
ಬಂಟ್ವಾಳ: ಸಜಿಪ ಮೂಡ ಗ್ರಾಮದ ಬೊಳ್ಳಾಯಿಯ ಕಂಚಿಲದಲ್ಲಿ ವಾಸವಿದ್ದ ಕುಕ್ಕಾಜೆ ನಿವಾಸಿ ಹಂಝ ಕಲ್ಲಕಂಡ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಇದ್ದು ಇಂದು ನಿಧನರದ ವಿಷಯ ತಿಳಿದು ನಮ್ಮೆಲ್ಲರಿಗೂ ಆಘಾತ ತಂದಿದೆ ಎಂದು ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರಾದ ಬಶೀರ್ ಬೊಳ್ಳಾಯಿಯವರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದರು .
ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮ ಸೇವೆಯನ್ನು ನೀಡಿ ಗುರುತಿಸಿಕೊಂಡಿದ್ದ
ಸೌಮ್ಯ ಸ್ವಭಾವದ ಮೇರು ವ್ಯಕ್ತಿತ್ವ ಹೊಂದಿದ್ದವರು.
ಸೃಷ್ಟಿಕರ್ತನು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ.
ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.