ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12 ನೇ ವಾರ್ಷಿಕೋತ್ಸವ ಕರಂಬಾರಿ ನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಪೂಜಾರಿರವರು ನೆರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡುತ್ತ ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಯನ್ನು ಪ್ರಶಂಶಿಸಿದರು , ಸಮಾಜಕ್ಕೆ ಮಾದರಿ ಸಂಘ ಎಂದು ಹೇಳಿದರು.

ಬಜಪೆ ಬಂಟರ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ಶೆಟ್ಟಿ ರವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ವೇಣುಗೋಪಾಲ್ ಶೆಟ್ಟಿ ರವರು ನಾಗರಿಕ ಸೇವಾ ಸಮಿತಿಯ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ಕಣ್ಣಿನ ಉಚಿತ ಚಿಕಿತ್ಸ ಶಿಬಿರ ಮಾಡಿ ಸಮಾಜಕ್ಕೆ ಉತ್ತಮ ಸೇವೆ ಯನ್ನು ಈ ಸಂಸ್ಥೆ ಸಲ್ಲಿಸಿದೆ ಎಂದು ಕೊಂಡಾಡಿದರು.
ಭೋಜರಾಜ್ ಕೋಟ್ಯಾನ್ ರವರು ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಸದಸ್ಯರಾದ ರಾಜೇಶ್ ಅಮೀನ್, ದಿನೇಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ದೇವಾಡಿಗ, ಮಳವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾರಾಯಣ ಬೋಧಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುಣಪಾಲ್ ದೇವಾಡಿಗ, ವಾಸು ಪೇಜಾವರ್, ರುಕ್ಕಯ್ಯ ಕೋಟ್ಯಾನ್, ಉಪಸ್ಥಿತರಿದ್ದರು. ಕುಮಾರಿ ಕೃತಿ ಬಿ. ಕೆ ಕಾರ್ಯಕ್ರಮ ನಿರೂಪಿಸಿದರು, ವೀಣಾ ಸಾಲ್ಯಾನ್ ಪ್ರಾಸ್ತವಿಕ ಮಾತನಾಡಿದರು, ವಿದ್ಯಾ ಮಿಥುನ್ ಸ್ವಾಗತಿಸಿ, ರಾಕೇಶ್ ಕುಂದರ್ ವಂದಿಸಿದರು.


