ತುಳು ಭಾಷೆಗೆ ಹೆಚ್ಚುವರಿ ರಾಜ್ಯ ಭಾಷೆಯ ಸ್ಥಾನಮಾನ – ಬಹರೈನ್ ನಲ್ಲಿ ಸಂಭ್ರಮಾಚರಣೆ.

Date:

ಮಂಗಳೂರಿನಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಳು ಭಾಷೆಗೆ ಹೆಚ್ಚುವರಿ ರಾಜ್ಯ ಭಾಷೆಯ ಸ್ಥಾನಮಾನ ದೊರೆತಿರುವ ಬಗ್ಗೆ ಬಹರೈನ್ ನಲ್ಲಿ ಸಂಭ್ರಮಾಚರಣೆ ಜರಗಿತು. ಬಹರೈನ್ ನ ಪಾಪ್ಪಿಲ್ಲಾನ್ ಸಭಾಂಗಣದಲ್ಲಿ ತುಳುವರು ಬೆರೆತು ತಮ್ಮ ಸಂತೋಷವನ್ನು ಹಂಚಿಕೊಂಡರು. ಬಹರೈನ್ ತುಳು ಕೂಟದ ಮುಖ್ಯ ಸಂಘಟಕರಾದ ಹಾಗೂ ಬಹರೈನ್ ಅನಿವಾಸಿ ಕನ್ನಡಿಗ ವೇದಿಕೆಯ ಅಧ್ಯಕ್ಷರಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ರಾಜ್ ಕುಮಾರ್ ರವರು ಮಾತನಾಡಿ ವಿಶ್ವದಾದ್ಯಂತ ಹಂಚಿ ಹೋಗಿರುವ ತುಳುವರು ಇಂದು ಸಂಭ್ರಮ ಪಡುವ ದಿನ. ಕರ್ನಾಟಕ ಸರಕಾರ ಹಾಗೂ ಮುಖ್ಯ ಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ರವರಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಇತ್ತೀಚೆಗಷ್ಟೇ ಸಚಿವ ಶ್ರೀ ಶಿವರಾಜ್ ತಂಗಡಗಿ ಮತ್ತು ಶಾಸಕ ಶ್ರೀ ಅಶೋಕ ರೈ ಯವರು ಬಹರೈನ್ ಗೆ ಬಂದಿದ್ದಾಗ ಬಹರೈನ್ ನ ತುಳುವರು ಈ ಬಗ್ಗೆ ಒತ್ತಾಯಿಸಿದ್ದರು. ಕೊನೆಗೂ ನಮ್ಮ ಕನಸು ನನಸಾಗಿದೆ ಎಂದು ವಿವರಿಸಿದರು. ಬಹರೈನ್ ದೇಶದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿ ತುಳುವರಿದ್ದು ರಾಜ್ಯ ಭಾಷೆಯ ಸ್ಥಾನಮಾನ ಎಲ್ಲರಿಗೂ ಖುಷಿ ತಂದಿದೆ. ಕೊಲ್ಲಿ ದೇಶಗಳಲ್ಲೇ ಅತ್ಯಂತ ಹೆಚ್ಚು ತುಳು ಚಟುವಟಿಕೆಗಳು ಬಹರೈನ್ ನಲ್ಲಿ ಕಳೆದ ಐವತ್ತು ವರುಷಗಳಿಂದ ಜರಗುತ್ತಿವೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...