ಸಮರ್ಪಣಾ ಪರಿವಾರ್ ‘ಮುದ್ದುಕೃಷ್ಣ–2026’ ಉತ್ಸವಕ್ಕೆ ಚಾಲನೆ

Date:

ಉಳ್ಳಾಲ: ಹಿಂದೆ ಮುದ್ದುಕೃಷ್ಣ ಸ್ಪರ್ಧೆಗಳನ್ನು ವೀಕ್ಷಿಸಲು ಮಂಗಳೂರಿಗೆ ಹೋಗಬೇಕಿತ್ತಾದರೂ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ನಡೆಯುತ್ತಿದೆ. ಶ್ರೀ ಕೃಷ್ಣನ ಸಂದೇಶವನ್ನು ಸ್ಪರ್ಧೆಯ ಮೂಲಕ ಅಯೋಜಿಸಿ ಮಕ್ಕಳನ್ನು ಧಾರ್ಮಿಕವಾಗಿ ಸಿದ್ಧಪಡಿಸುವ ಅವಶ್ಯಕತೆಯಿದೆ ಎಂದು ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಅನಿಲ್ ದಾಸ್ ಹೇಳಿದರು. ‌


ಸಮರ್ಪಣಾ ಪರಿವಾರ ಟ್ರಸ್ಟ್ ಮಂಗಳೂರು ಹಾಗೂ ಮುದ್ದುಕೃಷ್ಣ ಉತ್ಸವ ಸಮಿತಿಯಿಂದ ಕೊಲ್ಯ ಕುಲಾಲ ಮಂದಿರ ಸಭಾಂಗಣದಲ್ಲಿ ಭಾನುವಾರ ನಡೆದ ನಾಲ್ಕನೇ ವರ್ಷದ ‘ಮುದ್ದುಕೃಷ್ಣ–2026’ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಂಗಳೂರು ವಿವಿ ನಾರಾಯಣ ಗುರು ಅಧ್ಯಯನ ಪೀಠದ ಸದಸ್ಯ ಆನಂದ ಕೆ.ಅಸೈಗೋಳಿ ಮಾತನಾಡಿ, ಶ್ರೀ ಕೃಷ್ಣ ಎಳೆವೆಯಲ್ಲಿ ಬೆಣ್ಣೆ ಕದ್ದು ತಿಂದಿದ್ದು ತುಂಟಾಟಿಕೆಯೇ ಹೊರತು ಅದು ಕಳ್ಳತನವಲ್ಲ,
16 ಸಾವಿರ ಹೆಂಡತಿಯರು ಇದ್ದರೆನ್ನುವುದು ಶುದ್ಧ ತಪ್ಪು, ದೇವರ ಹೆಸರು ಹಾಳುಮಾಡಲು ಮನುಷ್ಯ ಮಾಡಿದ ವ್ಯವಸ್ಥಿತ ಹುನ್ನಾರ ಎಂದು ಖೇದ ವ್ಯಕ್ತಪಡಿಸಿದರು.

ವೇದಮೂರ್ತಿ ಪ್ರಶಾಂತ್ ಉಡುಪ ನೇತೃತ್ವದಲ್ಲಿ
ಕೃಷ್ಣಾರಾಧನೆ ನಡೆಯಿತು. ಮಾಡೂರು ಶ್ರೀ ಅಯ್ಯಪ್ಪ ಮಂದಿರದ ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬೆಲ್ಮ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹರೀಶ್ ಕುಮಾರ್, ಗುತ್ತಿಗೆದಾರ ಆನಂದ ಕೊಂಡಾಣ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಕೆ.ಗಟ್ಟಿ, ಮುದ್ದುಕೃಷ್ಣ ಉತ್ಸವ ಸಮಿತಿ ಅಧ್ಯಕ್ಷ ಜೀವನ್ ಕೆ.ಪಿ. ಮಾಡೂರು, ಪ್ರಧಾನ ಕಾರ್ಯದರ್ಶಿ ವಸಂತ್ ಕೋಡಿ ಮಂಜನಾಡಿ, ಸಮರ್ಪಣಾ ಪರಿವಾರ್ ಟ್ರಸ್ಟ್ ಉಪಾಧ್ಯಕ್ಷರಾದ ಎ.ಕೆ.ಬಾಬು, ವಸಂತ ರೈ ಬಿ.ಕೆ., ಕೋಶಾಧಿಕಾರಿ ರಾಮಚಂದ್ರ ಆಚಾರ್ಯ ದೇರಳಕಟ್ಟೆ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಶೆಟ್ಟಿ, ಸ್ಪರ್ಧಾ ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಕುಸುಮ ಪ್ರಶಾಂತ್, ಸೌಮ್ಯ ಶಿರ್ಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಸಮರ್ಪಣಾ ಪರಿವಾರ್ ಟ್ರಸ್ಟ್ ಅಧ್ಯಕ್ಷ ಮೋಹನ್ ಶಿರ್ಲಾಲ್ ಸ್ವಾಗತಿಸಿದರು. ವಸಂತ ಕೋಡಿ ವಂದಿಸಿದರು. ಜಗನ್ನಾಥ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...