“ಭಾಷಾ ವೈವಿಧ್ಯತೆಯನ್ನು ಹೆಮ್ಮೆಯಿಂದ ಸ್ವೀಕರಿಸಬೇಕು; ಇರ್ಷ್ಯೆಯಿಂದಲ್ಲ”: ಡಾ.ಡಿ. ವಿ ಪರಮಶಿವಮೂರ್ತಿ

Date:

ಮೂಡುಬಿದಿರೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಕುವೆಂಪು ಸಭಾಂಗಣದಲ್ಲಿ ‘ಭಾಷಾ ವೈವಿಧ್ಯತೆ ಮತ್ತು ದಕ್ಷಿಣ ಭಾರತದ ಅಸ್ಮಿತೆ’ ಎಂಬ ಶೀರ್ಷಿಕೆಯಡಿ ನಡೆಯುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವು ಶುಕ್ರವಾರ ಆರಂಭಗೊಂಡಿತು.

ಹಂಪಿ ಕನ್ನಡ ವಿವಿಯ ಕುಲಪತಿಗಳಾದ ಡಾ ಡಿ. ವಿ ಪರಮಶಿವಮೂರ್ತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ ಭಾಷೆ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಬಂಧಗಳನ್ನು ಬೆಸೆಯುವ ಪ್ರಮುಖ ಸಾಧನವಾಗಿದ್ದು, ಅದು ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಭಾಷೆಗಳು ಒಗ್ಗೂಡಿಸುವ ಬದಲು ಹಲವಾರು ಸಂದರ್ಭಗಳಲ್ಲಿ ಸಂಘರ್ಷಗಳಿಗೆ ಕಾರಣವಾಗುತ್ತಿರುವುದರ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿ, “ಭಾಷಾ ವೈವಿಧ್ಯತೆಯನ್ನು ಹೆಮ್ಮೆಯಿಂದ ಸ್ವೀಕರಿಸಬೇಕು; ಇರ್ಷ್ಯೆಯಿಂದಲ್ಲ,” ಎಂದು ಅಭಿಪ್ರಾಯಪಟ್ಟರು.

ಭಾಷೆಯು ಜ್ಞಾನ ಮತ್ತು ಅರಿವಿನ ವಿಸ್ತರಣೆಗೆ ಪರಿಣಾಮಕಾರಿ ಸಾಧನವಾಗಿದ್ದು, ಮನುಷ್ಯತ್ವವನ್ನು ಉದ್ದೀಪನಗೊಳಿಸಿ, ಮಾನವ ಸಂಬಂಧಗಳನ್ನು ಬಲಪಡಿಸಬೇಕು. ನಮ್ಮ ಭಾಷೆಗೆ ನೀಡುವ ಗೌರವವನ್ನು ಇತರ ಭಾಷೆಗಳಿಗೂ ಹಾಗೂ ಭಾಷಿಕರಿಗೂ ಸಮಾನವಾಗಿ ನೀಡಬೇಕೆಂದು ಅವರು ನುಡಿದರು.



ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂದು ತಿಳಿಸಿದರು. ವಿಚಾರ ಸಂಕಿರಣದ ಸಂಚಾಲಕರು ಹಾಗೂ ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ ಡಾ ಮಾಧವ ಪೆರಾಜೆ ವಿಚಾರ ಸಂಕಿರಣದ ಉದ್ದೇಶಗಳು ಹಾಗೂ ಸಮಕಾಲೀನ ಮಹತ್ವವನ್ನು ವಿವರಿಸಿದರು.


ದಿಕ್ಸೂಚಿ ಭಾಷಣ ಮಾಡಿದ ಕನ್ನಡ ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ, ಭಾಷೆಗಳ ಕುರಿತು ನಡೆಯುವ ಚರ್ಚೆಗಳು ಇಂದಿಗೂ ಹಳೆಯ ಅಂಕಿಅಂಶಗಳ ಮೇಲೆ ಅವಲಂಬಿತವಾಗಿರುವುದು ದುರಾದೃಷ್ಟಕರ. 2011ರ ಜನಗಣತಿಯ ಪ್ರಕಾರ, ಭಾರತದಲ್ಲಿ 19,569 ಮಾತೃ ಭಾಷೆಗಳಿದ್ದರೂ, ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಕೇವಲ 22 ಭಾಷೆಗಳಿವೆ. ಅವುಗಳಲ್ಲಿ 18 ಭಾಷೆಗಳು ಉತ್ತರ ಭಾರತದಾಗಿದ್ದು, ದಕ್ಷಿಣ ಭಾರತದ ದ್ರಾವಿಡ ಭಾಷೆಗಳು ಕೇವಲ ನಾಲ್ಕು ಮಾತ್ರವಿರುವುದು ಭಾಷಾ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ಕರ್ನಾಟಕದಲ್ಲಿ ಜನನ ಪ್ರಮಾಣ 1.6ರಷ್ಟಿದ್ದರೆ, ಬಿಹಾರ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಅದು 2.9ರಷ್ಟಿದೆ. ಈ ವ್ಯತ್ಯಾಸವು ಕೇವಲ ಜನಸಂಖ್ಯಾ ಅಂಕಿ ಅಂಶಗಳಲ್ಲದೆ, ಭವಿಷ್ಯದ ರಾಜಕೀಯ ಪ್ರತಿನಿಧಿತ್ವದ ಮೇಲೂ ಮಹತ್ವದ ಪರಿಣಾಮ ಬೀರುತ್ತವೆ.


