ಮಂಗಳೂರು ಪೊಲೀಸ್ ಕಮಿಷನರ್ ವರ್ಗಾವಣೆ ವಿಚಾರ ಕೈಬಿಡಲು ಮನವಿ: ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ

Date:

ಮಂಗಳೂರು: ಇಲಾಖೆಯೊಳಗಿನ ಸಣ್ಣಪುಟ್ಟ ಗೊಂದಲಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷ್ನರ್ ವರ್ಗಾವಣೆ ವಿಚಾರ ಹೊರಬಾರದಂತೆ ಮಾಡಬೇಕೆಂದು ಡ್ರಗ್ಸ್ ಮುಕ್ತ ಸಮಾಜದ ಆಂದೋಲನದ ಸಾರಥಿ ಇಕ್ಬಾಲ್ ಬಾಳಿಲ ಅವರು ಡಿಜಿಪಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಪೊಲೀಸ್ ಇಲಾಖೆಯ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ತಮ್ಮ ಮೇಲೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಿಸಿಆರ್ ಎಸ್ಪಿ ಕಾಶಿನಾಥ್ ಅವರು ಡಿಜಿಪಿಗೆ ಪತ್ರ ಬರೆದಿರುವ ವಿಚಾರ ಕರಾವಳಿ ಭಾಗದಾದ್ಯಂತ ಆತಂಕದ ವಾತಾವರಣವನ್ನು ಉಂಟುಮಾಡಿದೆ.

ಈ ಹಿನ್ನೆಲೆದಲ್ಲಿ, ಎಸ್ಪಿ ಕಾಶಿನಾಥ್ ಅವರಿಗೆ ಯಾವುದೇ ರೀತಿಯ ಮಾನಸಿಕ ಹಿಂಸೆ ಅಥವಾ ಅನ್ಯಾಯವಾಗಿದ್ದರೆ, ಅದಕ್ಕೆ ನ್ಯಾಯಯುತ ಪರಿಹಾರವನ್ನು ಡಿಜಿಪಿ ಕಂಡುಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ವರ್ಗಾವಣೆ ವಿಚಾರ ಮುಂದಕ್ಕೆ ಬರಬಾರದು ಎಂದು ಇಕ್ಬಾಲ್ ಬಾಳಿಲ ಮನವಿಯಲ್ಲಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷ ಹಿಂದೆ ಕರಾವಳಿ ಪ್ರದೇಶದಲ್ಲಿ ಕೋಮು ಕಲಹದ ವಾತಾವರಣ ಮತ್ತು ಮಾದಕ ವಸ್ತುಗಳ ಅಟ್ಟಹಾಸ ಗಂಭೀರ ಮಟ್ಟಕ್ಕೇರಿದ್ದ ಸಂದರ್ಭದಲ್ಲಿ, ಸುಧೀರ್ ಕುಮಾರ್ ರೆಡ್ಡಿ ಅವರನ್ನು ಮಂಗಳೂರು ಕಮಿಷ್ನರ್ ಆಗಿ ನೇಮಕ ಮಾಡಲಾಗಿತ್ತು. ಅವರ ನೇಮಕಾತಿಯ ನಂತರ, ಹಿಂದಿನಿಂದಲೂ ಇದ್ದ ಸೌಹಾರ್ದಯುತ ವಾತಾವರಣವನ್ನು ಪುನಃ ಸ್ಥಾಪಿಸುವಲ್ಲಿ ಹಾಗೂ ಡ್ರಗ್ಸ್ ಮಾಫಿಯಾಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಡ್ರಗ್ಸ್ ವಿರೋಧಿ ಆಂದೋಲನದ ಭಾಗವಾಗಿ ಹಲವಾರು ಬಾರಿ ಕಮಿಷ್ನರ್ ಜೊತೆ ಚರ್ಚೆ ನಡೆಸಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸಮಾಜಮುಖಿ ಚಟುವಟಿಕೆಗಳಿಗೆ ಅವರಿಂದ ಸಾಕಷ್ಟು ಪ್ರೇರಣೆ ಮತ್ತು ಸಹಕಾರ ದೊರೆತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಸುಧೀರ್ ಕುಮಾರ್ ರೆಡ್ಡಿ ಅವರ ಸೇವೆ ಅಗತ್ಯವಾಗಿದ್ದು, ಕೆಲವು ಅಪ್ರತ್ಯಕ್ಷ ಶಕ್ತಿಗಳ ಪ್ರಭಾವದಿಂದ ವರ್ಗಾವಣೆಗೆ ಪ್ರಯತ್ನಗಳು ನಡೆಯುತ್ತಿದ್ದರೆ, ಅದನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿದೆ.

ಈ ಕುರಿತು ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಕೂಡ ಪತ್ರ ಬರೆಯುವುದಾಗಿ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ. ಕರಾವಳಿ ಭಾಗದ ಶಾಂತಿಯನ್ನು ಬಯಸುವ ಜನತೆಗೆ ಸುಧೀರ್ ಕುಮಾರ್ ರೆಡ್ಡಿ ಅವರಂತಹ ಅಧಿಕಾರಿಯ ಅವಶ್ಯಕತೆ ಇದೆ ಎಂದು ಕೂಡ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕನ್ನಡ ಮಾಧ್ಯಮ ಸರಕಾರಿ ಶಾಲೆಯ ಶಹಝಾದ್ ಗುರುವಾಯನಕೆರೆ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ

ಬೆಳ್ತಂಗಡಿ; ನಮ್ಮೂರ ಪ್ರೌಢ ಶಾಲೆ ಗುರುವಾಯನಕೆರೆ ಇಲ್ಲಿನ ವಿದ್ಯಾರ್ಥಿ ಮಹಮ್ಮದ್ ಶಹಝಾದ್...

ರಾಘವ್ ಚಡ್ಡಾ ಬಿಜೆಪಿ ಸೇರ್ಪಡೆ: ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಾ.ಅಬ್ದುಲ್‌ ಶಕೀಲ್

ಮಂಗಳೂರು: ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸದಸ್ಯ...

ದ.ಕ. ಜಿಲ್ಲಾ‌ ಮಟ್ಟದ ಆನ್ ಲೈನ್ ಖಿರಾಅತ್ ಸ್ಪರ್ಧೆ

ಪ್ರಥಮ ಮಿಸ್ಹಬ್ ಬಿನ್ ಅಬೂಬಕರ್ ಸಿದ್ದೀಕ್, ದ್ವಿತೀಯ ಜಿ.ಎಂ.ಮುಹಮ್ಮದ್ ಸಲ್ಮಾನ್, ತೃತೀಯ...

ಕಣಚೂರು ಸಮೂಹ ಸಂಸ್ಥೆಗಳ ಪದವಿ ಪ್ರಧಾನ, ರಾಜ್ಯಕ್ಕೆ ಚಿನ್ನ ಗಳಿಸಿದ ನರ್ಸಿಂಗ್ ವಿದ್ಯಾರ್ಥಿನಿ

ಉಳ್ಳಾಲ: ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ 2026ನೇ ಸಾಲಿನ ಪದವಿ ಪ್ರದಾನ...