ಬಜ್ಪೆ : ಜ26; ಸೋಶಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಯೂನಿಯನ್ ಕಿನ್ನಿಪದವು ವತಿಯಿಂದ 77 ನೇ ಗಣರಾಜ್ಯೋತ್ಸವ ದಿನವನ್ನು ಕಿನ್ನಿಪದವು ಅಧ್ಯಕ್ಷರಾದ ಹಮೀದ್ ಬಜ್ಪೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಹಮೀದ್ ಬಜ್ಪೆರವರು ಧ್ವಜಾರೋಹಣ ನೆರೆವೆರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಗಳಾಗಿ ಆಗಮಿಸಿದ ಎಸ್.ಡಿ.ಟಿ.ಯು ರಾಜ್ಯ ಸಂಚಾಲಕ ಅತಾವುಲ್ಲಾ ಜೋಕಟ್ಟೆ ಗಣರಾಜ್ಯೋತ್ಸವದ ಮಹತ್ವದ ಕುರಿತು ಮಾತನಾಡಿ, ದೇಶದ ಏಕತೆ, ಸಂವಿಧಾನ ಹಾಗೂ ನಾಗರಿಕರ ಕರ್ತವ್ಯಗಳ ಬಗ್ಗೆ ಸಂದೇಶ ನೀಡಿದರು.


ಕಾರ್ಯಕ್ರಮದಲ್ಲಿ ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯರಾದ ಸಿರಾಜ್ ಬಜ್ಪೆರವರು ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಸಂವಿಧಾನವನ್ನು ಉಳಿಸಲು ನಾವೆಲ್ಲರೂ ಶಕ್ತಿಮೀರಿ ಪ್ರಯತ್ನ ಪಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಬಜ್ಪೆ ಪಟ್ಟಣ ಪಂಚಾಯತ್ ಸದಸ್ಯೆ ಆಯಿಷಾ ಬಜ್ಪೆ ರವರು ಸಂವಿಧಾನದ ಪ್ರಾಮುಖ್ಯತೆ ಹಾಗೂ ರಾಷ್ಟ್ರನಿಷ್ಠೆಯ ಕುರಿತು ಪ್ರತಿಜ್ಞಾವಿಧಿಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ನಿಸಾರ್ ಕರಾವಳಿ ಎಸ್.ಡಿ.ಪಿ.ಐ ಬಜ್ಪೆ ಪಟ್ಟಣಾ ಪಂಚಾಯತ್ ಅಧ್ಯಕ್ಷರಾದ ಹೈಸೈನಾರ್ ಬಜ್ಪೆ, ಇಸ್ಮಾಯಿಲ್ ಎಂಜಿನಿಯರ್, ಬಜ್ಪೆ ಪಟ್ಟಣಾ ಪಂಚಾಯತ್ ಸದಸ್ಯೆ ಗುಲ್ಸನ್ ಕರೀಂ, ಅಲ್ ಹುದಾ ಜುಮ್ಮಾ ಮಸೀದಿ ಕಿನ್ನಿಪದವು ಉಪಾಧ್ಯಕ್ಷರ ಹಾಜಿ ಮೊನಾಕಾ, ಸ್ಪೋಟಿಂಗ್ ಕ್ಲಬ್ ಬಜ್ಪೆ ಇದರ ಅಧ್ಯಕ್ಷರಾದ ಅಝರುದ್ದೀನ್ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ನಾಯಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಪ್ನಾನ್ ಕಿನ್ನಿಪದವು ಸ್ವಾಗತಿಸಿ, ಧನ್ಯವಾದಗೈದರು.


