ಮದೀನಾ: ಬಸ್ ಬೆಂಕಿಗಾಹುತಿಯಾಗಿ ಮೃತಪಟ್ಟ ಉಮ್ರಾ ಯಾತ್ರಿಕರ ಮೃತದೇಹಗಳನ್ನು ಜನ್ನತುಲ್ ಬಖಿಹ್ ಖಬರ್ಸ್ತಾನದಲ್ಲಿ ಅಂತ್ಯಕ್ರಿಯೆ

Date:

ಮದೀನಾ: ಕಳೆದ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಉಮ್ರಾ ಯಾತ್ರಿಕರ ಮೃತದೇಹಗಳನ್ನು ಮದೀನಾದ ಜನ್ನತುಲ್ ಬಖಿಹ್ ಖಬರುಸ್ತಾನದಲ್ಲಿ ದಫನ ಮಾಡಲಾಯಿತು.

ಮಸ್ಜಿದುನ್ನಬವಿಯಲ್ಲಿ ಇಮಾಮ್ ಶೈಖ್ ಅಬ್ದುಲ್ ಬಾರಿ ಅಲ್ ತುಬೈತಿ ನೇತೃತ್ವದಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿದ ನಂತರ ಸೌದಿ ಅರೇಬಿಯಾದ ಅಧಿಕಾರಿಗಳು ಮತ್ತು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳ ಮುಂದಾಳತ್ವದಲ್ಲಿ ಗೌರವಪೂರ್ವಕ ಅಂತ್ಯಕ್ರಿಯೆ ನಡೆಯಿತು.

ಹೈದರಾಬಾದಿನಿಂದ ಆಗಮಿಸಿದ್ದ ಉಮ್ರಾ ಯಾತ್ರಿಕರು ಮಂಗಳವಾರ ಬೆಳಗಿನ ಜಾವ ಮಕ್ಕಾದಿಂದ ಮದೀನಾ ಪ್ರಯಾಣಿಸುತ್ತಿದ್ದ ಬಸ್ ಇಂಧನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗಾಹುತಿಯಾಗಿ 42 ಉಮ್ರಾ ಯಾತ್ರಿಕರು ಮತ್ತು 2 ಸಂದರ್ಶಕ ವೀಸಾ ಯಾತ್ರಿಕರು ಮರಣ ಹೊಂದಿದ್ದು ಒಬ್ಬ ವ್ಯಕ್ತಿ ಬದುಕಿ ಉಳಿದಿದ್ದರು.
ಮೃತರ ಕುಟುಂಬಕ್ಕೆ ನೆರವು ನೀಡಲು ಜಿದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್‌ ಸಹಾಯವಾಣಿ ಕೇಂದ್ರ ಆರಂಭಿಸಿದ್ದು,
ತೆಲಂಗಾಣ ರಾಜ್ಯ ಸರ್ಕಾರವು ಸಚಿವ ಅಜರುದ್ದೀನ್ ನೇತೃತ್ವದ ನಿಯೋಗವನ್ನು ಮದೀನಾಕ್ಕೆ ಕಳುಹಿಸಿ ಮೃತರ ಕುಟುಂಬಕ್ಕೆ ಕಾನೂನು ಪ್ರಕ್ರಿಯೆ ನಡೆಸಲು ನೆರವಾಗಿದ್ದರು.

LEAVE A REPLY

Please enter your comment!
Please enter your name here

Share post:

Subscribe

spot_imgspot_img

Popular

More like this
Related

ಮೂರು ವರ್ಷಗಳ ಬಳಿಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್

ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮೂರು ವರ್ಷಗಳ ಬಳಿಕ ಕೆಪಿಸಿಸಿ...

ಕನಿಷ್ಠ ಎರಡು ಪರಿಷತ್ ಸ್ಥಾನ, ಒಂದು ರಾಜ್ಯಸಭಾ ಸ್ಥಾನ ಮುಸ್ಲಿಮರಿಗೆ ಕೊಡಿ: ಕಾಂಗ್ರೆಸ್‌ಗೆ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಗ್ರಹ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗಳು ಹತ್ತಿರವಾಗುತ್ತಿರುವ ಬೆನ್ನಲ್ಲೇ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 42 ರೂ. ಏರಿಕೆ

ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಇಂದಿನಿಂದಲೇ ಜಾರಿಗೆ...