ಈ ನೆಲೆಯಲ್ಲಿ ಸೆಂಟರ್ ಫಾರ್ ಪಾಲಿಸಿ ರಿಸರ್ಚ ಸೇರಿದಂತೆ ಹಲವು ಸಂಸ್ಥೆಗಳು ನಡೆಸಿದ ಅಧ್ಯಯದ ಪ್ರಕಾರ, ಒಂದು ವೇಳೆ 2028ರ ಲೋಕಸಭಾ ಚುನಾಚಣೆಗೆ ಕ್ಷೇತ್ರ ಪುನರ್ವಿಂಗಡಣೆ ಯಾದಲ್ಲಿ ಉತ್ತರ ಪ್ರದೇಶದ ಸ್ಥಾನಗಳು 80ರಿಂದ 128ಕ್ಕೆ, ಬಿಹಾರದಲ್ಲಿ 40ರಿಂದ 70ಕ್ಕೆ, ಮದ್ಯಪ್ರದೇಶದಲ್ಲಿ 29 ರಿಂದ 47, ಮಹಾರಾಷ್ಟç 48ರಿಂದ 68, ರಾಜಸ್ಥಾನ 25ರಿಂದ 44, ಪಶ್ಚಿಮ ಬಂಗಾಳ 42ರಿಂದ 60 ಸ್ಥಾನಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ವಿರುದ್ಧವಾಗಿ ದಕ್ಷಿಣದ ರಾಜ್ಯಗಳಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾತ್ರವಾಗುವ ಸಾಧ್ಯತೆ ಇದ್ದು, ಕರ್ನಾಟಕದಲ್ಲಿ 28ರಿಂದ 36ಕ್ಕೆ, ತಮಿಳುನಾಡಿನಲ್ಲಿ 39ರಿಂದ 42ಕ್ಕೆ, ತೆಲಂಗಾಣದಲ್ಲಿ 17ರಿಂದ 20ಕ್ಕೆ, ಆಂಧ್ರ ಪ್ರದೇಶದಲ್ಲಿ 25ರಿಂದ 28ಕ್ಕೆ ಏರಿಕೆಯಾಗುವ ಸಾಧ್ಯತೆ ಇದ್ದು, ಕೇರಳದಲ್ಲಿ 20ರಿಂದ 19ಕ್ಕೆ ಇಳಿಯುವ ಸಾಧ್ಯತೆ ಇದೆ ಎಂದರು.

ಮೊದಲ ದಿನದ ಪ್ರಥಮ ಗೋಷ್ಠಿಯಲ್ಲಿ ಕೇರಳದ ಖ್ಯಾತ ಬರಹಗಾರ ಹಾಗೂ ಭಾಷಾಂತಕಾರಾದ ಡಾ ಸುಧಾಕರ್ ರಾಮಂತಳಿ ಬಹುಭಾಷೆಗಳು ಹಾಗೂ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಅನನ್ಯತೆ ಕುರಿತು, ಡಾ ವಿ ಬಿ ತಾರಕೇಶ್ವರ, ದಕ್ಷಿಣ ಭಾರತದ ಭಾಷಾರಾಷ್ಟ್ರೀಯತೆಯ ಪರಿಕಲ್ಪನೆ, ಡಾ ಡಿ ಪಾಂಡುರಂಗ ಬಾಬು – ಜಾತಿ ವ್ಯವಸ್ಥೆ ಮತ್ತು ಭಾಷೆ: ಸಮಜೋ ಭಾಷಾ ವೈಜ್ಞಾನಿಕ ಚಿಂತನೆಗಳು, ಎರಡನೇ ಗೋಷ್ಠಿಯಲ್ಲಿ ಶ್ರೀಕೃಷ್ಣದೇವರಾಯ ವಿವಿ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ ರಾಬರ್ಟ ಜೋಶ್- ಜಾಗತಿಕ ಮತ್ತು ಗ್ಲೊಕಲ್ ರಾಜಕರಣದ ನೆಲೆಗಳು, ಡಾ ರೇಖಾ ದತ್ತ, ದಕ್ಷಿಣ ಭಾರತದ ಸ್ತ್ರಿವಾದಿ ಬರಹಗಳು ವಿಷಯದ ಕುರಿತು ಮಾತನಾಡಿದರು


ಕಾರ‍್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಆಳ್ವಾಸ್ ಕಾಲೇಜಿನ ಪ್ರಾಚರ‍್ಯ ಡಾ ಕುರಿಯನ್ ಇದ್ದರು. ಆಳ್ವಾಸ್ ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕೈರೋಡಿ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕಿ ಡಾ ಸುಧಾರಾಣಿ ಕರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...