

ಕೊಣಾಜೆ: ತರವಾಡು ಮನೆಗಳು ದೈವಾರಾಧನೆಯ ಕಾರ್ಯಕ್ರಮದೊಂದಿಗೆ ತಮ್ಮ ಕುಟುಂಬದ ಮಕ್ಕಳಿಗೆ, ಕುಟುಂಬದ ಸದಸ್ಯರಿಗೆ ತುಳುನಾಡಿನ ಸಂಸ್ಕ್ರತಿ, ಆಚರಣೆ ಹಾಗೂ ಕೃಷಿ ಪರಂಪರೆಯ ಮಹತ್ವವನ್ನು ತಿಳಿಯ ಪಡಿಸುವ ಕಾರ್ಯ ಮಾಡಬೇಕಿದೆ ಎಂದು ಕುಲಾಲ ಸಮಾಜದ ಮುಖಂಡರಾದ ತಾರನಾಥ ಬಿ.ಸಿ.ರೋಡ್ ಅವರು ಹೇಳಿದರು.
ಕುಲಾಲ ಬಂಗೇರ ಕುಟುಂಬಸ್ಥರು ಕೊಣಾಜೆ ಬೆಳ್ಮದ ತರವಾಡು ಮನೆಯಲ್ಲಿ ಭಾನುವಾರ ಬಂಗೇರ ಕುಟುಂಬಸ್ಥರಿಗಾಗಿ ಎರ್ಪಡಿಸಲಾಗಿದ್ದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕುಲಾಲ ಬಂಗೇರ ತರವಾಡು ಮನೆಯ ಕುಟುಂಬಸ್ಥರು ಕೆಸರುಗದ್ದೆ ಕ್ರೀಡಾ ಕೂಟ ಹಾಗೂ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಪರಚಯಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮವನ್ನು ಕುಟುಂಬದ ಗುರಿಕಾರ ಹರೀಶ್ ಕೊಡ್ಡೆ ಉದ್ಘಾಟಿಸಿ ಮಾತನಾಡಿದರು.
ಕುಟುಂಬದ ಹಿರಿಯ ಸದಸ್ಯರಾದ ರಾಘವ್ ವಿಟ್ಲ, ಪದ್ಮನಾಭ ಉರ್ವ, ಸೋಮನಾಥ ವರ್ಕಡಿ, ದೇಜಪ್ಪ ಬಸ್ರಾ, ರಮನಾಥ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು ಉಪಾಧ್ಯಕ್ಷರಾದ ನವೀನ್ ಸ್ವಾಗತಿಸಿ, ಅಕ್ಷಯ್ ವಂದಿಸಿದರು. ಕಾರ್ಯದರ್ಶಿ ರವೀನಾ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಕೆಸರು ಗದ್ದೆ ಕ್ರೀಡಾಕೂಟ ಗಳನ್ನು ಏರ್ಪಡಿಸಲಾಗಿತ್ತು.