ಪ್ರಾಮಾಣಿಕತೆ ಮೆರೆದ ಚಾಲಕ: ವಾರಸುದಾರರಿಗೆ ವಾಪಸ್!
ಮಂಗಳೂರು: ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮರೆತು ಬಿಟ್ಟುಹೋದ ಸುಮಾರು 48 ಗ್ರಾಂ ತೂಕದ ಚಿನ್ನದ ಸರವನ್ನು ರಿಕ್ಷಾ ಚಾಲಕರೊಬ್ಬರು ಪ್ರಾಮಾಣಿಕತೆಯಿಂದ ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಮಹಿಳೆ ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಚಿನ್ನದ ಸರವನ್ನು ರಿಕ್ಷಾದಲ್ಲೇ ಮರೆತು ಹೋಗಿದ್ದರು. ಬಳಿಕ ರಿಕ್ಷಾ ಚಾಲಕನಿಗೆ ಚಿನ್ನದ ಸರ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸುಲ್ತಾನ್ ಗೋಲ್ಡ್ ಟಾಪ್ನಲ್ಲಿದ್ದ ಚಿನ್ನದ ಸರವನ್ನು ಪತ್ತೆಹಚ್ಚಿದ ಚಾಲಕ, ಯಾವುದೇ ಸ್ವಾರ್ಥವಿಲ್ಲದೆ ಪೊಲೀಸರ ಸಹಾಯದಿಂದ ಅದರ ವಾರಸುದಾರರನ್ನು ಪತ್ತೆಹಚ್ಚಿ ಚಿನ್ನವನ್ನು ಹಿಂತಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಲಕನ ಈ ಪ್ರಾಮಾಣಿಕತೆ ಹಾಗೂ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. 48 ಗ್ರಾಂ ಚಿನ್ನವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆಗೆ ಉತ್ತಮ ಮಾದರಿಯಾಗಿದ್ದಾರೆ.


