ ಮುಕ್ಕಚ್ಚೇರಿ, ಪ್ರಕಾಶ್ ಪಿಂಟೋ, ಅಶ್ರಫ್ ಉಳ್ಳಾಲ, ಪ್ರೇಮ್ ಕೊಲ್ಯ, ದಿಲೀಪ್ ರೇಗೋ, ರಿಚರ್ಡ್, ರಾಮಚಾರಿ, ರವಿರಾಜ್ ಶೆಟ್ಟಿ ದೇರಳೆಕಟ್ಟೆ, ನಾಗೇಶ್ ತೊಕ್ಕೋಟ್ಟು,ಜಸಿಂತಾ ಕುತ್ತಾರ್, ಯು.ಟಿಕೆ ಫ್ಯಾನ್ಸ್ ಅಧ್ಯಕ್ಷ ಮೊಯಿದಿನ್, ಯುಟಿಎಸ್ ಸೋಶಿಯಲ್ ಕ್ಲಬ್ ಅಧ್ಯಕ್ಷ ನಝೀರ್ ಬಾರ್ಲಿ ಮೊದಲಾದವರು ಉಪಸ್ಥಿತರಿದ್ದರು.






