ವೃತ್ತಿಪರ ವಿದ್ಯಾರ್ಥಿಗಳಿಗೆ ವೈಟ್ ಸ್ಟೋನ್ ಶರೀಫ್ ರವರ ಅಮೋಘ ಕೊಡುಗೆ !!

Date:

– ಡಿ.ಐ. ಅಬೂಕರ್ ಕೈರಂಗಳ

‌‌‌ವಿವಿಧ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಒಟ್ಟು 272 ಮಂದಿ ವಿದ್ಯಾರ್ಥಿಗಳಿಗೆ ವೈಟ್ ಸ್ಟೋನ್ ಚಾರಿಟೇಬಲ್ ಟ್ರಸ್ಟ್ ನಿಂದ ಒಟ್ಟು 41 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿದ ಸಂಭ್ರಮ ಪುತ್ತೂರು ಕಮ್ಯುನಿಟಿ ಸೆಂಟರ್ ಮಾರ್ಗದರ್ಶನದಲ್ಲಿ, ಬಿ – ಹ್ಯೂಮನ್ ಸಹ ಯೋಗ ದೊಂದಿಗೆ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.‌
ಇದು ಖಾಸಗಿ ಸಂಸ್ಥೆಯೊಂದು ನೀಡುವ ಅತ್ಯಂತ ಗರಿಷ್ಠ ಮೊತ್ತದ ವಿದ್ಯಾರ್ಥಿ ವೇತನ ಎಂದು ರಾಜ್ಯ ಮಟ್ಟದಲ್ಲೇ ದಾಖಲೆ ಸೃಷ್ಟಿಸಿದೆ.
ವೈಟ್ ಸ್ಟೋನ್ ಶರೀಫ್ ಹಾಜಿಯವರು ಶೈಕ್ಷಣಿಕ ರಂಗಕ್ಕೆ ನೀಡುತ್ತಾ ಬರುತ್ತಿರುವ ಅಮೋಘ ಕೊಡುಗೆಗಳು ಇಂದು ರಾಜ್ಯದಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.


ಪ್ರತಿಷ್ಠಿತ ಅನಿವಾಸಿ ಉದ್ಯಮ ಸಾಮ್ರಾಜ್ಯದ ಅಧಿಪತಿಯಾಗಿರುವ ವೈಟ್ ಸ್ಟೋನ್ ಶರೀಫ್ ಹಾಜಿಯವರ ಒಂದು ವಿಶಿಷ್ಠ ಸ್ವಭಾವವೆಂದರೆ ಕೊಟ್ಟ ಮಾತಿಗೆ ಯಾವತ್ತೂ ತಪ್ಪುವುದಿಲ್ಲ ಎಂಬುದು. ಯಾರಿಗೇ ಆಗಲಿ, ಏನೇ ಆಗಲಿ ಅವರು ಒಂದು ಮಾತು ಕೊಟ್ಟರೆಂದರೆ ಆ‌ ಮಾತನ್ನು ಯಾವ ಕಾರಣಕ್ಕೂ ಬದಲಾಯಿಸದೆ ಅಚಲರಾಗಿ ಕೊಟ್ಟ ಮಾತನ್ನು ಪೂರೈಸಿಯೇ ಬಿಡುತ್ತಾರೆ ಎಂದು ಅವರ ಆಪ್ತವಲಯದವರು ಹೇಳುತ್ತಾರೆ. ಇದು ನನ್ನ ಮತ್ತು ಅವರ ಒಡನಾಟದಿಂದಲೂ ನಾನು ಕೂಡಾ ಅನುಭವಿಸಿರುವ ಒಂದು ಸತ್ಯ.


‌ ‌ ಆರ್ಥಿಕ ಹಿನ್ನಡೆಯಿಂದಾಗಿ ಶಿಕ್ಷಣದಿಂದ ವಂಚಿತರಾಗುವ ಸಮುದಾಯದ ಮಕ್ಕಳಿಗೆ ವೃತ್ತಿಪರ ಶಿಕ್ಷಣ ದೊರೆತು ಅವರ ಭವಿಷ್ಯದ ಬದುಕು ಕಟ್ಟಿಕೊಳ್ಳುವಂತಹ ವ್ಯವಸ್ಥೆ ರೂಪಿಸುವುದು ಸಾಮಾನ್ಯ ಕೊಡುಗೆಯಲ್ಲ, ಮುಂದೆ ಆ ಮಕ್ಕಳು ಜೀವನದ ದಾರಿ ಕಂಡು ಕೊಂಡು ಹೆತ್ತವರಿಗೂ ಕುಟುಂಬಕ್ಕೂ ಆಸರೆಯಾಗುವಾಗ ಅದರ ಪುಣ್ಯದ ಒಂದಂಶವು ಶರೀಫ್ ಹಾಜಿಯವರಿಗೂ ಸಂದಾಯವಾಗುವುದರಲ್ಲಿ ಅನುಮಾನವಿಲ್ಲ. ಅಲ್ಲಾಹು ನೀಡಿದ ಅನುಕೂಲದಿಂದ ಬಡವರಿಗೆ ಪಾಲು ನೀಡುವ ವೈನ್ ಸ್ಟೋನ್ ಶರೀಫ್ ಹಾಜಿಯವರ ಉದಾತ್ತ ಕೊಡುಗೆಯನ್ನು ಅಲ್ಲಾಹು ಸ್ವೀಕರಿಸಲಿ, ಅವರನ್ನು ಇನ್ನಷ್ಟು ಉನ್ನತ ಮಟ್ಟಕ್ಕೇರಿಸಲಿ ಎಂದು ಪ್ರಾರ್ಥಿಸುತ್ತಿದ್ದೇನೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 21: ಮೂಡಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಮಹಾಸಭೆ

ಮೂಡಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ...

ಉಡುಪಿ: ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ; ಒಂದೂವರೆ ವರ್ಷದ ಕಂದಮ್ಮ ದಾರುಣ ಸಾವು

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ...

ಜನ ಸಾಮಾನ್ಯರಿಗೆ ಹಕ್ಕುಗಳು ನಿರಾಕರಣೆಯಾದಾಗ ಹೋರಾಟ ರೂಪಿಸುವುದು ನಾಯಕರ ಮೊದಲ ಜವಾಬ್ದಾರಿ: ಶಾಕಿರ್ ಅಳಕೆಮಜಲ್

ಬಂಟ್ವಾಳ, ಜೂನ್ 11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)...