20 ಅಡಿ ಆಳದ ಸುರಂಗದೊಳಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಕಾಕ೯ಳ ಅಗ್ನಿಶಾಮಕದ ಸಿಬಂದಿಗಳು

Date:

ಮೂಡುಬಿದಿರೆ: ಪುತ್ತಿಗೆ ಗ್ರಾ. ಪಂಚಾಯತ್ ವ್ಯಾಪ್ತಿಯ ಬಂಗ್ಲೆ ಎಂಬಲ್ಲಿರುವ 30 ಅಡಿ ಆಳದ ಬಾವಿಯಲ್ಲಿರುವ ಸುಮಾರು 20 ಅಡಿ ಆಳದ ಸುರಂಗದೊಳಗೆ ಆಕಸ್ಮಿಕವಾಗಿ ಬಿದ್ದು ಸಿಲುಕಿಕೊಂಡ ವ್ಯಕ್ತಿಯನ್ನು ಕಾಕ೯ಳದ ಅಗ್ನಿಶಾಮಕ ಇಲಾಖೆಯ ಸಿಬಂಧಿಗಳು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಗುರುವಾರ ಅಪರಾಹ್ನ ನಡೆದಿದೆ.

ಸುಮಾರು 38 ವರ್ಷ ಪ್ರಾಯದ ರಾಧಾಕೃಷ್ಣ (ಜಾಣಪ್ಪ ಗೌಡರ ಮಗ)ಬಾವಿಯ ಸುರಂಗದೊಳಗೆ ಬಿದ್ದ ವ್ಯಕ್ತಿ. ಕಾರ್ಕಳದ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಚಂದ್ರಶೇಖರ್ ಇವರ ನೇತೃತ್ವದಲ್ಲಿ ಗುರುವಾರ ಅಪರಾಹ್ನ ಆಗಮಿಸಿದ ಸಿಬ್ಬಂದಿಗಳಾದ ಜಯ ಮೂಲ್ಯ ಹಾಗೂ ರೂಪೇಶ್ ಇವರೊಂದಿಗೆ ನಿತ್ಯಾನಂದ ಮತ್ತು ಬಸವರಾಜ ಇವರ ಸಹಕಾರದೊಂದಿಗೆ ಗುರುವಾರ ಸುಮಾರು 2 ಗಂಟೆಗಳ ಕಾಲ ಸಾಹಸಮಯ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಪುತ್ತಿಗೆ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...