ದ.ಕ. ಜಿಲ್ಲಾ‌ ಮಟ್ಟದ ಆನ್ ಲೈನ್ ಖಿರಾಅತ್ ಸ್ಪರ್ಧೆ

Date:

ಪ್ರಥಮ ಮಿಸ್ಹಬ್ ಬಿನ್ ಅಬೂಬಕರ್ ಸಿದ್ದೀಕ್, ದ್ವಿತೀಯ ಜಿ.ಎಂ.ಮುಹಮ್ಮದ್ ಸಲ್ಮಾನ್, ತೃತೀಯ ಅಬ್ದುಲ್ ಖಾದರ್ ರಶಾದ್

ಮಂಗಳೂರು: ಮರ್ಹೂಮ್ ಮಾಚಾರ್ ಅಬ್ದುಲ್ಲಾ ಹಾಗೂ ಮರ್ಹೂಮ್ ಎಸ್.ಎ.ಮೋನಬ್ಬ ಮಿತ್ತೂರು ಅವರ ಸ್ಮರಣಾರ್ಥ ದ.ಕ. ಜಿಲ್ಲಾ ಮಟ್ಟದ ಆನ್ ಲೈನ್ ಖಿರಾಅತ್ ಸ್ಪರ್ಧೆ-2026 ನಡೆಯಿತು. ಒಟ್ಟು 237 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಹಂತದಲ್ಲಿ 32 ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಎರಡನೇ ಹಂತದಲ್ಲಿ 11 ಸ್ಪರ್ಧಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಫೈನಲ್ ರೌಂಡ್ ಗೂಗಲ್ ಮೀಟ್ ಮೂಲಕ ನಡೆದಿದ್ದು ಉಳ್ಳಾಲ ಮುಕ್ಕಚೇರಿ ನಿವಾಸಿ ಅಬೂಬಕರ್ ಸಿದ್ದೀಕ್ ಹಾಗೂ ಹಸೀನಾ ಬಾನು ದಂಪತಿಗಳ ಪುತ್ರ ಮಿಸ್ಹಬ್ ಬಿನ್ ಅಬೂಬಕರ್ ಸಿದ್ದೀಕ್ ಪ್ರಥಮ ಸ್ಥಾನ, ಪಾಣೆಮಂಗಳೂರು ಬಂಗ್ಲೆಗುಡ್ಡೆ ನಿವಾಸಿ ಹಾಫಿಝ್ ಜಿ.ಎಂ.ಸುಲೈಮಾನ್ ಹನೀಫಿ ಹಾಗೂ ಸುಮಯ್ಯ ದಂಪತಿಗಳ ಪುತ್ರ ಜಿ.ಎಂ.ಮುಹಮ್ಮದ್ ಸಲ್ಮಾನ್ ದ್ವಿತೀಯ ಸ್ಥಾನ, ಬೆಳ್ತಂಗಡಿ ಪೆರಿಂಜೆ ನಿವಾಸಿ ಮುಹಮ್ಮದ್ ಮುಸ್ತಫಾ ಹಾಗೂ ಅಸ್ಮಾ ದಂಪತಿಗಳ ಪುತ್ರ ಅಬ್ದುಲ್ ಖಾದರ್ ರಶಾದ್ ತೃತೀಯ ಸ್ಥಾನ ಪಡೆದಿರುತ್ತಾರೆ.

ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಸೌದಿ ಅರೇಬಿಯಾ ಉದ್ಯಮಿ ಶೌಕತ್ ಅಲಿ ಬಂಟ್ವಾಳ ಹಾಗೂ ಎಸ್.ಎ.ರಹಿಮಾನ್ ಮಿತ್ತೂರು ಪ್ರಾಯೋಜಿಸಿದ್ದಾರೆ. ಆಶಿಕ್ ಕುಕ್ಕಾಜೆ ಹಾಗೂ ಶಫೀಕ್ ಕೌಸರಿ ಕುಕ್ಕಾಜೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರಥಮ ಬಹುಮಾನ: ರೂ 11,111 ನಗದು ಹಾಗೂ ಪ್ರಶಸ್ತಿ ಪತ್ರ; ದ್ವಿತೀಯ ಬಹುಮಾನ ರೂ. 5555 ಹಾಗೂ ಪ್ರಶಸ್ತಿ ಪತ್ರ ಮೂರನೇ ಬಹುಮಾನ ರೂ 3333 ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಅಲ್ಲದೆ ಉತ್ತಮ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.


ಕಾರ್ಯಕ್ರಮದ ತೀರ್ಪುಗಾರರಾಗಿ ಹಾಫಿಝ್ ಮುಹಮ್ಮದ್‌ ಫರ್ಹಾನ್, ಶಾಹಿದ್ ಅಮಾನಿ ಚೆರ್ವತ್ತೂರು ಹಾಗೂ ಹೈದರ್ ಅಲಿ ಹಿಮಮಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಫೀಕ್ ಕೌಸರಿ ಕುಕ್ಕಾಜೆ ಪ್ರಾಸ್ತಾವಿಕ ಮಾತನಾಡಿದರು. ಶೌಕತ್ ಅಲಿ ಬಂಟ್ವಾಳ ಹಾಗೂ ಎಸ್.ಎ. ರಹಿಮಾನ್ ಮಿತ್ತೂರು ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು. ಆಶಿಕ್ ಕುಕ್ಕಾಜೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕನ್ನಡ ಮಾಧ್ಯಮ ಸರಕಾರಿ ಶಾಲೆಯ ಶಹಝಾದ್ ಗುರುವಾಯನಕೆರೆ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ

ಬೆಳ್ತಂಗಡಿ; ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಶಹಝಾದ್...

ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ.ಅಬ್ದುಲ್‌ ಶಕೀಲ್

ಮಂಗಳೂರು: ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸದಸ್ಯ...

ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ ವಿಚಾರ ಕೈಬಿಡಲು ಮನವಿ: ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ

ಮಂಗಳೂರು: ಇಲಾಖೆಯೊಳಗಿನ ಸಣ್ಣಪುಟ್ಟ ಗೊಂದಲಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷ್ನರ್ ವರ್ಗಾವಣೆ...

ಕಣಚೂರು ಸಮೂಹ ಸಂಸ್ಥೆಗಳ ಪದವಿ ಪ್ರಧಾನ, ರಾಜ್ಯಕ್ಕೆ ಚಿನ್ನ ಗಳಿಸಿದ ನರ್ಸಿಂಗ್ ವಿದ್ಯಾರ್ಥಿನಿ

ಉಳ್ಳಾಲ: ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ 2026ನೇ ಸಾಲಿನ ಪದವಿ ಪ್ರದಾನ...