ಜನಪದ ಕ್ರೀಡೆ ಕಂಬಳ ಜಾತ್ರೆಯಂತೆ ಪ್ರಸಿದ್ಧಿಯಾಗುತ್ತಿದೆ – ಜಸ್ಟೀಸ್ ಅಬ್ದುಲ್ ನಝೀರ್

Date:

ಮೂಡುಬಿದಿರೆ: ತುಳುನಾಡಿನ ಜನಪದ ಕ್ರೀಡೆ ಕಂಬಳವು ಅಡೆತಡೆಗಳನ್ನು ಮೀರಿ ಜಾತ್ರೆಯಂತೆ ಪ್ರಸಿದ್ಧಿಯಾಗುತ್ತಿದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋಟ್೯ನ ನಿವೃತ್ತ ನ್ಯಾಯಮೂತಿ೯ ಜಸ್ಟೀಸ್ ಅಬ್ದುಲ್ ನಝೀರ್ ಹೇಳಿದರು. ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಕಂಬಳಕ್ಕೆ ತಡೆಯಾಜ್ಞೆ ಬಂದು ತೊಂದರೆಯಾಗಿದ್ದರೂ ದೇವರ ದಯೆ ಹಾಗೂ ಕಂಬಳಾಭಿಮಾನಿಗಳ ಪ್ರಾರ್ಥನೆಯಿಂದ ಈ ಕ್ರೀಡೆಗಿದ್ದ ಅಡ್ಡಿ ನಿವಾರಣೆಯಾಗಿದೆ ಎಂದ ಅವರು ಕಾಂತಾರ ಸಿನಿಮಾದ ಬಳಿಕ ಕಂಬಳದ ಜನಪ್ರಿಯತೆ ವಿಶ್ವವ್ಯಾಪಿಯಾಗಿದೆ. ಜನ ತಮ್ಮ ದು:ಖಗಳನ್ನು ಮರೆತು ಕಂಬಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಮೊದಲು ವೇದಿಕೆಗೆ ಆಗಮಿಸಿದ ರಾಜ್ಯಪಾಲರು ಜನರತ್ತ ಕೈಬೀಸಿ ನಮಸ್ಕರಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ರಾಜ್ಯಪಾಲರಿಗೆ ಕಂಬಳದ ಬೆತ್ತವನ್ನು ನೀಡಿ ಸ್ವಾಗತಿಸಿದರು. ಸೇನಾ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿ ಎಡಿಜಿ ಬ್ರೂಸ್ ಫೆನಾ೯ಂಡಿಸ್, ಕಂಬಳದ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಪ್ರಮುಖರಾದ ರಂಜಿತ್ ಪೂಜಾರಿ, ಮುಖಂಡ ಕೃಷ್ಣ ಜೆ. ಪಾಲೇಮಾರ್, ಹಿರಿಯ ನ್ಯಾಯವಾದಿ ಕೆ.ರ್ ಪಂಡಿತ್, ಕೆ. ಪಿ.ಜಗದೀಶ್ ಅಧಿಕಾರಿ, ಮೇಘನಾಥ ಶೆಟ್ಟಿ, ದಿನೇಶ್ ಪುತ್ರನ್, ಹರಿಪ್ರಸಾದ್, ರೋಹಣ್ ಅತಿಕಾರಿಬೆಟ್ಟು, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶೂನ್ಯ ತ್ಯಾಜ್ಯ ಕಂಬಳಕ್ಕಾಗಿ ಶ್ರಮಿಸಿದ ಕಮ್ಯುನಿಟಿ ಮೊಬಿಲೈಸರ್ ತಂಡವನ್ನು ಸನ್ಮಾನಿಸಲಾಯಿತು. ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ರಾಜ್ಯಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟ: ಆಳ್ವಾಸ್ ಕ್ರೀಡಾಪಟುಗಳ ಗಮನಾಹ೯ ಸಾಧನೆ

ಮೂಡುಬಿದಿರೆ: ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ದಸರಾ ಸಿಎಂ ಕಪ್...

ಪುತ್ತಿಗೆ ಗುಂಡ್ಯಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಹಾನಿ

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕ ಶ್ರೀನಿವಾಸಪುರ ವಿಠೋಭ ಭಜನಾ...

ಮೂಡಬಿದಿರೆ: ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ‘ವೇಯ್ಟ್ ಲಿಫ್ಟಿಂಗ್’ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಶ್ರೀ ಧವಲಾ ಕಾಲೇಜಿನಲ್ಲಿ 2026-27ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ...

ಮಂಗಳೂರು: ಎಂಆರ್‌ಪಿಎಲ್ ಸ್ಫೋಟ ದುರಂತಕ್ಕೆ ಮತ್ತೊಂದು ಬಲಿ; ಗಂಭೀರ ಗಾಯಗೊಂಡಿದ್ದ ರಾಜೇಶ್ ಡಿಸಿಲ್ವ ನಿಧನ

ಮಂಗಳೂರು: ಮಂಗಳೂರು ನಗರದ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರಂತ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ...