
ವಿಟ್ಲ: ಕೊರೋನಾ ಸಂದರ್ಭದಲ್ಲಿ ತುರ್ತು ಸೇವೆಯ ಉದ್ದೇಶದಲ್ಲಿ ಅಸ್ತಿತ್ವಕ್ಕೆ ಬಂದ ವಿಟ್ಲ ಖಿದ್ಮತ್ ಫೌಂಡೇಶನ್ ಕಳೆದ ಐದು ವರ್ಷಗಳಿಂದ ಅಸಾಯಕ ಬಡ ಕುಟುಂಬದ ಕಷ್ಟಗಳಿಗೆ ನೆರವಾಗುವ ಮೂಲಕ ಅವರ ಕಣ್ಣೀರು ಒರೆಸುವ ಕಾರುಣ್ಯ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಮಾರಕ ರೋಗಕ್ಕೆ ತುತ್ತಾದ ಬಡ ಕುಟುಂಬಗಳ ಚಿಕಿತ್ಸೆಗೆ ಸಹಾಯ, ಮಾಸಿಕ ಸಹಾಯ ಧನ, ವಿಧವಾ ಸಹಾಯಧನ, ಮಾಸಿಕ ರೇಶನ್ ಕಿಟ್ ವಿತರಣೆ ,ಮನೆ ದುರಸ್ತಿ, ರೋಗಿಗಳಿಗೆ ವೀಲ್ ಚಯರ್, ವಾಟರ್ ಬೆಡ್ ,ಆಕ್ಸಿಜನ್ ಕಿಟ್ ವಿತರಣೆ , ರಂಜಾನ್ ಕಿಟ್, ತುರ್ತು ಆಪರೇಷನ್ ಗೆ ಸಹಾಯ ಮೊದಲಾದವುಗಳ ಮೂಲಕ ನೊಂದ ಅಸಾಯಕ ಕುಟುಂಬದ ಆಸರೆಯಾಗಿ ಸಾಂತ್ವನ ನೀಡಿದೆ.ಚಾರಿಟಿಯ ಸೇವೆಯು ಎಲ್ಲಾ ಸಮುದಾಯದ ಬಡ ಕುಟುಂಬಗಳಿಗೆ ತಲುಪುತಿದ್ದು ಯಾವುದೇ ಮಾಧ್ಯಮಗಳ ಪ್ರಚಾರ ಪ್ರಕಟಣೆಗಳಿಲ್ಲದೆ, ಫಲಾನುಭವಿಗಳ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿದೆ.ಇದೀಗ ಚಾರಿಟಿಗೆ ಐದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದಿನಾಂಕ 12/10/2025 ಆದಿತ್ಯವಾರ ಸಂಜೆ 4 ಗಂಟೆ ವಿಟ್ಲ ಸ್ಪೈಸಿ ಹೋಟೆಲ್ ನಲ್ಲಿ ವಾರ್ಷಿಕ ಸಂಗಮ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ಚಾರಿಟಿ ಗೌರವಾಧ್ಯಕ್ಷ ಶೈಖುನಾ ವಾಲೆಮಂಡೊವು ಉಸ್ತಾದ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು ಮುಖ್ಯ ಸಂಪನ್ಮೂಲ ಅತಿಥಿಯಾಗಿ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ ಬಶೀರ್ ಹಾಸನ ಭಾಗವಹಿಸಿ ಆರೋಗ್ಯ ರಕ್ಷಣೆ ಯ ಬಗ್ಗೆ ಮಾಹಿತಿ ನೀಡಲಿದ್ದಾರೆ . ವಾರ್ಷಿಕ ಸಂಗಮದಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಮುಂದಾಳುಗಳು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಎಂದು ಸಮಿತಿಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಹಮೀದ್ ಕೊಡಂಗಾಯಿ ಮತ್ತು ಪ್ರಧಾನ ಕಾರ್ಯದರ್ಶಿ ಸಲೀಂ ಹಾಜಿ ಬೈರಿಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


