ಬೆಳುವಾಯಿಯಲ್ಲಿ 45 ವಷ೯ಗಳ ನಂತರ ನಡೆದ ಅಪರೂಪದ ಗುಡ್ಜಿ ನೇಮ

Date:

ಮೂಡುಬಿದಿರೆ: ಬೆಳುವಾಯಿ ಗ್ರಾಮದಲ್ಲಿ 45 ವರ್ಷಗಳ ಬಳಿಕ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಗುತ್ತಿನಾರ್ ನರೇಶ್ ಶೆಟ್ಟಿ ಬರಕಳಗುತ್ತು ನೇತೃತ್ವದಲ್ಲಿ ಗುಡ್ಜಿ ನೇಮವು ಶ್ರೀ ಕುಕ್ಕಿನಂತ್ತಾಯ, ಕೊಡಮಣಿತ್ತಾಯ, ವ್ಯಾಘ್ರಚಾಮುಂಡಿ-ಪಂಜುರ್ಲಿ ಹಾಗೂ ಬ್ರಹ್ಮಬೈದರ್ಕಳ ದೈವಸ್ಥಾನ ಕಲ್ಲೋಳಿ ಪಾದೆ ಬಾಕಿಮಾರು ಗದ್ದೆಯಲ್ಲಿ ಮಂಗಳವಾರ ರಾತ್ರಿ ನಡೆಯಿತು.


ಬಾಕಿಮಾರು ಗದ್ದೆಯಲ್ಲಿ ವಿಶಾಲವಾದ ಚಪ್ಪರ, ದೈವಗಳ ಹೊಸ ಮಂಚ, 4 ಕಂಬಗಳಿಂದ 9 ಅಂತಸ್ತುಗಳನ್ನು ಒಳಗೊಂಡ ಗುಡ್ಜಿಯನ್ನು ನಿರ್ಮಿಸಲಾಗಿತ್ತು. ಎಲ್ಲಾ ಹೊಸ ಪರಿಕರಗಳಿಂದಲೇ ಗುಡ್ಜಿ ನೇಮ ನಡೆಸುವುದು ವಿಶೇಷತೆಯಾಗಿದೆ. ಬೆಳಿಗ್ಗೆ ಭಂಡಾರ ಆಗಮನದ ಬಳಿಕ ಗಣಪತಿ ಹೋಮ ನಡೆಯಿತು. ರಾತ್ರಿ ರಾಜನ್‌ದೈವ ಕುಕ್ಕಿನಂತಾಯಿ-ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ, ಪಿಲಿಚಾಮುಂಡಿ, ಪಂಜುರ್ಲಿ ದೈವಗಳ ನೇಮ ನಡೆಯಿತು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 21: ಮೂಡಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಮಹಾಸಭೆ

ಮೂಡಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ...

ಉಡುಪಿ: ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ; ಒಂದೂವರೆ ವರ್ಷದ ಕಂದಮ್ಮ ದಾರುಣ ಸಾವು

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ...

ಜನ ಸಾಮಾನ್ಯರಿಗೆ ಹಕ್ಕುಗಳು ನಿರಾಕರಣೆಯಾದಾಗ ಹೋರಾಟ ರೂಪಿಸುವುದು ನಾಯಕರ ಮೊದಲ ಜವಾಬ್ದಾರಿ: ಶಾಕಿರ್ ಅಳಕೆಮಜಲ್

ಬಂಟ್ವಾಳ, ಜೂನ್ 11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)...