ಮಂಗಳೂರು: ಕಳೆದ ಎರಡು ದಿನಗಳಿಂದ ನಗರದಲ್ಲಿ ನಡೆಯುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಿನ್ನೆ ನಡೆದು ನೂತನ ಸಮಿತಿ ರಚನೆ ಆಗುವುದರೊಂದಿಗೆ ಹಾಲಿ ಬಂಧಿತರಾಗಿರುವ ಎಮ್. ಕೆ. ಫೈಝಿ (ಮೊಯ್ದಿನ್ ಕುಟ್ಟಿ ಫೈಝಿ) ಯವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ.
ವಿವಿಧ ಪದಾಧಿಕಾರಿಗಳಾಗಿ ಇತರರು ಆಯ್ಕೆ ಆಗಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಭೆ ಆಯೋಜಿಸಲಾಗಿತ್ತು, ನಗರದ ಟೌನ್ ಹಾಲ್ ನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಸಂಜೆ ನಗರದ ಜ್ಯೋತಿ ವೃತ್ತದಿಂದ ಟೌನ್ ಹಾಲ್ ವರೆಗೆ ಬೃಹತ್ ರ‍್ಯಾಲಿ ನಡೆಯಿತು.

ಸಭೆಯಲ್ಲಿ ಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಮೊಹಮದ್ ಶಾಫಿ ,ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಇಲ್ಯಾಸ್, ಅಬ್ದುಲ್ ಮಜೀದ್ ಪಿ, ಮೆಹರ್ ಅಫ್ರೋಝ್ ಯಾಸ್ಮಿನ್, ಕಾರ್ಯದರ್ಶಿಗಳಾದ ಅಲ್ಪೊನ್ಸ್ ಫ್ರಾಂಕೊ, ರಿಯಾಝ್ ಫರಂಗಿಪೇಟೆ, ಅಶ್ರಫ್, ಅಬ್ದುಲ್ ಮಜೀದ್ ಇತರರು ಬೃಹತ್ ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಸಾಗಿದರು.

ಜಾಥಾದಲ್ಲಿ ಸ್ಥಳೀಯ ಕಲೆಗಳಾದ ಧಪ್, ಚೆಂಡೆ ಇತ್ಯಾದಿ ತಂಡಗಳಿದ್ದು ನಗರದ ಮುಖ್ಯ ಬೀದಿಯಲ್ಲಿ ಜನಸಾಗರ ನೆರೆದಿತ್ತು. ಸಂಜೆ ಟೌನ್ ಹಾಲ್ನಲ್ಲಿ ಅಭಿನಂದನಾ ಸಭೆ ಅದ್ದೂರಿಯಾಗಿ ನಡೆಯಿತು.




