ಕಂದೀರು ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನಕ್ಕೆ ಪರಿಕರಗಳ ಸಮರ್ಪಣೆ

Date:

ಮೂಡಬಿದಿರೆ : ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನ ಶ್ರೀ ಕ್ಷೇತ್ರ ಕಂದಿರು ಶಿರ್ತಾಡಿ ಶ್ರೀ ಕ್ಷೇತ್ರಕ್ಕೆ ಭಕ್ತರು ನೀಡಿರುವ ಪರಿಕರಗಳ ಸಮರ್ಪಣೆಯು ಶ್ರೀ ಕ್ಷೇತ್ರದಲ್ಲಿ ಜರಗಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ್ ಕೋಟ್ಯಾನ್ ಮಾರೂರು, ನಿವೃತ್ತ ಎಸಿಎಫ್ ಎನ್ ಮುರಳಿಧರನ್, ಮೂಡಬಿದಿರೆ ಜಯ ಬಂಗೇರ ಮರೋಡಿ, ಬೇಬಿ ಬೋಜ ಶೆಟ್ಟಿ, ಖಂಡಿಗ ಬೆಳುವಾಯಿ ಸೂರಜ್ ಆಳ್ವ ಚಪ್ಪಣ್ಣ ಗುರಿ, ಬೆಳುವಾಯಿ ಲಕ್ಷ್ಮೀನಾರಾಯಣ ಶಾಂತಿ ನಿಟ್ಟೆ, ಶಿವಾನಂದ ಶಾಂತಿ ತಾಕೊಡೆ, ಸಂಜೀವ ಶಾಂತಿ ವಾಲ್ಪಾಡಿ, ಸಂಕೇತ್ ಶಾಂತಿ ಮಾಂಟ್ರಾಡಿ ಅವರು ದೀಪ ಬೆಳಗಿಸಿ ಚೇರ್ ಟೇಬಲ್ ಪಾತ್ರೆ ಪರಿಕರಗಳನ್ನು ಕ್ಷೇತ್ರಕ್ಕೆ ಸಮರ್ಪಿಸಿದರು.

ಅನುವಂಶಿಕ ಆಡಳಿತ ಮೊಕ್ತೇಸರರಾದ ಸೋಮನಾಥ ಶಾಂತಿಯವರು ಸ್ವಾಗತಿಸಿ ಸುಮಾರು ೧ ಲಕ್ಷ ಮೊತ್ತದ ಪರಿಕರಗಳನ್ನು ಖರೀದಿಸಲು ಸಹಕಾರ ನೀಡಿದವರನ್ನು ಸ್ಮರಿಸಿದರು.

ಸುಮಂತ್ ಶಾಂತಿ ಧನ್ಯವಾದಗೈದರು. ಸಮಿತ್ ರಾಜ್, ಮಾನಸ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕಂದಿರು ಸಹಕರಿಸಿದರು.

ಅನಂತರ ವಿಶೇಷ ಪೂಜೆ ಕಲ್ಕುಡ ದೈವ ದರ್ಶನ, ಅನ್ನ ಸಂತರ್ಪಣೆ ಜರಗಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...