ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇದರ ನಾಡು ನುಡಿ ವೈಭವದ ರತ್ನೋತ್ಸವ-2025

Date:

ಉಳ್ಳಾಲ: ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇದರ ನಾಡು ನುಡಿ ವೈಭವದ ರತ್ನೋತ್ಸವ-2025 ಡಿ.20 ಶನಿವಾರ ನಡೆಯಲಿದೆ. ಬೆಳಿಗ್ಗೆ 9.00 ಗಂಟೆಗೆ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿಗಳು, ವಿಶ್ರಾಂತ ಪ್ರಾಧ್ಯಪಕರಾದ ಡಾ. ನರೇಂದ್ರ ರೈ ದೇರ್ಲ ರವರನ್ನು ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಬೆಳ್ಳ ಪಂಚಾಯತ್ ವಠಾರದಿಂದ ಪೂರ್ಣ ಕುಂಭ ಕಲಸ,ಚೆಂಡೆ ವಾದನ, ಕೊಂಬು ಕಹಳೆ, ವೀರಗಾಸೆ, ಕಂಸಾಲೆ, ಹಾಲಕ್ಕಿ, ಹುಲಿವೇಷ, ಪೂಜಾ ಕುಣಿತ, ಬಣ್ಣದ ಕೊಡೆ, ಸೌಟ್, ಗೈಡ್ಸ್ ವಿದ್ಯಾರ್ಥಿಗಳ ಜೊತೆಗೆ ಮೆರವಣಿಗೆಯೊಂದಿಗೆ ದೇರಳಕಟ್ಟೆ ಗ್ರೀನ್ ಗೌಂಡ್ ಗೆ ಕರೆತರಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ತಿಳಿಸಿದ್ದಾರೆ.

ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ರತ್ನ ಎಜುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ರತ್ನವತಿ ಶೆಟ್ಟಿ ಧ್ವಜಾರೋಹಣ ಮಾಡಿ, ಮಂಗಳೂರು ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪಿ. ಶ್ರೀನಾಥ್, ಉಳ್ಳಾಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬೆಳ್ಳಿಗ್ಗೆ 10.30 ಗಂಟೆಗೆ ಜಾನಪದ ನಲಿಕೆ, ದಫ್ ಪ್ರದರ್ಶನ ನಡೆಯಲಿದ್ದು ಬೆಳಿಗ್ಗೆ 11.00 ಗಂಟೆಗೆ ಕನ್ನಡ ಮನಸ್ಸು, ಜಾಗೃತಿ ಗೋಷ್ಠಿ ನಡೆಯಲಿದ್ದು ಕನ್ನಡ ನಾಡಿನ ಪರಂಪರೆ ಬಗ್ಗೆ ಸಾಯಿಸುಮ ನಾವಡ ಕನ್ನಡ ಭಾಷೆಯ ಭವಿಷ್ಯದ ಬಗ್ಗೆ ಪ್ರಶಾಂತಿ ಶೆಟ್ಟಿ ಇರುವೈಲು, ಕನ್ನಡ ಸಂಸ್ಕೃತಿಯ ಆದರ್ಶದ ಬಗ್ಗೆ ಡಾ. ಪ್ರಭಾತ್ ನಲ್ನಾಡ್ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 12.30 ಗಂಟೆಗೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಲಿದೆ. ಮದ್ಯಾಹ್ನ 2.00 ಗಂಟೆಗೆ ಹೃದಯ ಕವಿ ಮನ್ಸೂರ್ ಮುಲ್ಕಿರವರ ಅಧ್ಯಕ್ಷತೆಯಲ್ಲಿ ಬಾಲಕೃಷ್ಣ ಬೆರಿಕೆ, ವಾಣಿ ಲೋಕಯ್ಯ, ಲಕ್ಷ್ಮೀ ವಿ ಭಟ್ ಮಂಜೇಶ್ವರ, ಅನ್ನಪೂರ್ಣ ಕುತ್ತಾಜೆ, ಶ್ರೀ ಸಲೀಂ ಸುಳ್ಯ ವಿಗಳಿಂದ ಬಹು ಭಾಷ ಕವಿಗೋಷ್ಠಿ ನಡೆಯಲಿದೆ.

