ಮಂಗಳೂರು: ಸನ್ಮಾನ್ಯ ವಿಧಾನಸಭಾಧ್ಯಕ್ಷರಾದ ಯು.ಟಿ.ಕಾದರ್ ರವರನ್ನು ರಾಜಕೀಯ ವೈರದಿಂದ ಹಾಗೂ ಅವರ ನಿರಂತರ ಮುನ್ನೇರಿಕೆಯನ್ನು ಕಂಡು ಅಸೂಯೆಯಿಂದ ಟೀಕಿಸುವವರಿದ್ದಾರೆ. ಯು.ಟಿ. ಕಾದರ್ ರವರು ತನ್ನ ವಿರುದ್ಧದ ಟೀಕೆಗಳಿಗೆ ಉತ್ತರ ಹೇಳದೆ ತನ್ನ ಪಾಡಿಗೆ ತಾನು ಗಜಗಾಂಭೀರ್ಯದಿಂದಲೇ ಮುಂದಕ್ಕೆ ಸಾಗುತ್ತಾ ಇದ್ದಾರೆ.
ಯು.ಟಿ. ಕಾದರ್ ರವರು ಸಮುದಾಯಕ್ಕೆ, ನಾಡಿಗೆ, ಕ್ಷೇತ್ರಕ್ಕೆ ಏನು ಮಾಡಿದರು ಎಂದು ಕೇಳುವವರಿದ್ದಾರೆ. ಯು.ಟಿ.ಕಾದರ್ ರವರು ಮಾಡುವ ಕೆಲಸಗಳಿಗೆ, ಉಪಕಾರಗಳಿಗೆ, ಜನಹಿತ ಕಾರ್ಯಗಳಿಗೆ ಪುಕ್ಕಟೆ ಪ್ರಚಾರ ಕೊಡುವ ಜಾಯಮಾನದವರು ಅಲ್ಲದ್ದರಿಂದ ಅವರು ಏನು ಮಾಡಿದರು ಎಂಬ ಪ್ರಶ್ನೆ ಕೆಲವರಿಗೆ ನಿಜವೆನಿಸುತ್ತದೆ. ಆದರೆ ಯು.ಟಿ. ಕಾದರ್ ಮತ್ತು ಅವರ ಬಳಗವನ್ನು ಹತ್ತಿರದಿಂದ ಕಂಡವರಿಗೆ ಅವರ ಸಾಧನೆಗಳು ಅಚ್ಚರಿ ಹುಟ್ಟಿಸುತ್ತವೆ.
ಸನ್ಮಾನ್ಯ ಯು.ಟಿ. ಕೆಯವರ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ವೀಡಿಯೋ ಒಂದು ಉದಾಹರಣೆ. ಒಂದು ಪುಟ್ಟ ಮಗು ಯು.ಟಿ. ಕಾದರ್ ರವರ ಆಗಮನವನ್ನು ನಿರೀಕ್ಷಿಸುತ್ತಾ ನಿಷ್ಕಳಂಕ, ಮುಗ್ಧ ಅಂತರಂಗದಿಂದ ಬರುವ ತೊದಲು ನುಡಿಯಲ್ಲಿ ‘ಯು.ಟಿ. ಕಾದರ್ ಬರ್ತಿದ್ದಾರೆ’ ಅನ್ನುವ ದೃಶ್ಯ ರೋಮಾಂಚಕ. ಯಾರದ್ದೇ ಆದರೂ ಹೃದಯ ತುಂಬಿ ಬರುವ ಸನ್ನಿವೇಶ. ನಿಜಕ್ಕೂ ಯು. ಟಿ. ಕಾದರ್ ರವರು ನಮ್ಮ ಜಿಲ್ಲೆಗೆ, ಸಮುದಾಯಕ್ಕೆ ಒಂದು ಅಭಿಮಾನ.

