ಪಿಕಪ್ ಢಿಕ್ಕಿ ಹೊಡೆಸಿ ಕೊಲೆ, ಮೃತರ ಮನೆಗೆ ಬಿಜೆಪಿ ನಿಯೋಗ ಭೇಟಿ

Date:


ಉಳ್ಳಾಲ‌: ಐದು ದಿನಗಳ ಹಿಂದೆ ಬೋಳಿಯಾರ್ ಸಮೀಪ ಪಿಕಪ್ ಢಿಕ್ಕಿ ಹೊಡೆದು ಕೊಲೆಗೀಡಾದವರ ಮನೆಗೆ ಬಿಜೆಪಿ ಮಂಗಳೂರು ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದಲ್ಲಿ ನಿಯೋಗ ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿತು.


ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಿಯೋಗ, ಕಾನೂನು ಹೋರಾಟದಲ್ಲಿ ಕೊನೆವರೆಗೂ ಜೊತೆಗಿರುತ್ತೇವೆ, ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಅಗತ್ಯವಿದ್ದಲ್ಲಿ ಪ್ರತ್ಯೇಕ ನ್ಯಾಯವಾದಿಯನ್ನು ನೇಮಿಸುವ ಹಾಗೂ ಇತರ ಎಲ್ಲಾ ರೀತಿಯ ನೆರವು ನೀಡುವುದಾಗಿ ನಿಯೋಗ ಭರವಸೆ ನೀಡಿತು.ಮೃತರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು ಮಾನವೀಯ ನೆಲೆಯಲ್ಲಿ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಆಗ್ರಹಿಸಿತು.


ಈ ಸಂದರ್ಭ ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಜಗದೀಶ್ ಆಳ್ಗ ಕುವೆತ್ತಬೈಲ್, ಜಿಲ್ಲಾ ವಕ್ತಾರ ಹೇಮಂತ್ ಶೆಟ್ಟಿ ದೇರಳಕಟ್ಟೆ,ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಎ.ಶಹನವಾಝ್ ಕೂಳೂರು, ಮಂಗಳೂರು ಕ್ಷೇತ್ರಾಧ್ಯಕ್ಷ ಸಿದ್ದೀಕ್ ತಲಪಾಡಿ, ಜಿಲ್ಲಾ ಉಪಾಧ್ಯಕ್ಷ ಅಸ್ಗರ್ ಮುಡಿಪು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತಸ್ಲೀಂ‌ ಹರೇಕಳ, ಉಪಾಧ್ಯಕ್ಷ ಕಲಂದರ್ ಕೋಟೆಕಾರ್, ಮಾಜಿ ಅಧ್ಯಕ್ಷ ಕರೀಂ ಉಚ್ದಿಲ್, ಮುಖಂಡರಾದ ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಜಾಮಿಅಃ ಅಝೀಝಿಯಾ ಸಮ್ಮೇಳನ: ಉಳ್ಳಾಲ ಝಿಯಾರತ್ ನೊಂದಿಗೆ ಪ್ರಚಾರಕ್ಕೆ ಚಾಲನೆ

ಮಂಗಳೂರು: ಕೇರಳದ ಕೊಡುಂಗಲ್ಲೂರಿನ ಮಾಡವನ ಪ್ರದೇಶದಲ್ಲಿ ತಲೆಯೆತ್ತಿ ನಿಂತಿರುವ ಧಾರ್ಮಿಕ ಮತ್ತು...

ಜನರಿಗೆ ತಾಲೂಕು ಮಟ್ಟದ ಆಸ್ಪತ್ರೆ ನೀಡಿ: ಮುನೀರ್ ಕಾಟಿಪಳ್ಳ

ಮೂಡುಬಿದಿರೆ: ಬಡಜನರಿಗೆ ಹೆಚ್ಚು ಬಾಧೆ ಕೊಡುವುದು ಆರೋಗ್ಯದ ಸಮಸ್ಯೆ. ಜನರ ಬೇಡಿಕೆ...

ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಅಧ್ಯಕ್ಷರಾಗಿ ಅಡ್ವೊಕೇಟ್ ಸಿದ್ದಿಕ್ ಹಾಜಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ತಾಜುದ್ದೀನ್...

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...