ಡಿ.25,26 ಆಳ್ವಾಸ್ ನಲ್ಲಿ ನೀನಾಸಂ ನಾಟಕಗಳು

Date:

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಡಿ.25 ಮತ್ತು 26 ರಂದು ನೀನಾಸಂ ತಿರುಗಾಟದ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ಡಿ.25 ಗುರುವಾರದಂದು ಖ್ಯಾತ ಲೇಖಕಿ ಬಾನು ಮುಷ್ತಾಕ್ ರವರ ಕತೆಯಾಧಾರಿಸಿ ಡಾ.ಎಂ.ಗಣೇಶ್ ನಿರ್ದೇಶಿಸಿದ ಹೃದಯದ ತೀರ್ಪು ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಡಿ.26 ಶುಕ್ರವಾರದಂದು ಮಲೆಯಾಳ ಮೂಲ ಜಿ. ಶಂಕರ್ ಪಿಳ್ಳೈ ರಚಿಸಿದ , ಡಾ.ನಾ.ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿ, ಶಂಕರ್ ವೆಂಕಟೇಶ್ವರ್ ನಿರ್ದೇಶಿಸಿದ ಅವತರಣಮ್ ಭ್ರಾಂತಾಲಯಮ್ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.


ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ. ಪ್ರತಿದಿನ ಸಂಜೆ 6.45 ಕ್ಕೆ ಸರಿಯಾಗಿ ಆರಂಭವಾಗಲಿರುವ ನಾಟಕಕ್ಕೆ ಪ್ರವೇಶ ಉಚಿತವಾಗಿದ್ದು ಹತ್ತು ನಿಮಿಷ ಮೊದಲೇ ಬರಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಎರಡು ವಿಭಿನ್ನ ನಾಟಕಗಳು

ಎರಡೂ ನಾಟಕಗಳು ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದ ರಂಗಪ್ರಯೋಗಗಳು. ಹೃದಯದ ತೀರ್ಪು ನಾಟಕದಲ್ಲಿ ಒಂದು ಸಾಂಸಾರಿಕ ವೃತ್ತಾಂತವೇ ಚಿತ್ರಿತವಾಗಿದೆ. ಮುಖ್ಯವಾಗಿ ತಾಯಿ, ಮಗ, ಸೊಸೆ, ಊರವರ ಮಧ್ಯೆ ನಡೆಯುವ ತಲ್ಲಣಗಳು ಹಾಗೂ ಭಾವನಾತ್ಕಕ ಸನ್ನಿವೇಶಗಳಿಂದ ಕೂಡಿದ ಈ ನಾಟಕ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೇ ಸಾಗುತ್ತಿದ್ದರೂ ಆ ಎಲ್ಲೆಗಳನ್ನು ಮೀರಿ ಹೆಣ್ಣಿನ ಒಳ ನೋಟಗಳ ಮುಖಾಂತರ ಅನನ್ಯವಾದ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುತ್ತಾ ಸಾಗುವ ಈ ರಂಗಪ್ರಸ್ತುತಿ ನೋಡುಗನ ಹೃದಯ ತಟ್ಟುತ್ತದೆ.

ಹುಚ್ಚಾಸ್ಪತ್ರೆಯ ರೋಗಿಗಳೇ ಸೇರಿ ಪ್ರಸ್ತುತಪಡಿಸುವ ನಾಟಕ ಅವತರಣಮ್ ಭ್ರಾಂತಾಲಯಮ್. ಹಾಗಂತ ಇದು ಹುಚ್ಚರ ಕುರಿತ ನಾಟಕವಲ್ಲ. ಇಲ್ಲಿ ನಟರು ನಿರ್ದೇಶಕನಿಗೇ ಅರೆವಳಿಕೆ ಕೊಟ್ಟು ಮಲಗಿಸುತ್ತಾರಾಗಿ ರಂಗಭೂಮಿಯೇ ರಂಗಭೂಮಿಯ ನಿಯಂತ್ರಣದ ವಿರುದ್ಧ ಬಂಡೇಳುತ್ತದೆ. ನಟರ ಚುರುಕು ನಡೆಯ ಅಭಿನಯ , ವಿಡಂಬನಾತ್ಮಕ ಗಂಭೀರ ಮಾತುಗಳು ನಗುವಿನ ಬುಗ್ಗೆ ಎಬ್ಬಿಸುತ್ತದೆ. ರಂಗಭೂಮಿಯೆಂಬ ಬೃಹತ್ ಕನ್ನಡಿಯಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಮಾಡುತ್ತದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಲೂಡೊ ಬೋರ್ಡ್ ಶಂಕು ಆಕಾರದ ಪ್ಲಾಸ್ಟಿಕ್ ಕಾಯ್ನ್ ನುಂಗಿದ ಎಂಟರ ಬಾಲಕಿ ಉಸಿರುಗಟ್ಟಿ ಸಾವು.

ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ದಾರುಣ ಘಟನೆ. ಉಳ್ಳಾಲ:ಫೆ-21:ಸಹೋದರ ಸಹೋದರಿಯೊಂದಿಗೆ ಮನೆಯಲ್ಲಿ ಲೂಡ ಆಟದಲ್ಲಿ...

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

ಮಂಗಳೂರು; ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯ...

ಬಸ್ ದುರಂತದಲ್ಲಿ ಮೃತಪಟ್ಟ ಅಟೋ ಚಾಲಕನ ಕುಟುಂಬಕ್ಕೆ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿ ಯಲ್ಲಿ ನಡೆದ ಬಸ್ ದುರಂತದಲ್ಲಿ ಮೃತಪಟ್ಟ ದ.ಕ....

ವಿದ್ಯಾರ್ಥಿಗಳಿಂದ ಬಸ್ ನಿರ್ವಾಹಕನ ಮೇಲೆ ಹಲ್ಲೆಗೆ ಖಂಡನೆ

ಉಳ್ಳಾಲ: ಫೆ.19ರಂದು ಗುರುವಾರ ಬೆಳಿಗ್ಗೆ ಬಿಸಿ ರೋಡ್‌ನಿಂದ ವಯಾ ಮಂಚಿ–ಮುಡಿಪು ಕಡೆ...