
ಉಳ್ಳಾಲ: ಹರೇಕಳ ಗ್ರಾಮ ಪಂಚಾಯಿತಿ, ಎಸ್ಬಿಐ ಫೌಂಡೇಶನ್, ಗ್ರಾಮೀಣ ಆರೋಗ್ಯ ಮತ್ತು ತರಬೇತಿ ಕೇಂದ್ರ ಹರೇಕಳ, ಸಮುದಾಯ ಆರೋಗ್ಯ ವಿಭಾಗ ಯೇನೆಪೊಯ ವೈದ್ಯಕೀಯ ಕಾಲೇಜು ದೇರಳಕಟ್ಟೆ, ಹಸಿರುದಳ, ಮಂಗಳೂರು ದೇಬ್ಬೇಲಿ ಫ್ರೆಂಡ್ಸ್ ಸರ್ಕಲ್ ಮತ್ತು ಕೋಜಪಾಡಿ ಫ್ರೆಂಡ್ಸ್ ಸರ್ಕಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಸಹಾಭಾಗಿತ್ವದಲ್ಲಿ ದಿ.ನೌಫಲ್ ದೆಬ್ಬೇಲಿ ಸ್ಮರಣಾರ್ಥ ಭಾನುವಾರ ಹರೇಕಳ ಗ್ರಾಮೀಣ ಆರೋಗ್ಯ ಹಾಗೂ ತರಬೇತಿ ಕೇಂದ್ರದಲ್ಲಿ ನಡೆದ ಬೃಹತ್ ರಕ್ತದಾನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.
ಆಲಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬ್ ನೌಫಲ್ ಹಾಶಿಮಿ ಕರಿಂಬಿ ಉದ್ಘಾಟಿಸಿ, ನಿರ್ಗತಿಕರು, ಆರ್ಥಿಕವಾಗಿ ಹಿಂದುಳಿದವರ ಪಾಲಿನ ಆಪತ್ಬಾಂಧವನಾಗಿ, ರಕ್ತದಾನಿಯಾಗಿ ಗುರುತಿಸಿಕೊಂಡಿದ್ದ ನೌಫಲ್ ನೆನಪಿನಲ್ಲಿ ಶಿಬಿರ ಅಯೋಜಿಸುತ್ತಿರುವುದು ಉತ್ತಮ ಕಾರ್ಯ ಎಂದು ತಿಳಿಸಿದರು.
ಮಂಗಳೂರು ಬ್ಲಡ್ ಡೋನರ್ಸ್ ಅಧ್ಯಕ್ಷ ನವಾಝ್ ನರಿಂಗಾನ ಮಾತನಾಡಿ, ಓರ್ವ ರಕ್ತದಾನಿ ಮೂರು ಜೀವಗಳನ್ನು ಉಳಿಸಿದ ಪ್ರತಿಫಲ ಪಡೆಯುತ್ತಾನೆ, ಓರ್ವ ಯುವಕನ ನೆನಪಿನಲ್ಲಿ ನಡೆಯುವ ಶಿಬಿರದಲ್ಲಿ ಯುವಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಗ್ರಾ.ಪಂ. ಉಪಾಧ್ಯಕ್ಷ ಎಂ.ಪಿ. ಅಬ್ದುಲ್ ಮಜೀದ್, ಮಾಜಿ ಉಪಾಧ್ಯಕ್ಷೆ ಕಲ್ಯಾಣಿ, ದೆಬ್ಬೇಲಿ ಮಸ್ಜಿದುಲ್ ಅಕ್ಸಾ ಅಧ್ಯಕ್ಷ ಅಬ್ದುಲ್ ರಝಾಕ್, ಆಲಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ರಫೀಕ್ ಹರೇಕಳ,
ಎನ್ಎಸ್ ಯುಐ ಅಧ್ಯಕ್ಷ ಸಾಹಿಲ್ ಮಂಚಿಲ, ಪ್ರ.ಕಾ. ಯು.ಟಿ.ಫರೀದ್ ಇಫ್ತಿಕಾರ್, ಹರೇಕಳ ಗ್ರಾಮೀಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಏಂಜನ್ ಜಾಯ್, ಯೇನೆಪೊಯ ಆಸ್ಪತ್ರೆಯ ಡಾ.ದೀಪ್ತಿ ಶಿಬೊ, ಡಾ.ಸುಪ್ರಿಯಾ, ಹಸಿರುದಳದ ಮುಖ್ಯಸ್ಥ ಗುರು ತಿಮ್ಮಯ್ಯ, ವ್ಯವಸ್ಥಾಪಕ ನಾಗರಾಜ್ ಬಜಾಲ್, ಮೇಲ್ವಿಚಾರಕಿ ರೇಖಾ, ಸಮಾಜ ಸೇವಕ ರಿಯಾಝ್ ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು. ಮಂಗಳೂರು ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಹರೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಓ ಮುತ್ತಪ್ಪ ಢವಳಗಿ ವಂದಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.