
ಉಳ್ಳಾಲ: ಮದನಿ ಅಲುಮ್ನಿ ಅಸೋಸಿಯೇಷನ್ ,ಅಳೇಕಲ, ಉಳ್ಳಾಲ ಇದರ ಉಪಾಧ್ಯಕ್ಷ ರಾದ ದಿನೇಶ್ ಶೆಟ್ಟಿಯವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಹೆಚ್ಚಿನ ಹೊಣೆಗಾರಿಕೆ ಕೊಡಲಾಯಿತು ಇವರು ಶಿಕ್ಷಣ ಸಂಸ್ಥೆ, ಸಂಘ- ಸಂಸ್ಥೆ, ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಉತ್ತಮ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೆಯೇ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಕ್ರೀಡಾ ಸಂಘಟಕರಾಗಿಯೂ,
ಧಾರ್ಮಿಕ ಕ್ಷೇತ್ರದ್ಲಲೂ ಸೇವೆಯನ್ನು ಮಾಡುತ್ತಿದ್ದಾರೆ, ಇವರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನ ಅಸಂಘಟಿತ ಕಾರ್ಮಿಕ ವಲಯದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಪ್ರಸ್ತುತ ಎ. ಜೆ. ದಂತ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


