ರಾಜ್ಯ

 ಸೆ.20: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ತಿಂಗಳ ನಾಟಕ ಸಂಭ್ರಮದಡಿಯಲ್ಲಿ ನಾಟಕ ಪ್ರದರ್ಶನ

ಕನ್ನಡ ಕಲಾ ಕೇಂದ್ರ ಮುಂಬಯಿ ‘ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನ  ಮುಂಬಯಿ, ಸೆ.15: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ತಿಂಗಳ ನಾಟಕ ಸಂಭ್ರಮದಡಿಯಲ್ಲಿ  ಬೆಂಗಳೂರುನ ಮಲ್ಲತ್ತಹಳ್ಳಿಯಲ್ಲಿ ಅಲ್ಲಿನ ಕಲಾಗ್ರಾಮ ಸಮುಚ್ಛಯ ಭವನದಲ್ಲಿ ಇದೇ ಬರುವ ಶನಿವಾರ (ಸೆ.20) ಸಂಜೆ 6:00 ಗಂಟೆಗೆ ‘ಚೌಕಟ್ಟಿನಾಚೆಯ ಚಿತ್ರ’ ನಾಟಕವನ್ನು ಪ್ರಸ್ತುತ ಪಡಿಸಲಿದ್ದಾರೆ. ತೃತೀಯ ಲಿಂಗಿಗಳ ಬದುಕಿನ ಕಥೆವ್ಯಥೆಯುಳ್ಳ ನಾಟಕವನ್ನು ಮುಂಬಯಿಯಲ್ಲಿನ ಹೆಸರಾಂತ ರಂಗಕರ್ಮಿ ಸಾ.ದಯಾ  (ದಯಾನಂದ್)  ರಚನೆ ಮತ್ತು  ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ| ಕೆ.ವಿ ನಾಗರಾಜಮೂರ್ತಿ ಅಧ್ಯಕ್ಷತೆಯಲ್ಲಿ ಅಂದು ಜರಗುವ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ರಂಗ ಸಂಘಟಕ ವಿ.ಎಂ ನಾಗೇಶ್ (ಚಡ್ಡಿ ನಾಗೇಶ್) ಆಗಮಿಸಲಿರುವರು. ಕನ್ನಡ ಕಲಾ ಕೇಂದ್ರ ಮುಂಬಯಿ ಇದರ ಅಧ್ಯಕ್ಷ ಮಧುಸೂದನ ಟಿ.ಆರ್  ಈ ನಾಟಕವನ್ನು ನಿರ್ವಹಿಸಲಿದ್ದು ಸಾ.ದಯಾ ಅವರದ್ದೇ  ಬೆಳಕು  ಸಂಯೋಜನೆ, ನಯನಾ ಸಾಲ್ಯಾನ್ ಮತ್ತು ಗೀತಾ ದೇವಾಡಿಗ ವಸ್ತ್ರ ವಿನ್ಯಾಸ, ಗಣೇಶ್ ಕುಮಾರ್ ಅವರ ಕಲೆ ಮತ್ತು ರಂಗ ಪರಿಕರದೊಂದಿಗೆ ದಿವಾಕರ್ ಕಟೀಲ್ ಅವರ ಸಂಗೀತ, ವಿದ್ದು ಉಚ್ಚಿಲ್ ಅವರ ರಂಗ ವಿನ್ಯಾಸ, ಮನೋಹರ್ ಶೆಟ್ಟಿ ನಂದಳಿಕೆ ಮತ್ತು ಪೂರ್ಣಿಮಾ ಮಧುಸೂದನ ಟಿ. ಆರ್ ಅವರ ರಂಗ ನಿರ್ವಹಣೆ, ರಾಮಾನುಗ್ರಹ ಕ್ಯಾಟರರ್ಸ್‌ನ ಸಹಕಾರ, ಶಶಿ ಕಿರಣ್, ಸುಷ್ಮಾ ಆಚಾರ್ಯ ಅವರ ಸಾಂಗತ್ಯದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಮಂಜುನಾಥ್ ಶೆಟ್ಟಿಗಾರ್ ಪ್ರಸಾಧನಗೈಯಲಿದ್ದಾರೆ. ಮಧುಸೂದನ ಟಿ.