ವಿದ್ಯಾರ್ಥಿ ಫೆಡರೇಶನ್ (SFI)ನ ದ.ಕ.ಜಿಲ್ಲಾ ಸಮಾವೇಶವು ನಗರದ ಡಾನ್ ಬಾಸ್ಕೋ ಹಾಲ್ ನಲ್ಲಿ ಬಿ ಕೆ ಇನಾಜ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಜಿಲ್ಲೆಯ ಜನಪದ ವಿದ್ವಾಂಸರೂ,ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಸಮಾವೇಶವನ್ನು ಉದ್ಘಾಟಿಸಿದರೆ,SFI ಕರ್ನಾಟಕ ರಾಜ್ಯಾಧ್ಯಕ್ಷರಾದ ಶಿವಪ್ಪ ಅಂಬ್ಲಿಕಲ್ ರವರು ಇಡೀ ಸಮಾವೇಶವು ಸುಸೂತ್ರವಾಗಿ ನಡೆಯುವಂತೆ ಮಾರ್ಗದರ್ಶನ ನೀಡಿದರು. ಸಮಾವೇಶವು ಮುಂದಿನ ಸಾಲಿಗೆ ನೂತನ ದ.ಕ.ಜಿಲ್ಲಾ ಸಮಿತಿಯನ್ನು ಆಯ್ಕೆಗೊಳಿಸಿತು.

ನೂತನ ಅಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ ಹಾಗೂ ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರುರವರು ಸರ್ವಾನುಮತದಿಂದ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಲಿಖಿತ್ ವಾಮಂಜೂರು, ಅಲ್ಮಾಸ್, ರೋನ್ ಸನ್ ಡಿಸೋಜ, ಅವಿಶಾ ಡಿಸೋಜ ಪಂಜಿಮೊಗರು,ಸಮನ್ವಿ ಬಜಾಲ್,ಪ್ರೇಮ್ ಮದ್ಯ, ಮಿನಹಾಜ್ ದೇರಳಕಟ್ಟೆ, ಸಹಕಾರ್ಯದರ್ಶಿಗಳಾಗಿ ಚಿರಾಗ್ ಕುತ್ತಾರ್,ಇಶಾನ್, ಶ್ರಮಾ,ಇಂಚರಾ ಎಸ್ ಬಜಾಲ್,ಸನನ್ವಿ ಬಜಾಲ್, ನೋಯಲ್ ಸ್ಟೀಫನ್ ಡಿಸೋಜ, ಶಯಾನ್,ರಂಜಿತ್ ಕೊಯ್ಯೂರುರವರನ್ನು ಆರಿಸಲಾಯಿತು.ಹಾಗೂ ಜಿಲ್ಲೆಯ ವಿವಿಧ ಕಾಲೇಜ್ ಗಳಿಂದ 35 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.


