ಕೊಣಾಜೆ‌ ಶಾರದೋತ್ಸವ ಧಾರ್ಮಿಕ ಸಭೆ, ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ: ಡಾ.ಬಾಲಕೃಷ್ಣ

Date:

ಕೊಣಾಜೆ: ಇಂದಿನ ಆಧುನಿಕತೆಯಲ್ಲಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ಕಾರ್ಯ ಆಗಬೇಕಿದೆ. ಯುವ ಸಮುದಾಯ ಧಾರ್ಮಿಕ, ಸಾಮಾಜಿಕ  ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಂಗಳೂರು ವಿಭಾಗದ ಅಬಕಾರಿ‌ ಜಂಟಿ ಆಯುಕ್ತರಾದ ಡಾ.ಸಿ.ಎಚ್ ಬಾಲಕೃಷ್ಣ  ಅವರು ಹೇಳಿದರು.
 ಅವರು ಕೊಣಾಜೆ ಶಾರದಾನಗರದ ಸಪ್ತಸ್ವರ ಕಲಾ ತಂಡ (ರಿ) ಕೊಣಾಜೆ,‌ಸಪ್ತಸ್ವರ ಕಲಾತಂಡ ಸೇವಾ ಟ್ರಸ್ಟ್ ಹಾಗೂ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಇದರ ಆಶ್ರಯದಲ್ಲಿ    ಸೋಮವರ ನಡೆದ ಶಾರದೋತ್ಸವ ಸಮಾರಂಭದ ಧಾರ್ಮಿಕ ಸಭೆಯನ್ನು  ಉದ್ಘಾಟಿಸಿ ಮಾತನಾಡಿದರು. 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರಾದ ಕಿರಣ್ ಕೋಡಿಕಲ್ ಅವರು,  ಹಿರಿಯರು ಪಾಲಿಸಿಕೊಂಡು ಬಂದ  ಆಚರಣೆ,‌ ಸಂಪ್ರದಾಯ, ಕಟ್ಟುಪಾಡುಗಳನ್ನು ಅರ್ಥೈಸಿಕೊಂಡು ನಮ್ಮ  ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ. ಕೊಣಾಜೆಯ ಸಪ್ತಸ್ವರ ಕಲಾ‌ತಂಡವು ಧಾರ್ಮಿಕ,  ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ  ನಿರಂತರ ಸಮಾಜಮುಖಿ ಕಾರ್ಯಗಳೊಂದಿಗೆ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಮುತ್ತು ಎನ್ ಶೆಟ್ಟಿ ಅವರಿಗೆ ಗ್ರಾಮ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಹೇಮಲತಾ ದಿನೇಶ್, ಶಿಕ್ಷಕರಾದ ಚಂದ್ರಶೇಖರ್ ಸಿ.ಎಚ್, ವಿಜೇತ್ ಶೆಟ್ಟಿ ಮಂಜನಾಡಿ ಹಾಗೂ ಶೈಕ್ಷಣಿಕ ಸಾಧಕರಾದ ವಂಶಿ ಗಟ್ಟಿ, ಭುವಿತ, ನಿಶಾ ಅಂಜುಮ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಪುರಂದರ ಆರ್ಯಾಪು,‌ ಬಿಜೆಪಿ ಮಂಡಲ ಅಧ್ಯಕ್ದರಾದ ಜಗದೀಶ್ ಆಳ್ವ ಕುವೆತ್ತಬೈಲ್, ಶಾರದೋತ್ಸವ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಯುವ ಉದ್ಯಮಿ ಜಗದೀಶ್ ಪಲಾಯಿ, ಸಾಮಾಜಿಕ ಕಾರ್ಯಕರ್ತ ಯಶುಪಕ್ಕಳ ತಲಪಾಡಿ,‌ ಕೈರಂಗಳ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಚಂದ್ರಶೇಖರ್ ಮುದುಂಗಾರುಕಟ್ಟೆ, ಗೌರವಾಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರ್, ಮುಖಂಡರಾದ ಮಂಜುನಾಥ ಮಾಣೈ, ನವೀನ್ ರೈ ಸಂಪಿಲ, ಭುವನೇಶ್ವರಿ ಮಾತೃ ಮಂಡಳಿಯ ಅಧ್ಯಕ್ಷರಾದ ಸುಮಂಗಲ, ಸಪ್ತಸ್ವರ ಕಲಾ ತಂಡದ ಅಧ್ಯಕ್ಷರಾದ ರಿತೇಶ್ ಶೆಟ್ಟಿ, ಸಪ್ತಸ್ವರ ಸೇವಾ ಟ್ರಸ್ಟ್ ನ ಅಧ್ಯಕ್ಣರಾದ ಸುರೇಂದ್ರ ಬೊಳ್ಳಕುಮೇರು ಮೊದಲಾದವರು ಉಪಸ್ಥಿತರಿದ್ದರು.
ಸಪ್ತಸ್ವರ ಕಲಾತಂಡದ ದೀಕ್ಷಿತ್ ಸ್ಬಾಗತಿಸಿದರು.‌ ಪ್ರವೀಣ್ ಕುರ್ನಾಡು ವಂದಿಸಿದರು.‌ ಭಾಸ್ಕರ ನಾಟೆಕಲ್ ಅವರು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕೊಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12ನೇ ವಾರ್ಷಿಕೋತ್ಸವ

ಬಜ್ಪೆ: ನಾಗರಿಕ ಸೇವಾ ಸಮಿತಿ (ರಿ.) ಅಂಬೇಡ್ಕರ್ ನಗರ ಕರಂಬಾರು 12...

ಚಿಗಟೇರಿ ಆಸ್ಪತ್ರೆಯ ಅವ್ಯವಸ್ಥೆ ಬಯಲಿಗೆ! ತಕ್ಷಣ ಕ್ರಮಕ್ಕೆ ಅಫ್ಸರ್ ಕೊಡ್ಲಿಪೇಟೆ ಒತ್ತಾಯ

ದಾವಣಗೆರೆ, ಎಪ್ರಿಲ್ 17: ನಗರದ ಪ್ರಮುಖ ಆರೋಗ್ಯ ಕೇಂದ್ರವಾದ ಚಿಗಟೇರಿ ಜಿಲ್ಲಾ...

ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಮೆರವಣಿಗೆ

ಮೂಡಬಿದಿರೆ: ಇಲ್ಲಿನ ಶ್ರೀ ಮಹಾವೀರ ಕಾಲೇಜು ಅರವತ್ತು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ...

ಸಿಬಿಎಸ್‌ಇ ಫಲಿತಾಂಶ: ಮೂಡಬಿದಿರೆ ಆಳ್ವಾಸ್ ನ 46 ವಿದ್ಯಾರ್ಥಿಗಳಿಗೆ 95% ಕ್ಕೂ ಹೆಚ್ಚು ಅಂಕ: ನಾಲ್ಕು ವಿದ್ಯಾರ್ಥಿಗಳು ಶೇ 99ರ ಸಾಧನೆ

ಮೂಡಬಿದಿರೆ: ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್‌ಇ) ನಡೆಸಿದ ಹತ್ತನೆ...