“ತುಳುನಾಡ ಸಿರಿ ಮದಿಪು-2026, ತುಳು ಭಾಷೆಯ ಕಾಯ೯ಕ್ರಮಗಳಿಂದ ಪ್ರೋತ್ಸಾಹ: ತಾರಾನಾಥ ಗಟ್ಟಿ

Date:

ಮಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು 1994ರಲ್ಲಿ ತುಳು ಅಕಾಡೆಮಿಯನ್ನು ಸ್ಥಾಪಿಸಿದ್ದರಿಂದ ಶಾಲಾ-ಕಾಲೇಜುಗಳ ಒಳಗೆ ತುಳು ಭಾಷೆ ಪ್ರವೇಶ ಮಾಡಲು ಸಾಧ್ಯವಾಯಿತು. ತುಳು ತುಳು ಭಾಷೆಯ ಕಾಯ೯ಕ್ರಮಗಳನ್ನು ಆಯೋಜಿಸುವುದರಿಂದ ತುಳು ಭಾಷೆಯನ್ನು ಕಲಿಯುವವರಿಗೆ, ತುಳುವಿನಲ್ಲಿ ಹಾಡನ್ನು ಹಾಡುವವರಿಗೆ, ಸಾಹಿತ್ಯ ಬರೆಯುವವರಿಗೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದು ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.


ಅವರು ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ, ಮೂಡಬಿದಿರೆಯ ಶ್ರೀ ಮಹಾವೀರ ಪ್ರಥಮ ದಜೆ೯ ಕಾಲೇಜು ಹಾಗೂ ಹಳೆ ವಿದ್ಯಾಥಿ೯ ಸಂಘದ ವತಿಯಿಂದ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಮಂಗಳೂರು ವಿವಿ ಮಟ್ಟದ ಸಾಂಸ್ಕೃತಿಕ -ಸಾಹಿತ್ಯಿಕ ಕಾಯ೯ಕ್ರಮ “ತುಳುನಿಡ ಸಿರಿ ಮದಿಪು-2026″ನ್ನು ಉದ್ಘಾಟಿಸಿ ಮಾತನಾಡಿದರು.


ಸನ್ಮಾನ: ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ಜಾನಪದ ಕಲಾವಿದ ವೆಂಕಟೇಶ ಬಂಗೇರಾ ಅವರನ್ನು ಸನ್ಮಾನಿಸಲಾಯಿತು.


ಖ್ಯಾತ ರಂಗ ಕಲಾವಿದ, ಚಲನಚಿತ್ರ ನಟ “ತುಳುನಾಡ ಮಾಣಿಕ್ಯ” ಅರವಿಂದ ಬೋಳಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ತುಳು ಭಾಷೆಯ ಸಂಸ್ಕೃತಿ-ಸಂಪ್ರದಾಯವನ್ನು ನಾವು ರಂಗಭೂಮಿ ಮತ್ತು ಯಕ್ಷಗಾನದ ಮೂಲಕ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ವ್ಯವಹಾರಕ್ಕೆ ಇಂಗ್ಲೀಷನ್ನು ಬಳಕೆ ಮಾಡಿ ಆದರೆ ಮನೆಯಲ್ಲಿ ತುಳುವಿನಲ್ಲಿಯೇ ಮಾತನಾಡಿ ಎಂದು ಸಲಹೆ ನೀಡಿದ ಅವರು ನನಗೆ ಅನ್ನ, ಆಶ್ರಯ, ಮಕ್ಕಳಿಗೆ ಮದುವೆ ಮಾಡಿದ್ದು ತುಳುನಾಡು.ತುಳು ಭಾಷೆ ನನಗೆ ಶ್ವಾಸವಿದ್ದಂತೆ ಇದನ್ನೆಂದಿಗೂ ಮರೆಯಲಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟೇಶ್ ಬಂಗೇರಾ ಅವರು ನಮ್ಮ ನಾಡಿದ ಕಲೆಗಳಾದ ಯಕ್ಷಗಾನ ಮತ್ತು ಭರತನಾಟ್ಯದ ವೇಷ ಭೂಷಣಗಳನ್ನು ವೇದಿಕೆಗಳಲ್ಲಿ ವಿಕೃತಗೊಳಿಸದಿರಿ. ತುಳುನಾಡಿನ ದೈವ, ದೇವರುಗಳ ಹೆಸರನ್ನು ಹಾಳು ಮಾಡದಿರಿ ಎಂದು ವಿದ್ಯಾಥಿ೯ಗಳಿಗೆ ಸಲಹೆ ನೀಡಿದರು.

