ಮಡಿಕೇರಿ:ತಾಲ್ಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡು ಎಂಬಲ್ಲಿ ನಡೆದ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ತುಳುನಾಡಿನ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ನಾಪೋಕ್ಲು ಠಾಣೆಯಲ್ಲಿ DYSP ಸೂರಜ್ ಹಾಗೂ ಠಾಣಾಧಿಕಾರಿ ರಾಘವೇಂದ್ರ ಅವರಿಗೆ ನಾಪೋಕ್ಲುವಿನ ಹಿಂದೂ ಸಂಘನೆ ಪ್ರಮುಖರು ದೂರು ನೀಡಿದ್ದರು.

ಇದೀಗ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎಮ್ಮೆಮಾಡು ಗ್ರಾಮದ ಅಬ್ದುಲ್ ರಾಶಿದ್, ಹನೀಫ್ ಸಿಎಮ್, ಲತೀಫ್ ಸಿಎಮ್, ಮೊಹಮ್ಮದ್ ಫೈಝಲ್, ಶಕೀರ್, ಬಶೀರ್ ವಿರುದ್ಧ (BNS),2023 (U\S-191(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ!;
ದಿನಾಂಕ:30/03/2026 ರಂದು ಸಮಯ ಬೆಳಿಗ್ಗೆ,, 11.00 ಗಂಟೆಗೆ ನೀಡಿದ್ದ ಪುಕಾರಿನ ಸಾರಂಶವೇನೆಂದರೆ, ದಿನಾಂಕ:30/03/2026 ರಂದು ಸಮಯ 10.00 ಗಂಟೆಗೆ ರಮ್ಯ ಸ ಸ್ಟುಡಿಯೋ ನ್ಯೂಸ್ ಡೆಸ್ಕ್ ಎಂಬ ವಾಟ್ಸ್ ಅಪ್ ಗ್ರೂಪ್ ನಲ್ಲಿ, ಪ್ರೆಸ್ ರಿಪೋರ್ಟರ್ ದುಗ್ಗಳ ಸದನಾಂದರವರು ಕಳುಹಿಸಿರುವ ಒಂದು ವಿಡಿಯೋವನ್ನು ನೋಡಲಾಗಿ, ನಾಪೋಕ್ಲು, ಠಾಣಾ ವ್ಯಾಪ್ತಿಯ ಎಮ್ಮೆಮಾಡು ಗ್ರಾಮದಲ್ಲಿ.ಆ ಗ್ರಾಮದ ಯುವಕರು ಕಳೆದ 2 ದಿನಗಳ ಹಿಂದೆ ಮದುಮಗನೊಬ್ಬನಿಗೆ ಕೊರಗಜ್ಜ ದೇವರ ವೇಷ ಧರಿಸಿರುತ್ತಾರೆ.
ಮತ್ತು ಉಳಿದವರು ನಮ್ಮ ದೇವರನ್ನು ಹಿಯಾಳಿಸಿ ಅವರ ಭಾಷೆಯಲಿ, ತೆಯ್ಯ ಎಂದು ಕುಣಿದುಕೊಂಡು ಮೆರವಣಿಗೆ ಬಂದು ಇನ್ನಿತರ ಅವಹೇಳನ ಭಾಷೆಯನ್ನು ಬಳಸಿಕೊಂಡು ನಮ್ಮ ಪೀರ್ವಜರ ನಂಬಿಕೆ ಹಾಗೂ ಸಂಸ್ಕೃತಿಯನ್ನು ಧರ್ಮವನ್ನು ಅಪಹಾಸ್ಯ ಮಾಡಿರುವುದು ಕಂಡು ಬಂದಿರುತ್ತದೆ.
ನಂತರ ಈ ಬಗ್ಗೆ ತಿಳಿಯಲಾಗಿ ಎಮ್ಮೆಮಾಡು ಗ್ರಾಮ ಅಬ್ದುಲ್ ರಾಶೀದ್, ಹನೀಫ್ ಸಿ.ಎಂ, ಲತೀಫ್, ಸಿ,ಎಂ. ಮಹಮ್ಮದ್ ಫೈಜಲ್, ಶಕೀರ್ ಮತ್ತು ಬಷೀರ್ ಎಂಬುವರು ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಆದರಿಂದ ನಮ್ಮ ನಂಬಿಕೆಗೆ ಅಘಾತವಾಗಿ, ಭಾವನೆಗಳಿಗೂ ಧಕ್ಕೆಯಾಗಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ದೂರು ನೀಡಿದ್ದಾರೆ.