ಅಪರಾಹ್ನ 3.30 ಗಂಟೆಗೆ ವಿದ್ಯಾರತ್ನ ಶಾಲಾ ವಿದ್ಯಾರ್ಥಿಗಳಿಂದ ಅಶ್ವತ್ ಮಂಜನಾಡಿ ನಿರ್ದೇಶನ ಮಾಡಿದ ‘ಶರಣ ರತ್ನ’ ಎಂಬ ಯಕ್ಷಗಾನ ನಡೆಯಲಿದೆ. ಸಂಜೆ 4.30 ಗಂಟೆಗೆ ನಡೆಯಲಿರುವ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಪ್ರತಿಷ್ಠಿತ ‘ವಿದ್ಯಾರತ್ನ’ ಪ್ರಶಸ್ತಿ ಪ್ರಧಾನ ನಡೆಯಲಿದೆ. ಪ್ರತಿಷ್ಠಿತ ವಿದ್ಯಾರತ್ನ ಪ್ರಶಸ್ತಿಯನ್ನು ಸಮ್ಮೇಳನ ಅಧ್ಯಕ್ಷರಾದ ನರೇಂದ್ರ ರೈ ದೇರ್ಲ, ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಡಾ. ಯು.ಟಿ.ಖಾದ‌ರ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ.ಎಸ್ ಗಟ್ಟಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೆಶಕರಾದ ಕೆ.ಟಿ.ಸುವರ್ಣ, ಮುಂತಾದ ಗಣ್ಯರ ಸಮಕ್ಷಮದಲ್ಲಿ ಯಕ್ಷಧ್ರುವ ಪಟ್ಲ ಪೌಂಡೇಶನ್ ಇದರ ಸಂಸ್ಥಾಪಕರಾದ ಯಕ್ಷಧ್ರುವ ಪಟ್ಲ ಗುತ್ತು ಸತೀಶ್ ಶೆಟ್ಟಿಯವರಿಗೆ ನೀಡಲಾಗುವುದು ಬಳಿಕ ಸಂಜೆ 6.00 ಗಂಟೆಗೆ ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ರವರಿಂದ ಮಸ್ತ್ ಮ್ಯಾಜಿಕ್ ನಡೆಯಲಿರುವುದು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು ಎಂದರು.
ಸೌಮ್ಯ ಆ‌ರ್.ಶೆಟ್ಟಿ, ನಯೀಮ್ ಹಮೀದ್, ರವಿ ಕುಮಾರ್ ಕೋಡಿ, ಭವಿತ್ ಸುವರ್ಣ ಉಪಸ್ಥಿತರಿದ್ದರು.

ವಿದ್ಯಾರತ್ನ ಇಂಗ್ಲಿಷ್ ಮೀಡಿಯಂ ಶಾಲೆಯ ಬೆಳ್ಳಿ ಹಬ್ಬ ಸಂಭ್ರಮ

ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ ಇದರ 25ನೇ ವರ್ಷದ ಬೆಳ್ಳಿ ಹಬ್ಬ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ. 21 ರ ಭಾನುವಾರದಂದು ದೇರಳಕಟ್ಟೆಯ ಗ್ರೀನ್ ಗ್ರೌಂಡ್‌ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಮಧ್ಯಾಹ್ನ 2.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶೀರ್ವಚನವನ್ನು ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೇವೂರು, ಉಪ್ಪಳದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನೆರವೇರಿಸಲಿದ್ದು ನಾಟೆಕಲ್ (ಮದನಿ ಬೊಳಂಗಡಿ) ಖತೀಬ್ ಸಯ್ಯಿದ್ ಯಹ್ಯಾ ತಂಗಳ್ ಉಪಸ್ಥಿತರಿರುವರು.
ಸಂಜೆ 5.00 ಗಂಟೆಗೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನ, ಒಡಿಯೂರಿನ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಮೊನಪ್ಪ ಭಂಡಾರಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭಾಗವಹಿಸಲಿದ್ದಾರೆ

ಸಂಜೆ 6.30 ರಿಂದ ರಾತ್ರಿ 10.00 ಗಂಟೆಯವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...