ಕಾದರ್ ರವರ ಬಳಗದಲ್ಲಿ ಅವರ ನಿಕಟ ಪಿ.ಎ. ಆಗಿ ದುಡಿಯುತ್ತಿರುವ ಜನಾಬ್ ಲಿಬ್ಝತ್ ಕೂಡಾ ಯು.ಟಿ. ಕಾದರ್ ರವರ ಪಡಿಯಚ್ಚಿನಂತಿದ್ದಾರೆ. ಸರಳತೆ, ಎಲ್ಲರಲ್ಲೂ ಪ್ರೀತಿಯಿಂದ ಒಡನಾಡುವ ರೀತಿ, ಪರೋಪಕಾರದಲ್ಲಿ ನಿಷ್ಕಳಂಕತೆ ಮುಂತಾದ ಎಲ್ಲಾ ವಿಷಯಗಳಲ್ಲೂ ಕಾದರ್ ಅವರ ಡಿಟ್ಟೋ ಪಡಿಯಚ್ಚು. ತಾಳ್ಮೆ ಅಂದರೆ ಏನೆಂಬುದನ್ನು ಕಾಣಬೇಕಾದರೆ ಲಿಬ್ಝತ್ ರವರ ಜೊತೆ ಸ್ವಲ್ಪ ಸಮಯ ಕಳೆಯಬೇಕು. ನಿರಂತರ ಬರುತ್ತಿರುವ ಫೋನ್ ಕಾಲ್ ಗಳಿಗೆ ಒಂಚೂರು ಸಿಡಿಮಿಡಿಕೆ ಇಲ್ಲದೆ ಫೋನೆತ್ತಿ ಮಾತಾಡುತ್ತಾರೆ. ಅಕಸ್ಮಾತ್ ಫೋನೆತ್ತಲು ಮಿಸ್ಸಾದರೆ ಮಿಸ್ಕಾಲ್ ನಂಬರ್ ನೋಡಿ ವಾಪಾಸು ಕರೆಯುತ್ತಾರೆ.
ರಾಜ್ಯದ ಅತ್ಯಂತ ಗರಿಷ್ಠ ಮಟ್ಟದ ನಾಯಕರೊಬ್ಬರ ಬಹುಕಾಲದ ಒಡನಾಡಿಯಾಗಿದ್ದರೂ ಆ ಬಗ್ಗೆ ತಲೆಭಾರವಿಲ್ಲದ ಲಿಬ್ಝತ್ ರವರ ಸ್ವಭಾವ ಗುಣ ನಿಜಕ್ಕೂ ಶಿರೋಧಾರ್ಯ. ಯು.ಟಿ. ಕಾದರ್ ರವರ ವಿಧಾನಸಭೆಯ ಪಿ.ಎ. ಆಗಿ ದುಡಿಯುತ್ತಿರುವ ಶ್ರೀ ಜಯಕೃಷ್ಣ ಸರ್ ಕೂಡಾ ಇದೇ ರೀತಿಯ ಗುಣಗಳನ್ನು ಹೊಂದಿದ ಮಹಾಮನಸ್ಕರು. “ಚಾರಿಯಾಲ್ ಚಾರಿಯೆದ್ ಮನಕ್ಕುಂ” ( ಯಾವುದಕ್ಕೆ ಒರುಗುತ್ತಾನೋ ಅದರ ಪರಿಮಳ ಬರುತ್ತದೆ) ಎಂದು ಮಲಯಾಳಂ ನಲ್ಲಿ ಒಂದು ಮಾತು ಇದೆ. ಬಹುಶಃ ಯು.ಟಿ. ಕಾದರ್ ರವರ ಸಾಂಗತ್ಯದಲ್ಲಿರುವವರು ಅವರದೇ ತಾಳ್ಮೆ, ಪ್ರಾಮಾಣಿಕ ತೆ, ಸಂಯಮ, ನಿಸ್ವಾರ್ಥತೆ, ಜನಹಿತ ಸದ್ಚಿಂತನೆಗಳನ್ನು ಮೈಗೂಡಿಸಿಕೊಂಡಿರುವುದು ಕಾಣುವಾಗ ಈ ಮಲಯಾಳಂ ಪಡೆನುಡಿ ಅದೆಷ್ಟು ಅರ್ಥ ಪೂರ್ಣ ಅನ್ನಿಸುತ್ತದೆ.
ಸನ್ಮಾನ್ಯ ಯು.ಟಿ. ಕಾದರ್ ರವರಿಗೂ ಅವರ ಆಪ್ತ ಬಳಗದ ಲಿಬ್ಝತ್ ಮತ್ತು ಜಯಕೃಷ್ಣ ರಂತಹ ಎಲ್ಲರಿಗೂ ಅಲ್ಲಾಹು ಆಯುರಾರೋಗ್ಯ, ಯಶಸ್ಸು, ಕ್ಷೇಮೈಶ್ವರಗಳನ್ನು ಇನ್ನಷ್ಟು ಹೆಚ್ಚಿಸಿಕೊಡಲೆಂದು ರಮಳಾನಂತ್ಯದ ಈ ಪವಿತ್ರ ದಿನದಲ್ಲಿ ಪ್ರಾರ್ಥಿಸುತ್ತಿದ್ದೇನೆ.


