ಉಳ್ಳಾಲ: ಬಂಗಲೆ, ಶ್ರೀಮಂತಿಕೆ ಅಥವಾ ಸ್ಥಾನಮಾನವು ಊರಿನ ಗೌರವವಲ್ಲ, ಪರಸ್ಪರ ಒಗ್ಗಟ್ಟೇ ನಿಜವಾದ ಗೌರವ. ಜನರ ನಡುವೆ ಭಿನ್ನಾಭಿಪ್ರಾಯಗಳು ಸಾಮಾನ್ಯ. ಅದನ್ನು ಪರಸ್ಪರ ಚರ್ಚೆಯ ಮೂಲಕ ಪರಿಹರಿಸಿ, ಒಬ್ಬರ ಭಾವನೆಗೆ ಮತ್ತೊಬ್ಬರು ಗೌರವ ನೀಡಿ ಮುಂದುವರಿದಾಗ ಮಾತ್ರ ಸಾಮರಸ್ಯದ ಜೀವನ ಸಾಧ್ಯವಾಗುತ್ತದೆ. ಸಮಾಜದ ಒಗ್ಗಟ್ಟಿಗೆ ಕೈಜೋಡಿಸಬೇಕು ಎಂದುಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಕೆರೆಬೈಲ್ ಗೆಳೆಯರ ಬಳಗದ ಆಶ್ರಯದಲ್ಲಿ ಶನಿವಾರ ಕೆರೆಬೈಲ್ ನಲ್ಲಿ ನಡೆದ ಇಫ್ತಾರ್ ಸೌಹಾರ್ದ ಸಂಗಮದಲ್ಲಿ ಮಾತನಾಡಿದರು. ಎಲ್ಲ ಜಾತಿ, ಧರ್ಮದವರು, ಬಡವ- ಶ್ರೀಮಂತರು ಯಾವುದೇ ಭೇದವಿಲ್ಲದೆ ಒಂದೇ ತಾಯಿಯ ಮಕ್ಕಳಂತೆ ಸೋದರತೆಯ ಮನೋಭಾವದೊಂದಿಗೆ ಬದುಕುವ ಮೂಲಕ ಸ್ವಾಭಿಮಾನಿ ಸಮಾಜ ನಿರ್ಮಾಣವಾಗಬೇಕು. ಸಮಾಜದಲ್ಲಿ ಶಾಂತಿ ಮತ್ತು ಒಗ್ಗಟ್ಟು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ ಎಂದು ತಿಳಿಸಿದರು.
ಕಾರ್ಯಕ್ರಮ ಸಂಯೋಜಕ ಅಶ್ರಫ್ ಕೆರೆಬೈಲ್ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಅಬ್ದುಲ್ ರಹ್ಮಾನ್, ಉದ್ಯಮಿ ಶಾಮಿಲ್ ಅಹ್ಮದ್ ಡೆಲ್ಟಾ, ಚೆಂಬುಗುಡ್ಡೆ ಜುಮಾ ಮಸೀದಿಯ ಅಧ್ಯಕ್ಷ ಪಿ.ಸಿ.ಇಮ್ತಿಯಾಝ್, ಉಳ್ಳಾಲ ನಗರಸಭೆಯ ಮಾಜಿ ಸದಸ್ಯರಾದ ಉಸ್ಮಾನ್ ಕಲ್ಲಾಪು, ವೀಣಾ ಡಿಸೋಜ, ದಿನೇಶ್ ರೈ, ಶಶಿಕಲಾ, ಬಾಝಿಲ್ ಡಿಸೋಜ, ಸೋಮೇಶ್ವರ ಪುರಸಭೆಯ ಸದಸ್ಯ ಪುರುಷೋತ್ತಮ ಶೆಟ್ಟಿ ಪಿಲಾರ್, ಪ್ರಮುಖರಾದ ರಮೇಶ್ ಶೆಟ್ಟಿ, ವಿವೇಕಾನಂದ ಸನಿಲ್, ರಮೀಝ್, ಅಫೀಝ್, ನಾಸೀರ್, ನಮಿತಾ ಅಶ್ವಿನ್, ತೌಸೀಫ್, ಇರ್ಫಾನ್, ನಿಝಾಮ್, ಮನ್ಸೂರ್ ಮಂಚಿಲ, ದೇವಕಿ ಪೂಜಾರಿ, ನಝೀರ್, ನಿಸಾರ್, ಆಶಿಕ್ ಕುದ್ರೋಳಿ, ಆಸಿಫ್, ಸುಹೈಲ್ ಚೋಯ್, ನೌಷಾದ್, ಪ್ರವೀಣ್, ನಾರಾಯಣ, ಅಮೀರ್, ಶರೀಫ್, ಅಬ್ದುಲ್ ಖಾದರ್, ಅನ್ಸಾರ್, ತಾಜುದ್ದೀನ್, ಸಲ್ಮಾನ್ ಕಲ್ಲಾಪು, ಝಾಕೀರ್, ಅಲ್ತಾಫ್, ಶಬೀರ್, ಅಫ್ರಿದ್, ಅಝರ್ ಅಜ್ಜು ಮೊದಲಾದವರು ಉಪಸ್ಥಿತರಿದ್ದರು.


