ಉದ್ಯಾವರ ದಮ್ಮಾಮ್ ಕಮಿಟಿ 2026ರ ನೂತನ ಪದಾಧಿಕಾರಿಗಳ ಆಯ್ಕೆ:

Date:

ಅಧ್ಯಕ್ಷರಾಗಿ ಹ್ಯಾರಿಸ್ ಕಜ, ಕಾರ್ಯದರ್ಶಿಯಾಗಿ ಸಲಾಮ್ ಸಿಲ್ಸಿಲಾ”

ದಮ್ಮಾಮ್: ಉದ್ಯಾವರ ಮಂಜೇಶ್ವರದ ಅನಿವಾಸಿಗರ ಒಕ್ಕೂಟವಾದ UIEO ಉದ್ಯಾವರ ದಮ್ಮಾಮ್ ಕಮಿಟಿಯ 34ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದಮ್ಮಾಮಿನ ರೋಸ್ ಆಡಿಟೋರಿಯಂನಲ್ಲಿ ಜರುಗಿತು. 1992ರಿಂದ ಸಮಾಜ ಸೇವೆ ಮತ್ತು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಈ ಒಕ್ಕೂಟವು, 2026ನೇ ಸಾಲಿನ ನೂತನ ಸಮಿತಿಯನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.


ಅನ್ಸಾರ್ ಮುಕ್ರಿ ಉದ್ಯಾವರ ಅವರ ಕಿರಾಅತ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆಶಿಕ್ ಬಿ.ಎಸ್. ನಗರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಅಶ್ರಫ್ ಬಿ.ಎಸ್. ನಗರ ಮತ್ತು ಅಶ್ರಫ್ ದುಬೈ ಪಾಲ್ಗೊಂಡಿದ್ದರು. ನಝೀರ್ ಶಾಫಿ ಮತ್ತು ಮೊಯಿದಿನ್ ಬೆಳ್ತರಿ ಅವರು ಸಮಾಜ ಸೇವೆಯಲ್ಲಿ ಯುವಕರ ಪಾತ್ರದ ಬಗ್ಗೆ ಮಾರ್ಗದರ್ಶನ ನೀಡಿದರು. ಹ್ಯಾರಿಸ್ ಕಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿಝಾರ್ ಗುಡ್ವೇ ಹಾಗೂ ಫರಾಜ್ ಮಾಹಿನ್ ವಾರ್ಷಿಕ ವರದಿ ಮಂಡಿಸಿದರು. ಫಯಾಜ್ 10’ಮೈಲ್ ವಂದಿಸಿದರು.

2026ರ ನೂತನ ಪದಾಧಿಕಾರಿಗಳು:
ಅಧ್ಯಕ್ಷರು: ಹ್ಯಾರಿಸ್ ಕಜ
ಕಾರ್ಯದರ್ಶಿ: ಸಲಾಮ್ ಸಿಲ್ಸಿಲಾ
ಜಂಟಿ ಕಾರ್ಯದರ್ಶಿಗಳು: ಅನ್ಸಾರ್ ಮುಕ್ರಿ ಮತ್ತು ಆಶಿಕ್ ಬಿ.ಎಸ್. ನಗರ
ಕೋಶಾಧಿಕಾರಿ: ಇಜಾಜ್ ಜುಬೈಲ್
ಮಾರ್ಗದರ್ಶಕರು: ನಝೀರ್ ಶಾಫಿ ಮತ್ತು ಮೊಯಿದಿನ್ ಬೆಳ್ತರಿ

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...