ಗೌರಿಕೆರೆ ಶ್ರೀ ರಾಮಪುರದ ಸಪರಿವಾರ ಶ್ರೀರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Date:

ಮೂಡುಬಿದಿರೆ: ಇಲ್ಲಿನ ಗೌರಿಕೆರೆ ಬಳಿಯ ಶ್ರೀ ರಾಮಪುರದ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಟಿ. ಮುರಳೀಧರ ತಂತ್ರ ಅವರು ಮೂಡುಬಿದಿರೆ ಶನಿವಾರ ಬಿಡುಗಡೆಗೊಳಿಸಿದರು.

ದೇವಾಡಿಗರ ಸುಧಾರಕ ಸಂಘ (ರಿ), ಮೂಡುಬಿದಿರೆ ಇದರ ಅಧ್ಯಕ್ಷರು ಹಾಗೂ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರಂದರ ದೇವಾಡಿಗ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ರತ್ನಾಕರ ಸಿ. ಮೊಲಿ, ಕಾರ್ಯಾಧ್ಯಕ್ಷರಾದ ವಿಶ್ವನಾಥ ಪಿ. ದೇವಾಡಿಗ ಮತ್ತು ಶಶಿಧರ ಎಸ್. ದೇವಾಡಿಗ ಶಿರ್ತಾಡಿ, ಸಮಿತಿಯ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು, ದೇವಾಡಿಗ ಮಹಿಳಾ ಮತ್ತು ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀ ರಾಮ ಭಜನಾ ಮಂಡಳಿಯ ಮುಖೇನ ಪ್ರಾರಂಭವಾದ ಈ ಸಂಸ್ಥೆಯು ಮುಂದೆ ಶ್ರೀ ರಾಮ ಮಂದಿರವಾಗಿ ಕಾಲಕಾಲಕ್ಕೆ ಅಭಿವೃದ್ಧಿ ಹೊಂದುತ್ತಾ, ಪ್ರಸ್ತುತ ಹಲವು ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಶ್ರೀ ರಾಮ ಮಂದಿರದಲ್ಲಿ ಬರುವ ಮೇ ತಿಂಗಳ 6ನೇ ತಾರೀಖಿನಿಂದ 10ನೇ ತಾರೀಖಿನವರೆಗೆ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಠಬಂಧ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಂಘದ “ಅಮೃತ ಮಹೋತ್ಸವ” ಆಚರಣೆಯ ಕಾರ್ಯಕ್ರಮವು ನಡೆಯಲಿದೆ.

ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹಲವು ಜೀರ್ಣೋದ್ಧಾರದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಶ್ರೀ ರಾಮ ಮಂದಿರದ ಒಳ ಆವರಣದ ಗೋಡೆ ಮತ್ತು ನೆಲಕ್ಕೆ ಗ್ರಾನೈಟ್ ಅಳವಡಿಸಲಾಗಿದೆ. ಗರ್ಭಗುಡಿಯ ಕೆಳಅಂತಸ್ಥಿನ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಸುವ ಕೆಲಸ ಪ್ರಗತಿಯಲ್ಲಿದೆ. ಗರ್ಭಗುಡಿಯ ಮರದ ದರಿಗಳಿಗೆ, ಮುಖದ್ವಾರದ ದಾರಂದ ಬಾಗಿಲುಗಳಿಗೆ ಮತ್ತು ಮಂದಿರದ ಮುಖ್ಯ ದ್ವಾರದ ದಾರಂದ ಬಾಗಿಲುಗಳಿಗೆ ಹಿತ್ತಾಳೆಯ ಕವಚ ಹಾಸುವ ಕೆಲಸ ಆಗಬೇಕಿದೆ. ಕ್ಷೇತ್ರದ ದೈವ ಶ್ರೀ ರಕ್ತೇಶ್ವರಿ ಮತ್ತು ಶ್ರೀ ಚಾಮುಂಡೇಶ್ವರಿಯ ಶಿಲಾಮಯ ಗುಡಿಗಳು ನಿರ್ಮಾಣವಾಗಲಿದೆ.

ಜೊತೆಗೆ ಸುಮಾರು 1.15ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ಭೋಜನ ಶಾಲೆ, ಪಾಕ ಶಾಲೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ದಿ. ಮೇ. 08ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಮೊದಲು ಸಮುದಾಯ ಭವನದ ಉದ್ಘಾಟನೆಗೊಳ್ಳಲಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 21: ಮೂಡಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಮಹಾಸಭೆ

ಮೂಡಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ...

ಉಡುಪಿ: ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ; ಒಂದೂವರೆ ವರ್ಷದ ಕಂದಮ್ಮ ದಾರುಣ ಸಾವು

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ...

ಜನ ಸಾಮಾನ್ಯರಿಗೆ ಹಕ್ಕುಗಳು ನಿರಾಕರಣೆಯಾದಾಗ ಹೋರಾಟ ರೂಪಿಸುವುದು ನಾಯಕರ ಮೊದಲ ಜವಾಬ್ದಾರಿ: ಶಾಕಿರ್ ಅಳಕೆಮಜಲ್

ಬಂಟ್ವಾಳ, ಜೂನ್ 11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)...