
” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆಸುಂಕ ವಸೂಲಿ” ಗೆ ಇತ್ತೀಚೆಗೆ ಬಜಪೆ ಪಟ್ಟಣ ಪಂಚಾಯತ್ ಮೇಲಾಧಿಕಾರಿ ಟೆಂಡರ್ ಆಹ್ವಾನಿಸಿದ್ದು,ಟೆಂಡರ್ ಪಡೆದಿರುವ ಜರಿನಗರದ ಮೊಹಮ್ಮದ್ ಇರ್ಷಾದ್ ರವರು ಬಜಪೆ ಪಂಚಾಯತ್ ಮಾಜಿ ಅಧ್ಯಕ್ಷ-ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ಮೇಲೆ ದೌರ್ಜನ್ಯ-ಕಿರುಕುಳದ ಕೇಸು ನೀಡಲಾಗಿದೆ.
ಬಜಪೆ ಪಟ್ಟಣಪಂಚಾಯತ್ ಆಡಳಿತವು ಕಳೆದ ತಿಂಗಳು ” ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ”ಬಗ್ಗೆ ಟೆಂಡರ್ ಆಹ್ವಾನಿಸಿದ್ದು ಬಜಪೆ ಪಟ್ಟಣಪಂಚಾಯತ್/ಸಿಆರ್/ಕಂ.ನಿ/16/2025-26 ರ ತಾರೀಕು12/8/2025 ಆದೇಶ ಪ್ರಕಾರ 19,94,318 ರೂಪಾಯಿ ಪಾವತಿಯಲ್ಲಿ ಅರ್ಧ ಅಂದರೆ ರೂಪಾಯಿ 9,97,159 ಪಾವತಿಸಬೇಕಾಗಿತ್ತು,ಕರಾರು ಪತ್ರದ ಷರತ್ತಿನಂತೆ ತಾರೀಕು 13/8/2025 ರಿಂದ 31/1/2026 ತನಕ ಟೆಂಡರ್ ನ ರೂಪಾಯಿ 9,97,159 ಪಾವತಿಸಲಾಗಿದೆ.ಈ ನೆಲೆಯಲ್ಲಿ 13/8/25 ರಿಂದ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ನಡೆಸಲು ಕಾರ್ಯಾದೇಶ ನೀಡಲಾಗಿದೆ.
ಈ ನೆಲೆಯಲ್ಲಿ ಗುತ್ತಿಗೆದಾರ ಮೊಹಮ್ಮದ್ ಇರ್ಷಾದ್ ಬಜಪೆ ಪಟ್ಟಣಪಂಚಾಯತ್ ವ್ಯಾಪ್ತಿಯಲ್ಲಿ ದಿನವಹಿ ಮಾರುಕಟ್ಟೆ ಮತ್ತು ವಾರದ ಸಂತೆ ಸುಂಕ ವಸೂಲಿ ಮಾಡಲು ಪ್ರಾರಂಬಿಸಲಾಗಿದ್ದು ವಸೂಲಿ ಗೆ ಹೋದ ಸಂದರ್ಭದಲ್ಲಿ ಈ ಹಿಂದೆ ಟೆಂಡರ್ ಪಡೆದಿದ್ದವನ ಅಣ್ಣ ಶಾಹುಲ್ ಹಮೀದ್ ಎಂಬವನು ಮಾನಸಿಕ -ದೈಹಿಕ ಕಿರುಕುಳ ನೀಡುತಿದ್ದಾನೆಂದು ದೂರು ನೀಡಲಾಗಿದೆ. ವಾರದ ಸಂತೆಗೆ ಬಂದಿರುವ ಮಾರಾಟಗಾರರಲ್ಲಿ ನನಗೆ ಸಂತೆ ಸುಂಕ ಸರಿಯಾಗಿ ಕೊಡದಂತೆ ಆದೇಶಿಸುವುದು,ನನ್ನ ಎದುರು ಬದುರು ಬಂದು ತೊಂದರೆ ನೀಡುತಿದ್ದಾನೆ,ಇದರಿಂದ ಸರಕಾರಿ ಇಲಾಖೆಯಿಂದ ಟೆಂಡರ್ ಮೂಲಕ ಪಡೆದ ಈ ಕಾರ್ಯಕ್ಕೆ ತೊಂದರೆ ನೀಡುತಿರುವ ಶಾಹುಲ್ ಹಮೀದ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಜಪೆ ಪೋಲೀಸ್ ಠಾಣೆ ಮತ್ತು ಪೋಲೀಸ್ ಕಮಿಷನರ್ ಗೆ ನೀಡಿರುವ ದೂರಿನಲ್ಲಿ ಆಪಾದಿಸಲಾಗಿದೆ.