ಕಣಚೂರ್ ಫಿಸಿಯೋಥೆರಪಿ ಕಾಲೇಜಿನ ಪ್ರಥಮ ಅಲ್ಯೂಮ್ನಿ ಮೀಟ್-2026

Date:


ದೇರಳಕಟ್ಟೆ: ಕಣಚೂರ್ ಫಿಸಿಯೋಥೆರಪಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಪ್ರಥಮ ಅಲ್ಯೂಮ್ನಿ ಮೀಟ್-2026 ಹಾಗೂ ಅಲ್ಯೂಮ್ನಿ ಯೂನಿಯನ್ ಕೌನ್ಸಿಲ್ ಉದ್ಘಾಟನಾ ಕಾರ್ಯಕ್ರಮ ಕಣಚೂರ್ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆಯಿತು.

ಹಳೆ ವಿದ್ಯಾರ್ಥಿಗಳ ಪ್ರಥಮ ಅಲ್ಯೂಮ್ನಿ ಮೀಟ್-2026 ಹಾಗೂ ಅಲ್ಯೂಮ್ನಿ ಯೂನಿಯನ್ ಕೌನ್ಸಿಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಕಣಚೂರ್ ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ‌ ಡಾ. ಹಾಜಿ ಯು.ಕೆ. ಮೋನು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಹಳೆ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಅಲ್ಯೂಮ್ನಿ ಸಂಘದ ಪ್ರಮುಖ ಉದ್ದೇಶವಾಗಿದೆ. ಹಳೆ ವಿದ್ಯಾರ್ಥಿಗಳ ಅನುಭವ ಮತ್ತು ಸಹಕಾರವು ಪ್ರಸ್ತುತ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕಾಲೇಜಿನ ಅಭಿವೃದ್ಧಿಯಲ್ಲಿ ಅಲ್ಯೂಮ್ನಿ ಸಂಘವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.

ಕಣಚೂರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರ್ ಹೆಲ್ತ್ ಸೈನ್ಸಸ್ ಅಡ್ವೈಸರಿ ಕೌನ್ಸಿಲ್‌ನ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕೌನ್ಸಿಲ್ ಸದಸ್ಯ ಡಾ. ಎಂ. ವೆಂಕಟ್ರಾಯ ಪ್ರಭು,
ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೊನಿಸ್, ವೈದ್ಯಕೀಯ ಅಧೀಕ್ಷಕ ಡಾ. ಆಂಜನ್ ಕುಮಾರ್ ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿಗಳಾದ ಡಾ. ರೂಬಾ, ಡಾ. ಅತೂಲಿಯ್ಯ ಅಲ್ಯೂಮ್ನಿ ಮೀಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.

ಕಣಚೂರ್ ಫಿಸಿಯೋಥೆರಪಿ ಕಾಲೇಜಿನ ಡೀನ್ ಡಾ.‌ ಮೊಹಮ್ಮದ್ ಸುಹೈಲ್ ಸ್ವಾಗತಿಸಿದರು. ಪ್ರಾಂಶುಪಾಲೆ ಡಾ. ರೇಶ್ಮ ಹಿಕರಾ ವಂದಿಸಿದರು‌. ಉಪನ್ಯಾಸಕಿ ಡಾ. ಶಮೀಮಾ‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...