ಮೂಡಬಿದಿರೆ: ತುಳುಕೂಟ(ರಿ), ಮೂಡಬಿದಿರೆ, ಕಾರ್ಯನಿರತ ಪತ್ರಕರ್ತರ ಸಂಘ, ಮೂಡಬಿದಿರೆ, ಪ್ರೆಸ್‌ಕ್ಲಬ್, ಮೂಡಬಿದಿರೆ, ಜೆಸಿಐ ಮೂಡಬಿದಿರೆ ತ್ರಿಭುವನ್, ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್. ಮೂಡುಬಿದಿರೆ ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್, ಮೂಡಬಿದಿರೆ ಹಾಗೂ ಅಭಿಮಾನಿ ಬಳಗ ತಾಕೊಡೆ ಮತ್ತು ರಿಕ್ಷಾ ಚಾಲಕ – ಮಾಲಕರು, ಮೂಡಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಅವರ ‘ಬೊಳ್ಳಿಲು’ ತುಳು ಕೃತಿ ಬಿಡುಗಡೆ ಮಾ. 22ರಂದು ಬೆಳಿಗ್ಗೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ.

ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ ಕೃತಿ ಬಿಡುಗಡೆ ಮಾಡಲಿದ್ದಾರೆ. ಗೀತಾ ಲಕ್ಷ್ಮೀಶ್ ಶೆಟ್ಟಿ ಕೃತಿ ಪರಿಚಯ ನಡೆಸಲಿದ್ದಾರೆ.ಅಂದು ಬೆಳಿಗ್ಗೆ ಗಂಟೆ 10:00ರಿಂದ 11:00 ರವರೆಗೆ ಕವಿಗೋಷ್ಠಿ ಉದಯೋನ್ಮುಖ ಕವಿಗಳಿಂದ ನಡೆಯಲಿದೆ. ಗೋಷ್ಠಿಯ ಅಧ್ಯಕ್ಷತೆಯನ್ನು ಸದಾನಂದ ನಾರಾವಿ ವಹಿಸಲಿದ್ದಾರೆ. ಸಾಹಿತ್ಯಾಸಕ್ತ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.


