ಮಂಜನಾಡಿ: ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಎಂ.ಕೆ. ಅಬ್ಬಾಸ್ ಮದ್ಪಾಡಿ (56) ಅವರು ಹೃದಯಾಘಾತದಿಂದ ಇಂದು ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮಂಜನಾಡಿ ಗ್ರಾಮ ಪಂಚಾಯತ್ನಲ್ಲಿ ಮೂರು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಕಾಂಗ್ರೆಸ್ ಮಂಜನಾಡಿ ಗ್ರಾಮ ಸಮಿತಿ ಉಪಾಧ್ಯಕ್ಷರಾಗಿ, ಉರುಮಣೆ ಮೊಯ್ಯದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.
ಸಚಿವ ಯು.ಟಿ ಖಾದರ್ ಫರೀದ್, ಮಾಜಿ ಜಿ.ಪಂ ಸದಸ್ಯ ಹಾಜಿ ಎನ್.ಎಸ್ ಕರೀಂ, ಹಮೀದ್ ಮದ್ಪಾಡಿ, ಮೋನು ಕಲ್ಕಟ್ಟ ಸಂತಾಪ ಸೂಚಿಸಿದಾರೆ.