ಆರ್ ಸೇರಿ ಒಟ್ಟು 20 ಹಿರಿಕಿರಿಯ ಕಲಾವಿದರು, 32 ಭಿನ್ನಭಿನ್ನ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ವೇದಿಕೆ ಮೇಲೆ ಮತ್ತು ವೇದಿಕೆ ಹಿಂದುಗಡೆ ಒಟ್ಟು 27 ಮಂದಿ ಕಲಾವಿದರು ತೊಡಗಿಸಿ ಕೊಂಡಿರುವರು. ರಂಗಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಂಡವನ್ನು ಪ್ರೋತ್ಸಾಹಿಸಬೇಕೆಂದು ಕನ್ನಡ ಕಲಾ ಕೇಂದ್ರ ಮುಂಬಯಿ ವಿನಂತಿದೆ. ಈ ಹೊತ್ತಿಗೆ ಬೆಂಗಳೂರು ಸಂಚಾಲಕರಾದ ಜಯಲಕ್ಷ್ಮಿ ಪಾಟೀಲ್, ಕರ್ನಾಟಕ ನಾಟಕ ಅಕಾಡೆಮಿ ಇದರ ಕಾರ್ಯಕ್ರಮ ಸಂಚಾಲಕರಾದ ಜಿಪಿಓ ಚಂದ್ರು,  ಜಗದೀಶ್ ಜಾಲ, ಅಕಾಡೆಮಿ ರಿಜಿಸ್ಟ್ರಾರ್ (ಪ್ರ) ಎನ್.ನಮ್ರತ ಮತ್ತು ಸರ್ವ ಸದಸ್ಯರು  ನಾಟಕ ಕಲಾವಿದರಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಮುಂಬಯಿ ಮಹಾನಗರದಲ್ಲಿ ಕನ್ನಡ ಕಲಾ ಕೇಂದ್ರವು ಎಪ್ಪತ್ತು ವರುಷಗಳಿಂದ ನಾಟಕೋತ್ಸವ, ರಂಗಶಿಬಿರ, ಪ್ರಶಸ್ತಿ ಗೌರವ, ವಿವಿಧ ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಬಂದಂತಹ ಪ್ರತಿಷ್ಠಿತ ಸಂಸ್ಥೆ. ಈಗಾಗಲೇ 550ಕ್ಕೂ  ಹೆಚ್ಚು ನಾಟಕ ರಂಗ ಪ್ರಯೋಗ , 75ಕ್ಕೂ  ಹೆಚ್ಚು  ಯಕ್ಷಗಾನ  ಪ್ರದರ್ಶನ, ಹಲವು  ನೃತ್ಯ, ಸಂಗೀತ, 10ಕ್ಕೂ  ಹೆಚ್ಚು  ನಾಟಕ  ತರಬೇತಿ  ಶಿಬಿರ  ಏರ್ಪಡಿಸಿದ  ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ಕಲಾ ಕೇಂದ್ರದ ಮೂಲಕ ಸಾಗರದ ನಾಟಕೋತ್ಸವದಲ್ಲಿ ‘ಬಿಸಿಲು ಬೆಳದಿಂಗಳು’ ನಾಟಕ ಪ್ರದರ್ಶನದ ಅದ್ಧೂರಿ ಯಶಸ್ಸಿನ ಬೆನ್ನಲ್ಲಿ ಈಗ ಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ. ಅದೇ ದಿನ ಸಂಜೆ ‘ಚೌಕಟ್ಟಿನಾಚೆಯ ಚಿತ್ರ ನಾಟಕದ ಕಲಾವಿದರೊಂದಿಗೆ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಒಂದೆಡೆ ಸಂಸ್ಥೆಯ ಸಂಸ್ಥಾಪಕಿಅಕ್ಕೆ  ಪದ್ಮಶಾಲಿ ಸಂವಾದ ನಡೆಸಲಿದ್ದಾರೆ ಎಂದು ತಂಡದ ಮುಖ್ಯಸ್ಥರು ತಿಳಿಸಿದ್ದಾರೆ.

