ಡಿಕೆಶಿಯವರ ಸಚಿವ ಸಂಪುಟದಲ್ಲಿ ಇನಾಯತ್ ಅಲಿ ಕ್ಯಾಬಿನೆಟ್ ಸಚಿವರಾಗಲಿರುವರು: ಡಿ.ಐ. ಅಬೂಬಕರ್ ಕೈರಂಗಳ

Date:

ಇದೇನೂ ನನಸಾಗದ ಕನಸಲ್ಲ.  ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಜನರಿಗೆ ನೀಡುತ್ತಾ ಬಂದ ಕೊಡುಗೆಗಳನ್ನು ಗಮನಿಸದರೆ ಮುಂದಿನ ಚುನಾವಣೆಯಲ್ಲಿ ಈ ಫಲಿತಾಂಶ ಖಚಿತ.  ಖಂಡಿತ ಇದು ನಮ್ಮ ಕರ್ನಾಟಕದ ನಾಳಿನ ಚಿತ್ರಣ. 

ಮಂಗಳೂರು: ಡಿಕೆಶಿಯವರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆರು ವರ್ಷ ತುಂಬುತ್ತದೆ. ಕರ್ನಾಟಕ ರಾಜಕಾರಣದಲ್ಲಿ ಅವರ ನೇತೃತ್ವ ಒಂದು ಐತಿಹಾಸಿಕ ತಿರುವು. ಕೋಮುವಾದಿ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರಕಾರ ತರುವುದರಲ್ಲಿ ಅವರು ಅಮೋಘ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಸರಕಾರ ಸ್ಥಾಪಿಸಲು ತುಂಬಾ ಆರ್ಥಿಕ ಹಾಗೂ ಶ್ರಮಿಕ ಕೊಡುಗೆಗಳನ್ನು ಅವರು ನೀಡಿದ್ದಾರೆ.
ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ನಾಯಕರ ತನಕ ಅವರ ಆಕರ್ಷಕ ಒಡನಾಟದ ವೈಖರಿಯೇ ಬೇರೆ. ಅನೇಕ ಕಿರಿಯರಿಗೆ ಶಾಸಕರಾಗುವ ಅವಕಾಶ ಈ ಬಾರಿ ದೊರಕಿದ್ದು ಕೂಡಾ ಡಿ.ಕೆ.ಶಿಯವರ ಸಾಧನೆ.


ಮಾನ್ಯ ಸಿದ್ಧರಾಮಯ್ಯನವರು ಕೂಡಾ ಈ ವಿಷಯಗಳನ್ನು ವೇದಿಕೆಗಳಲ್ಲಿ ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ಬಿಜೆಪಿಯ ಬೆದರಿಕೆಗೆ ಜಗ್ಗದೆ, ಆಮಿಷಕ್ಕೆ ಕರಗದೆ ನಿಂತ ಅಪರೂಪದ, ರಾಜಕಾರಣಿ ಇವರು. ಮುಂದಿನ ಅವಧಿಯಲ್ಲಿ ಇವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿರುವುದು ಖಚಿತ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಲಿರುವುದು ಮಾನ್ಯ ಡಿಕೆಶಿ ಎಂಬುದೂ ಅಷ್ಟೇ ಖಚಿತ. ಆ ಸಂದರ್ಭದಲ್ಲಿ ನಮ್ಮ ಮಾನ್ಯ ಇನಾಯತ್ ಅಲಿಯವರು ಸಚಿವ ಸ್ಥಾನ ಪಡೆಯುವಂತಾಗಬೇಕು ಎಂಬುದು ನನ್ನದೊಂದು ಪ್ರಾಮಾಣಿಕ ಆಗ್ರಹವಾಗಿದೆ.

ಡಿಕೆಶಿಯವರಿಗೆ ಅತ್ಯಂತ ಆಪ್ತರಲ್ಲೊಬ್ಬರಾಗಿರುವ ಇನಾಯತ್ ಅಲಿಯವರು ವ್ಯಕ್ತಿತ್ವ, ಪಕ್ಷ ನಿಷ್ಠೆ, ಪರಿಶ್ರಮ ಎಲ್ಲದರಲ್ಲೂ ಬಹಳ ಮುಂದಿದ್ದಾರೆ. ಹಜ್ ಭವನಕ್ಕೆ ಬಜಪೆಯಲ್ಲಿ ಬೆಲೆಬಾಳುವ ತನ್ನ ಜಮೀನನ್ನು ಉಚಿತವಾಗಿ ಕೊಟ್ಟ ಅವರ ನಿಸ್ವಾರ್ಥ ಮನಸ್ಸು, ಸಾಮಾಜಿಕ ಸದ್ಚಿಂತನೆ ಈಗಾಗಲೇ ಜಗಜ್ಜಾಹೀರು. ಮುಂದಿನ ಚುನಾವಣೆಯಲ್ಲಿ ಮಾನ್ಯ ಡಿಕೆಶಿಯವರು ಇನಾಯತ್ ಅಲಿಯವರಿಗೆ ಶಾಸಕನಾಗುವ ಅವಕಾಶ ಮಾಡಿಕೊಟ್ಟು ಸಚಿವ ಸ್ಥಾನ ನೀಡಬೇಕೆಂಬುದು ನನ್ನ ಸಮೇತ ಅವರ ಅಭಿಮಾನಿ ಬಳಗದ ಸದಾಶಯ.

ಖಂಡಿತವಾಗಿ ಇನಾಯತ್ ಅಲಿಯವರು ವಹಿಸಿಕೊಡುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುವ ವಿಷಯದಲ್ಲಿ ಯಾರಿಗೂ ಪ್ರತಿಮಾತಿಲ್ಲ. ಆ ಅವಕಾಶ ಮಾನ್ಯ ಇನಾಯತ್ ಅಲಿಯವರಿಗೆ ಬರಲಿ ಎಂಬುದು ಈ ಪವಿತ್ರ ಮಾಸದಲ್ಲಿ ನನ್ನ ಮನದಾಳದ ಪ್ರಾರ್ಥನೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ...

ರಂಗ ಸ್ವರೂಪ (ರಿ.) ಕುಂಜತ್ತಬೈಲ್ ವತಿಯಿಂದ ಬೇಸಿಗೆ ಶಿಬಿರ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ

ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ರಂಗೋತ್ಸವ 2026' 4ದಿನಗಳ...

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...