ಉಳ್ಳಾಲ: ಅಸೈಗೋಳಿ ಮೆರ್ಸಿ ಫ್ರೆಂಡ್ಸ್ ಹಾಗೂ ಪಾನೀರು ಮೆರ್ಸಿದೆ ಮಕ್ಕಳ ನಿವಾಸ ವತಿಯಿಂದ ಮೆರ್ಸಿದೆ ಮಕ್ಕಳ ನಿವಾಸ ಹಾಗೂ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಭಗಿನಿ ಟ್ರೀಝಾ ಅವರಿಗೆ ನಡೆದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಮೆರ್ಸಿದೆ ಮಕ್ಕಳ ನಿವಾಸದ ಭಗಿನಿ ಮೇಲ್ಚಿಚಾರಕಿ ಲೂಸಿಯಾನ ಮಾತನಾಡಿ, ಮಕ್ಕಳ ಜೊತೆ ಅತ್ಯಂತ ಪ್ರೀತಿಯಿಂದ ಬೆರೆತು ಶಿಕ್ಷಣ ನೀಡುವ ಜೊತೆ ಶಿಸ್ತಿನ ಜೀವನ ರೂಪಿಸುವಲ್ಲಿ ಭಗಿನಿ ಟ್ರೀಝಾ ಅವರ ಶ್ರಮ ಮರೆಯಲಾಗದ್ದು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ತೋಟಗಾರಿಕಾ ಇಲಾಖೆಯ ನಿವೃತ್ತ ನೌಕರ ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ,ಆಶ್ರಮದಲ್ಲಿ ಸೇವೆ ನೀಡುವುದು ಎಂದರೆ ಸುಲಭ ಸಾಧ್ಯವಲ್ಲ, ಆದರೆ ಭಗಿನಿ ಟ್ರೀಝಾ ಅವರು ಶಿಕ್ಷಕಿಯಾಗಿ, ಆಶ್ರಮದ ಸೇವಕಿಯಾಗಿ ತಮ್ಮ ಅವಧಿಯನ್ನು ಕಳೆದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಉದ್ಯಮಿ ಮೆಲ್ವಿನ್ ಡಯಾಸ್, ಸುಪೀರಿಯರ್ ಸಿಸ್ಟರ್ ಫ್ಲ್ಯಾವ್ಯ, ಮೆರ್ಸಿ ಫ್ರೆಂಡ್ಸ್ ಅಧ್ಯಕ್ಷ ಸಂದೀಪ್ ಡಿಸೋಜ, ಸಂಚಾಲಕ ಐವನ್ ಮೊಂತೆರೋ ಮುಖ್ಯ ಅತಿಥಿಗಳಾಗಿದ್ದರು. ಮೆರ್ಸಿ ಫ್ರೆಂಡ್ಸ್ ಪದಾಧಿಕಾರಿಗಳಾದ ರೋಶನ್ ಡಿಸೋಜ, ಪ್ರದೀಪ್ ಕುಟಿನ್ಹಾ, ರಿತೇಶ್ ಟೆಲ್ಲಿಸ್, ಸಂತೋಷ್ ಡಿಸೋಜ, ಸ್ಟೀವನ್ ಪಾನೀರು, ಗ್ಲೆನ್ ಡಿಸೋಜ, ಜೈಸನ್ ಡಿಸೋಜ, ಮೈಕಲ್ ಡಿಸೋಜ, ಅರುಣ್ ವಿನ್ಸೆಂಟ್, ಪ್ರಕಾಶ್ ಡಿಸೋಜ, ಸ್ಟೀವನ್ ಪಾನೀರು, ಟೆರೆನ್ಸ್ ಡಿಸೋಜ, ಅನಿಲ್ ಪಾನೀರು, ಹರ್ಷ ಕುಟಿನ್ಹ, ವಿಲ್ಸನ್ ಕುಟಿನ್ಹ ಮೊದಲಾದವರು ಉಪಸ್ಥಿತರಿದ್ದರು.
ಮೆರ್ಸಿ ಫ್ರೆಂಡ್ಸ್ ಜಾಲತಾಣ ವಿಭಾಗದ ಪ್ರದೀಪ್ ಕುಟಿನ್ಹಾ ಸ್ವಾಗತಿಸಿದರು. ಮಾಜಿ ಸಚೇತಕ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಸನ್ಮಾನ ಪತ್ರ ವಾಚಿಸಿದರು. ಪ್ರದೀಪ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.


