ಅವಿವಾಹಿತ ಯುವಕ ನೇಣು ಬಿಗಿದು ಆತ್ಮಹತ್ಯೆ

Date:


ಉಳ್ಳಾಲ: ಅವಿವಾಹಿತ ಯುವಕನೋರ್ವನು ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ‌ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಸರಕಾರಿ ಶಾಲಾ ಬಳಿ ನಡೆದಿದೆ.
ನಿತಿನ್ ಕುಮಾರ್ ಯಾನೆ ನೀತು(35)ಆತ್ಮಹತ್ಯೆಗೈದ ಯುವಕನಾಗಿದ್ದಾನೆ.


ಮೂಲತ: ಕೋಟೆಕಾರು ಪಟ್ಟಣದ ಕೊಂಡಾಣ,ಮಿತ್ರನಗರ ನಿವಾಸಿಯಾಗಿರುವ ನಿತಿನ್ ಪಿಲಾರುವಿನ ಬಾವ (ಅಕ್ಕನ ಗಂಡ)ಲಕ್ಷ್ಮಣ ಪಕ್ಕಳ ಅವರ ಮನೆಯಲ್ಲಿ ವಾಸವಿದ್ದರು.ತೊಕ್ಕೊಟ್ಟು ಕಾಪಿಕಾಡುವಿನ ಕ್ಯಾಟರಿಂಗ್ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದ ಅವರು ಎರಡು ವರುಷಗಳಿಂದ ವೆರಿಕೋಸ್ ಕಾಯಿಲೆಯಿಂದ ಬಳಲುತ್ತಿದ್ದರಂತೆ.ಕಳೆದ ನಾಲ್ಕೈದು ದಿನಗಳಿಂದ ಜ್ವರ ಭಾದೆಯಿಂದ ಮನೆಯಲ್ಲೇ ಉಳಿದಿದ್ದ ಅವರು ಮಂಗಳವಾರ ರಾತ್ರಿ ಊಟ ಮುಗಿಸಿ ಕೋಣೆಗೆ ಸೇರಿದ ಬಳಿಕ ಆತ್ಮಹತ್ಯೆ ನಡೆಸಿದ್ದಾರೆನ್ನಲಾಗಿದೆ.
ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾಗಿ ಸಿ.ಎ. ಸುನಿಲ್ ಭಂಡಾರಿ ಆಯ್ಕೆ

ಮಂಗಳೂರು: 2026-27ನೇ ಸಾಲಿನ ಕರ್ನಾಟಕ ರಾಜ್ಯ ಲೆಕ್ಕಪರಿಶೋಧಕರ ಸಂಘದ (KSCAA) ಅಧ್ಯಕ್ಷರಾಗಿ...

ಆಗಸ್ಟ್ 26 ರಂದು ಅಬುದಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶಕ್ಕೆ ಭರದ ಸಿದ್ಧತೆ

ಅಬುದಾಬಿ: ಪ್ರವಾದಿ ಮುಹಮ್ಮದ್ ﷺ ರವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಕಲ್ಚರಲ್...

ಗ್ರೀನ್ ವೀವ್ ಶಾಲೆಯಲ್ಲಿ ನವೋದ್ಯಮ ಮತ್ತು ಉದ್ಯಮಶೀಲತಾ ಅರಿವು ಕಾರ್ಯಕ್ರಮ

ಕೊಣಾಜೆ, ಆ.18: ಗ್ರೀನ್ ವೀವ್ ಪ್ರೌಢಶಾಲೆ,ಅಡ್ಕರೆಪಡ್ಪು, ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್...

ಈದ್ ಮಿಲಾದ್ ಸಾರ್ವತ್ರಿಕ ರಜೆ ಆಗಸ್ಟ್ 25ಕ್ಕೆ ಬದಲಾವಣೆ: ಉಸ್ತುವಾರಿ ಸಚಿವ, ಡಿಸಿ ಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗಸ್ಟ್ 25 ರಂದು ಮೀಲಾದ್ ಸರಕಾರಿ...