ಯುದ್ಧದ ನೆಪವೊಡ್ಡಿ ಕೆಲವು ಗ್ಯಾಸ್ ಪಂಪ್ ಗಳಲ್ಲಿ ಗ್ಯಾಸ್ ದರ ಏರಿಕೆ: ಎಸ್.ಡಿ.ಟಿ.ಯು ಪ್ರತಿಭಟನೆಯ ಎಚ್ಚರಿಕೆ.

Date:

ಮಂಗಳೂರು: ಮಾ5: ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿದ್ದು ಇದರಿಂದ ತೈಲ ಸರಬರಾಜು ಕೊರತೆ ಎದುರಾಗಿದೆ. ಈ ರೀತಿಯ ಕಾರಣಗಳನ್ನು ಹೇಳಿ ಗ್ರಾಹಕರಿಂದ ಹಣ ಲೂಟಿ ಮಾಡುತ್ತಿರುವುದು ಜಿಲ್ಲೆಯ ಕೆಲವು ಗ್ಯಾಸ್ ಪಂಪುಗಳಲ್ಲಿ ಪ್ರಕರಣಗಳು ಬೆಳಕಿಗೆ ಬಂದಿದ್ದು ಈಗಾಗಲೇ ಕೆಲವು ಚಾಲಕರು ಗ್ಯಾಸ್ ಪಂಪ್ ವಿತರಕರಲ್ಲಿ ದರ ಹೆಚ್ಚಿಸಿದ ಬಗ್ಗೆ ತಗಾದೆ ತೆಗೆದ ದೃಶ್ಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕಂಡುಬಂದಿರುತ್ತದೆ.

ಇಷ್ಟರವರೆಗೆ ಸರಕಾರದಿಂದ ಅಧಿಕೃತವಾದ ಬೆಲೆ ಏರಿಕೆಯ ಆದೇಶಗಳು ಬರದಿದ್ದರೂ ಈ ರೀತಿಯ ಹಗಲು ದರೋಡೆ ಮಾಡುವ ಗ್ಯಾಸ್ ಪಂಪುಗಳ ವಿರುದ್ದ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಮಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಇರ್ಫಾನ್ ಕಾನರವರು ಆಗ್ರಹಿಸಿದ್ದಾರೆ.

ಗ್ರಾಹಕರಿಂದ ಹಗಲು ದರೋಡೆ ಮಾಡುವ ಗ್ಯಾಸ್ ಪಂಪುಗಳ ವಿರುದ್ದ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ. ಈ ಹಿಂದೆ ಗ್ಯಾಸ್ ದರ ಪರಿಷ್ಕ್ರತಗೊಂಡರೂ ಹಿಂದಿನ ದರದಂತೆ ಗ್ಯಾಸ್ ವಿತರಿಸಿ ಗ್ರಾಹಕರಿಂದ ಹಣ ಲೂಟಿ ಮಾಡಿ ಹಗಲು ದರೋಡೆ ನಡೆಸಿದ ಹಿನ್ನಲೆ ಇರುವಾಗ ಜಿಲ್ಲಾಧಿಕಾರಿಯವರು ಯಾವುದೇ ಸಂದರ್ಭದಲ್ಲಿ ದರ ಪರಿಷ್ಕರಣೆ ಗೊಂಡರೆ ಸರಕಾರದ ಸುತ್ತೋಲೆಯೊಂದಿಗೆ ಮಾಧ್ಯಮಗಳಲ್ಲಿ ಅಧಿಕೃತ ಪ್ರಕಟಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಕೆಪಿಎಸ್ ಮಿಜಾರು ಪ್ರಾಥಮಿಕ ವಿಭಾಗದಲ್ಲಿ ವಿಜ್ಞಾನ ದಿನಾಚರಣೆ

ಮೂಡಬಿದಿರೆ: ತಾಲೂಕಿನ ಮಿಜಾರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಥಮಿಕ ಶಾಲಾ ವಿಭಾಗದಲ್ಲಿ...

ಆಳ್ವಾಸ್ ನಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ ‘ಎಂಥುಸಿಯಾ’

ಬಯಲು ಶಾಲೆಯ ಶಿಕ್ಷಣ ಬದುಕಿನ ನಿಜವಾದ ಕಲಿಕೆ: ಕೋಟ್ಯಾನ್ ಮೂಡಬಿದಿರೆ: ಆಳ್ವಾಸ್...

ಮಾರ್ಚ್ 9ರಂದು ಬೋಳಂತೂರು ಬಿ.ಕೆ. ಬಾಯ್ಸ್ ವತಿಯಿಂದ ಇಫ್ತಾರ್ ಕೂಟ

ಕಲ್ಲಡ್ಕ: ಬಿ.ಕೆ. ಬಾಯ್ಸ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್(ರಿ.) ಬಂಗಾರಕೋಡಿ ಬೋಳಂತೂರು...

ಬಸ್ಸಿನಲ್ಲಿ ಸಿಕ್ಕಿದ 3ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಾರೀಸುದಾರರಿಗೆ ಒಪ್ಪಿಸಿದ ಬಸ್ ಕಂಡಕ್ಟರ್

ಮೂಡಬಿದಿರೆ: ತಮ್ಮ ಬಸ್ಸಿನಲ್ಲಿ ಸಿಕ್ಕಿದ 3ಲಕ್ಷ ಮೌಲ್ಯದ ಚಿನ್ನದ ಸರವನ್ನು ಬಸ್...