ಬಸ್ಸಿನಲ್ಲಿ ಸಿಕ್ಕಿದ 3ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಾರೀಸುದಾರರಿಗೆ ಒಪ್ಪಿಸಿದ ಬಸ್ ಕಂಡಕ್ಟರ್

Date:

ಮೂಡಬಿದಿರೆ: ತಮ್ಮ ಬಸ್ಸಿನಲ್ಲಿ ಸಿಕ್ಕಿದ 3ಲಕ್ಷ ಮೌಲ್ಯದ ಚಿನ್ನದ ಸರವನ್ನು ಬಸ್ ಕಂಡಕ್ಟರ್ ಓವ೯ರು ಜಾರೂಕತೆಯಲ್ಲಿಟ್ಟು ವಾರೀಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದ ಘಟನೆ ಸೋಮವಾರ ನಡೆದಿದೆ.

ವಿಶಾಲ್ ಮೋಟಾರ್ಸ್ ಬಸ್ಸಿನ ಕಂಡಕ್ಟರ್ ರಾಜೇಶ್ ಹೆಗ್ಡೆ ಪ್ರಮಾಣಿಕತೆ ಮೆರೆದ ವ್ಯಕ್ತಿ. ರಾಜೇಶ್ ಅವರಿಗೆ ಬಸ್ಸಿನಲ್ಲಿ ಸುಮಾರು 3,00,000 ಬೆಲೆ ಬಾಳುವ ಚಿನ್ನದ ಸರ ಸಿಕ್ಕಿದ್ದು ಚಿನ್ನವನ್ನು ತಮ್ಮ ಬಳಿ ಸುರಕ್ಷಿತವಾಗಿ ಇರಿಸಿಕೊಂಡು ಅವರು ಯಾವುದೇ ಲಾಭದ ಆಸೆಗೆ ಒಳಗಾಗದೆ ಚಿನ್ನ ಸಿಕ್ಕಿದ ಬಗ್ಗೆ ವಾಟ್ಸಪ್ ಮೂಲಕ ಪ್ರಚಾರ ಮಾಡಿರುತ್ತಾರೆ.

ಈ ಸರವು ಕುಂದಾಪುರ ಮೂಲದ ನಿಟ್ಟೆ ಕಾಲೇಜಿನ ವಿದ್ಯಾರ್ಥಿಯಾದ ಸುಧೀಕ್ಷಾ ಅವರು ಸೋಮವಾರ ಬಸ್ಸಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಳೆದುಕೊಂಡಿದ್ದರು. ವಾಟ್ಸಫ್ ಮೂಲಕ ಮಾಹಿತಿಯನ್ನು ತಿಳಿದ ಅವರು ತಮ್ಮಲ್ಲಿದ್ದ ಸೂಕ್ತ ಮಾಹಿತಿಯನ್ನು ನೀಡಿ ಚಿನ್ನದ ಸರವನ್ನು ಮರಳಿ ಪಡೆದು ಕಂಡಕ್ಟರ್ ಗೆ ಧನ್ಯವಾದವನ್ನು ತಿಳಿಸಿರುತ್ತಾರೆ.

ಚಿನ್ನದ ಸರವನ್ನು ಪ್ರಾಮಾಣಿಕತೆಯಿಂದ ನೀಡಿದ ರಾಜೇಶ್ ಹೆಗ್ಡೆ ಅವರಿಗೆ ವಿಶಾಲ್ ಮೋಟರ್ಸ್ನ ಮಾಲೀಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...