ಕಲ್ಲಿಕೋಟೆ: ದಕ್ಷಿಣ ಭಾರತದ ಪ್ರಸಿದ್ದ ಝಿಯಾರತ್ ಕೇಂದ್ರವಾದ ಮಡವೂರ್ ಸಿ.ಎಂ. ಮಖಾಂ ಶರೀಫಿನಲ್ಲಿ ಅಂತ್ಯವಿಶ್ರಾಂತಿ ಹೂಂದಿರುವ ಸಿಎಂ ಮುಹಮ್ಮದ್ ಅಬೂಬಕರ್ ಮುಸ್ಲಿಯಾರ್ (ಖ.ಸಿ.)ರವರ 36ನೇ ಉರೂಸ್ ಸಮಾರಂಭವು 2026 ಮಾರ್ಚ್ 24ರಿಂದ ಎಪ್ರಿಲ್ 2ರವರೆಗೆ ನಡೆಯಲಿದೆ.

ಮಾರ್ಚ್ 24ರಂದು ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣ ಹಾಗೂ ಮಖಾಂ ಝಿಯಾರತ್ ನಂತರ ಖತ್ಮುಲ್ ಖುರ್ಆನ್ ಪಾರಾಯಣ ನಡೆಯಲಿದೆ. ಎಪ್ರಿಲ್ 1ರಂದು ಸಂಜೆ 7 ಗಂಟೆಗೆ ದ್ಸಿಕ್ರ್ ದುಆ ಸಮ್ಮೇಳನ ನಡೆಯಲಿದ್ದು, ಎಪ್ರಿಲ್ 2ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರ ತನಕ ಅನ್ನದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


