ದೇರಳಕಟ್ಟೆ: ಸ್ಥಳೀಯರ ಬಹುಕಾಲದ ನಿರೀಕ್ಷೆಗೆ ತೆರೆ ಎಳೆದಂತೆ HMEN ಹೈವ್ಸ್ ಸಂಸ್ಥೆಯ ವತಿಯಿಂದ HM BOOK HIVE ನ 3ನೇ ಔಟ್‌ಲೆಟ್ ಡೆರಳಕಟ್ಟೆಯಲ್ಲಿ ಭವ್ಯವಾಗಿ ಆರಂಭಗೊಳ್ಳಲಿದೆ. ಫೆಬ್ರವರಿ 8, 2026 ರಂದು ಮಧ್ಯಾಹ್ನ 12.00 ಗಂಟೆಗೆ ಹಜ್ಜಾಜ್ ಕಾಂಪ್ಲೆಕ್ಸ್ (ಫಾದರ್ ಮುಲ್ಲರ್ ಆಸ್ಪತ್ರೆ ಎದುರು) ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಇದಕ್ಕೂ ಮೊದಲು ಉಪ್ಪಳ ಹಾಗೂ ಬಂದ್ಯೋಡ್ ನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ HM BOOK HIVE ಇದೀಗ ದೇರಳಕಟ್ಟೆ ಯಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ. ಇಲ್ಲಿ ಸ್ಟೇಷನರಿ, ಕ್ರಾಫ್ಟ್ ಮತ್ತು ಡೆಕೊರೇಶನ್ ಸಾಮಗ್ರಿಗಳು, ಹ್ಯಾಂಪರ್ಸ್, ಬ್ಯಾಗ್ಸ್, ಆಟಿಕೆಗಳು, ಕ್ರೀಡಾ ಸಾಮಗ್ರಿಗಳು, ಜೆರಾಕ್ಸ್ ಹಾಗೂ ಪ್ರಿಂಟ್ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗಿವ.ಇ ದರೊಂದಿಗೆ ದೇರಳಕಟ್ಟೆಯ ಮೊದಲ ಹೆಲ್ತ್ ಕಫೆ ಮತ್ತು ಸಪ್ಲಿಮೆಂಟ್ಸ್ ಸ್ಟೋರ್ ಆಗಿ “DIET-HIVE – Diet & Delight Cafe” ಕೂಡ ಆರಂಭಗೊಳ್ಳುತ್ತಿದೆ.
ಆರೋಗ್ಯಕರ ಆಹಾರ ಪದಾರ್ಥಗಳು, ಡಯಟ್ ಮೆನುಗಳು, ಪ್ರೋಟೀನ್ ಸಪ್ಲಿಮೆಂಟ್ಸ್ ಹಾಗೂ ಮಾಸಿಕ ಸಬ್ಸ್ಕ್ರಿಪ್ಷನ್ ವ್ಯವಸ್ಥೆ ಗ್ರಾಹಕರಿಗೆ ಒದಗಿಸಲಾಗುತ್ತದೆ. ಟೈಟಾನ್ ಫಿಟ್ನೆಸ್ ಸ್ಟುಡಿಯೋ ಸಹಭಾಗಿತ್ವದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಯೋಜನೆ ಇದೆ.ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೊಸ ಆರಂಭವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.


