ಪಪೂ 105 ವಿಮುಕ್ತಮತಿ ಮಾತಾಜಿ ಹಾಗೂ ಕ್ಷುಲ್ಲಿಕಾ ವಿಶಾಲಮತಿ ಮಾತಾಜಿ ಮೂಡಬಿದಿರೆಗೆ ಪುರಪ್ರವೇಶ.

Date:

ಮೂಡುಬಿದಿರೆ: ಆಚಾರ್ಯ ಚಾಣಿವಾಲೆ ಶಾಂತಿಸಾಗರ ಮುನಿರಾಜರ ಪರಂಪರೆಯ ಅಯಿಕಾ ವಿಪುಲಾಮತಿ ಮಾತಾಜಿ, ಪ.ಪೂ. 105 ವಿಮುಕ್ತಮತಿ ಮಾತಾಜಿ ಹಾಗೂ ಕ್ಷುಲ್ಲಿಕಾ ವಿಶಾಲಮತಿ ಮಾತಾಜಿ ಮೂಡುಬಿದಿರೆಗೆ ಗುರುವಾರ ಪುರಪ್ರವೇಶಗೈದರು.

ಅಲಂಗಾರು ಬಳಿಯಿಂದ ಪುರಪ್ರವೇಶ ಆರಂಭಗೊಂಡು, ಮೂಡುಬಿದಿರೆ ಜೈನ ಕಾಶಿಯ ಹದಿನೆಂಟು ಬಸದಿ ಶ್ರೀಮಠಕ್ಕೆ ಭಕ್ತಿಪೂರ್ವಕವಾಗಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪರಮಾಗಮಗಳಾದ ಧವಳತ್ರಯ ಗ್ರಂಥಗಳ ದರ್ಶನವನ್ನು ಮಾತಾಜಿಗಳು ನಡೆಸಿದರು. ಅಲಂಗಾರು ಬಡಗ ಬಸದಿ ಬಳಿ ಶ್ರಾವಕ-ಶ್ರಾವಕಿಯರು ಭಾವದಿಂದ ಮಾತಾಜಿ ಸಂಘಕ್ಕೆ ಸ್ವಾಗತ ಕೋರಿದರು.

ಬಳಿಕ ಶ್ರೀ ದಿಗಂಬರ ಜೈನ ಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ, ಕುಷ್ಮಾಂಡಿನೀ ದೇವಿಗೆ ವಿಶೇಷ ಪೂಜೆ ಹಾಗೂ ಪದ್ಮಾವತಿ ದೇವಿಗೆ ಶೋಡ ಶೋಪಚಾರ ಪೂಜೆ ನೆರವೇರಿಸಲಾಯಿತು. ಸಾಯಂಕಾಲ ರೋಹಿಣಿ ವ್ರತ ನಿರತ ಮಾತಾಜಿ ಸಂಘವು ವೇಣೂರು ದಿಕ್ಕಿಗೆ ವಿಹಾರ ಕೈಗೊಂಡಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...