ಬಿಜೆಪಿ ಮಾಡಿದ 40% ಕಮಿಷನ್ ಹಗರಣ ಮತ್ತು  ಕೋವಿಡ್ ಹಗರಣದ ವಿರುದ್ಧ ಕ್ರಮಕ್ಕೆ ಮುಂದಾಗದ  ಕಾಂಗ್ರೆಸ್‌ ಸರಕಾರ ಹೊಂದಾಣಿಕೆ ರಾಜಕಾರಣ ಮಾಡುತ್ತಿದೆ – ಎಸ್‌ಡಿಪಿಐ

ಬೆಂಗಳೂರು ಸೆ 16: ಬಿಜೆಪಿ ಸರಕಾರದ ಅವಧಿಯಲ್ಲಿ ನಲುವತ್ತು ಶೇಕಡಾ  ಕಮೀಷನ್ ಪಡೆದ ಭ್ರಷ್ಟಾಚಾರಿಗಳ ವಿರುದ್ಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್  ಸರ್ಕಾರ  ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಕಠಿಣ ಕ್ರಮ ಕೈಗೊಳ್ಳದೆ...

“ಸಮಾಜ ಪರಿವರ್ತನೆಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ – ಅಪ್ಸರ್ ಕೊಡ್ಲಿಪೇಟೆ”

ಗುಲ್ಬರ್ಗಾ, ಸೆಪ್ಟೆಂಬರ್ 11:ಇಂದು ಗುಲ್ಬರ್ಗಾದಲ್ಲಿ ನಡೆದ ಎಸ್‌ಡಿಪಿಐ ನಾಯಕರ ಸಭೆಯಲ್ಲಿ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು “ಸಮಾಜ ಪರಿವರ್ತನೆಗೆ ಪ್ರತಿಯೊಬ್ಬರ ಕೊಡುಗೆ” ಎಂಬ ವಿಷಯದ ಕುರಿತು ಪ್ರಮುಖ ಭಾಷಣ...

ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ವಿವಿ ಜೊತೆ ಕರ್ನಾಟಕ ಸಂಶೋಧನೆ, ಶೈಕ್ಷಣಿಕ ಸಹಯೋಗ

ಬೆಂಗಳೂರು: ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಪುರಾತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ಸರ್ಕಾರದ ಸಂಶೋಧನೆ ಮತ್ತು ಶೈಕ್ಷಣಿಕ ಸಹಯೋಗ ಏರ್ಪಟ್ಟಿದೆ. ಈ ಮೂಲಕ ಕರ್ನಾಟಕ ಸರ್ಕಾರವು ಜಾಗತಿಕ ಶೈಕ್ಷಣಿಕ...

ಮತ್ತೆ ಮತ್ತೆ ಆರ್ ಎಸ್ ಎಸ್ ಖೇಡ್ದಾಕ್ಕೆ ಬೀಳುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರ

ಬೆಂಗಳೂರು : ಸೆಪ್ಟೆಂಬರ್ :10: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಸುಮಾರು 95% ಮುಸ್ಲಿಂ ಸಮುದಾಯದ ಮತಗಳಿಂದ ಅಧಿಕಾರಕ್ಕೆ ಬಂದಿದ್ದರೂ, ಇಂದು ಆ ಸರ್ಕಾರವೇ ಬಿಜೆಪಿ, ಆರ್‌.ಎಸ್‌.ಎಸ್, ಬಜರಂಗ ದಳ ಮತ್ತು ವಿಶ್ವ ಹಿಂದೂ...

Popular

Subscribe

spot_imgspot_img