ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಂಭ್ರಮ: ದಾಖಲೆಯ 1155 ಯೂನಿಟ್ ರಕ್ತ ಸಂಗ್ರಹ

Date:

ಮಂಗಳೂರು: ಬ್ಲಡ್ ಡೋನರ್ಸ್ ಮಂಗಳೂರು ರಿ ಸಂಸ್ಥೆಗೆ 13ನೇ ವಾರ್ಷಿಕೋತ್ಸವದ ಅಂಗವಾಗಿ 13 ರಕ್ತದಾನ ಶಿಬಿರಗಳನ್ನು ಆಯೋಜಿಸುವ ಯೋಜನೆ ರೂಪಿಸಲಾಗಿತ್ತು. ರಕ್ತ ನಿಧಿ ಕೇಂದ್ರಗಳಲ್ಲಿನ ವಿಶೇಷ ಬೇಡಿಕೆ ಅನುಸಾರವಾಗಿ 13 ರಕ್ತದಾನ ಶಿಬಿರಗಳ ಬದಲಾಗಿ 22 ಯಶಸ್ವಿ ರಕ್ತದಾನ ಶಿಬಿರಗಳ ಮೂಲಕ ದಾಖಲೆಯ ರಕ್ತ ಯುನಿಟ್ ಸಂಗ್ರಹದೊಂದಿಗೆ ಹೊಸ ಇತಿಹಾಸ ಸೃಷ್ಟಿಸಿದೆ.

ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯೊಂದಿಗೆ ಕೈಜೋಡಿಸುವ ವಿವಿಧ ಸಂಘ ಸಂಸ್ಥೆಗಳ ಅಪಾರ ಸಹಕಾರದಿಂದ 22 ರಕ್ತದಾನ ಶಿಬಿರಗಳು ಆಯೋಜಿಸುವ ಮೂಲಕ 1155 ಯುನಿಟ್ಸ್ ರಕ್ತ ಸಂಗ್ರಯ ಇದು ರಾಜ್ಯದ ಹೊಸ ದಾಖಲೆಯಾಗಿದೆ.

ಈ ಉರಿಬಿಸಿಲಿನ ಕಾಲಘಟ್ಟದಲ್ಲೂ ರಕ್ತದ ಕೊರತೆಯನ್ನು ನೀಗಿಸುವಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿರುವುದು ಸಂತಸದ ವಿಷಯವಾಗಿದೆ. ನಮ್ಮ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಎಲ್ಲಾ ಸಂಘ ಸಂಸ್ಥೆಗಳ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಡೋನಸ್ ಮಂಗಳೂರು ಸಂಸ್ಥೆಯ ಪದಾಧಿಕಾರಿಗಳು ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ರಕ್ತದಾನ ಶಿಬಿರಗಳು ಮತ್ತು ಜಾಗೃತಿ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಸಕ್ರಿಯವಾಗಿರುವ ಸಂಸ್ಥೆ ವತಿಯಿಂದ ಇನ್ನಷ್ಟು ರಕ್ತದಾನ ಶಿಬಿರಗಳ ಮೂಲಕ ಬಡ ರೋಗಿಗಳಿಗೆ ನೆರವಾಗಲಿದ್ದೇವೆ. ಇನ್ನಷ್ಟು ಹೊಸ ಕಾರ್ಯಕ್ರಮಗಳು ಆಯೋಜಿಸಿದ್ದು ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಗೊಳಿಸಲಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ವಿವಿ ಆವರಣದಲ್ಲಿ ಕಸ ಸುಟ್ಟರೆ ಹುಷಾರ್: ಮಂಗಳೂರು ವಿವಿಗೆ ಬಿತ್ತು ಭಾರಿ ದಂಡ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಮಂಗಳಗಂಗೋತ್ರಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ...

ಉಳ್ಳಾಲ: ಯು.ಎಂ. ಹುಸೈನಾರ್ ನಿಧನ

ಉಳ್ಳಾಲ: ಯು.ಎಂ.ಹುಸೈನಾರ್ (68 ) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಉಳ್ಳಾಲ...

ದ್ವಿತೀಯ ಪಿಯುಸಿ ಮರು ಮೌಲ್ಯಮಾಪನ: ವಿದ್ವತ್ ಪಿಯು ಕಾಲೇಜಿಗೆ ಮತ್ತೊಂದು ಗರಿ

ವಿಜ್ಞಾನ ವಿಭಾಗದಲ್ಲಿ ಅಗ್ರಪಂಕ್ತಿ ಸಾಧಿಸಿದ ಚಿನ್ಮಯ್ ಜಿ.ಕೆ. ಶೇ.99.16 ಬೆಳ್ತಂಗಡಿ: ದ್ವಿತೀಯ ಪಿಯುಸಿ...

ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳ ಬಳಿ ಯಾವುದೇ ಯೋಜನೆಗಳಿಲ್ಲ: ಎಂ.ಕೆ. ಫೈಝಿ

ಎಸ್‌ಡಿಪಿಐ ಮಂಗಳೂರು 'ಲೀಡರ್ಸ್ ಕಾನ್ಕ್ಲೇವ್' ಮಂಗಳೂರು: "ದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಬಳಸುತ್ತಿರುವ...