ಎಂಸಿಎಸ್ ಬ್ಯಾಂಕಿನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್. ಡಿ. ಸಾಮ್ರಾಜ್ಯ, ಹಳೆ ವಿದ್ಯಾಥಿ೯ ಸಂಘದ ಅಧ್ಯಕ್ಷ ನಾಗರಾಜ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಬಾಬು ಕೊರಗ ಪಾಂಗಾಳ, ಕಂಬಳ ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ ಉಪಸ್ಥಿತರಿದ್ದರು. ಪ. ಪೂ. ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮೀ, ವಿದ್ಯಾಥಿ೯ ಕ್ಷೇಮಪಾಲನಾ ಅಧಿಕಾರಿಗಳಾದ ಹರೀಶ್ ಮತ್ತು ಸಾಕ್ಷಿ ಶೆಟ್ಟಿ, ತುಳು ಸಂಘದ ಕಾಯ೯ದಶಿ೯ ರಂಜಿತ್, ವಿದ್ಯಾಥಿ೯ ಸಂಯೋಜಕರಾದ ರಶ್ಮಿತಾ, ಶಾರದಾ, ಚರಿತ್ರ, ವಿದ್ಯಾಥಿ೯ ಸಂಯೋಜಕರಾದ ನವ್ಯ, ಮೊಹಮ್ಮದ್, ಜುನೈದ್, ಸಂಶೋಧ್, ಶರಣ್, ನಿವೇದಿತಾ, ರಿತೇಶ್ ಮತ್ತು ಸುಜಿತ್ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಕಾಯ೯ಕ್ರಮ ಸಂಯೋಜಕಿ ಪೂಣಿ೯ಮಾ ಸನ್ಮಾನ ಪತ್ರ ವಾಚಿಸಿದರು. ಮಂದಾರ ಕಾಯ೯ಕ್ರಮ ನಿರೂಪಿಸಿದರು. ಸಂಘಟನಾ ಸಮಿತಿಯ ಪ್ರವೀಣ್ ಭಂಡಾರಿ ವಂದಿಸಿದರು. ನಂತರ ವಿವಿಧ ಕಾಲೇಜುಗಳ ವಿದ್ಯಾಥಿ೯ಗಳಿಂದ ಸ್ಪಧೆ೯ಗಳು ನಡೆದವು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ದಾವಣಗೆರೆ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ...

ಜೂನ್ 21: ಮೂಡಬಿದಿರೆಯಲ್ಲಿ ಜಿಲ್ಲಾ ಕಂಬಳ ಸಮಿತಿ ಮಹಾಸಭೆ

ಮೂಡಬಿದಿರೆ: ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ...

ಉಡುಪಿ: ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ; ಒಂದೂವರೆ ವರ್ಷದ ಕಂದಮ್ಮ ದಾರುಣ ಸಾವು

ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ...

ಜನ ಸಾಮಾನ್ಯರಿಗೆ ಹಕ್ಕುಗಳು ನಿರಾಕರಣೆಯಾದಾಗ ಹೋರಾಟ ರೂಪಿಸುವುದು ನಾಯಕರ ಮೊದಲ ಜವಾಬ್ದಾರಿ: ಶಾಕಿರ್ ಅಳಕೆಮಜಲ್

ಬಂಟ್ವಾಳ, ಜೂನ್ 11: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)...